ವೈದ್ಯರ ಸೇವಾ ಮನೋಭಾವ ಸಮಾಜಕ್ಕೆ ಪೂರಕ

ಗುಳೇದಗುಡ್ಡದ ಗಂಗಮ್ಮ ಅಂಗಡಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವೈದ್ಯರ ದಿನಾಚರಣೆ ಆಚರಿಸಲಾಯಿತು. ಡಾ.ಚಂದ್ರಕಾಂತ ಜವಳಿ, ಶಾಲೆ ನಿರ್ದೇಶಕರಾದ ರವಿ ಅಂಗಡಿ, ಮಾನಿಕ್‌ಲಾಲ ಕಾವಡೆ, ಶಾಲೆಯ ಮುಖ್ಯೊಪಾಧ್ಯಾಯಿನಿ ಸುಜಾತಾ ಕರಡಿಗುಡ್ಡ, ಶಿಕ್ಷಕರಾದ ಅಮೃತಾ ಸಿದ್ದಮಲ್ಲ, ಲೀಲಾ ಚಿಂದಿ, ಶೋಭಾ ದಡಿ, ನೀಲಮ್ಮ ಹುಳಬುತ್ತಿ ಇತರರಿದ್ದರು.
ಗುಳೇದಗುಡ್ಡದ ಗಂಗಮ್ಮ ಅಂಗಡಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ವೈದ್ಯರ ದಿನಾಚರಣೆ ಆಚರಿಸಲಾಯಿತು. ಡಾ.ಚಂದ್ರಕಾಂತ ಜವಳಿ, ಶಾಲೆ ನಿರ್ದೇಶಕರಾದ ರವಿ ಅಂಗಡಿ, ಮಾನಿಕ್‌ಲಾಲ ಕಾವಡೆ, ಶಾಲೆಯ ಮುಖ್ಯೊಪಾಧ್ಯಾಯಿನಿ ಸುಜಾತಾ ಕರಡಿಗುಡ್ಡ, ಶಿಕ್ಷಕರಾದ ಅಮೃತಾ ಸಿದ್ದಮಲ್ಲ, ಲೀಲಾ ಚಿಂದಿ, ಶೋಭಾ ದಡಿ, ನೀಲಮ್ಮ ಹುಳಬುತ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಲೆ ನಿರ್ದೇಶಕ ರವಿ ಅಂಗಡಿ ಹೇಳಿಕೆ
  • ಕಾಯಿಲೆಗಳನ್ನು ಗುಣಪಡಿಸುವ ವೈದ್ಯ ವೃತ್ತಿ ಅತ್ಯಂತ್ಯ ಪವಿತ್ರವಾದದ್ದು.
  • ಪ್ರತಿಯೊಬ್ಬರು ಒಂದಿಲ್ಲೊಂದು ದಿನ ವೈದ್ಯರ ಸೇವೆಯನ್ನು ಪಡೆದಿರುತ್ತೇವೆ
ಗುಳೇದಗುಡ್ಡ: ಕಾಯಿಲೆಗಳನ್ನು ಗುಣಪಡಿಸುವ ವೈದ್ಯ ವೃತ್ತಿ ಅತ್ಯಂತ್ಯ ಪವಿತ್ರವಾದದ್ದು. ವೈದ್ಯರು ಹಗಲಿರುಳು ರೋಗಿಗಳ ಆರೈಕೆ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಶಾಲೆ ನಿರ್ದೇಶಕ ರವಿ ಅಂಗಡಿ ಹೇಳಿದರು.
ಪಟ್ಟಣದ ಗಂಗಮ್ಮ ಅಂಗಡಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಒಂದಿಲ್ಲೊಂದು ದಿನ ವೈದ್ಯರ ಸೇವೆಯನ್ನು ಪಡೆದಿರುತ್ತೇವೆ. ಅವರ ಸೇವಾ ಮನೋಭಾವ ಸಮಾಜಕ್ಕೆ ಪೂರಕವಾಗಿದೆ ಎಂದರು.
ಡಾ. ಚಂದ್ರಕಾಂತ ಜವಳಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಗುರಿಯನ್ನು ಹೊಂದಿ ಅಭ್ಯಾಸ ಮಾಡಬೇಕು ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹೊರಗಿನ ತಿಂಡಿಯನ್ನು, ಚಾಕ್‌ಲೇಟ್, ಎಣ್ಣೆ ಪದಾರ್ಥಗಳನ್ನು ತಿನ್ನುವುದು ಬಿಡಬೇಕು. ವೈದ್ಯರಾಗಬೇಕು ಎಂಬ ಗುರಿಹೊಂದಿದ ವಿದ್ಯಾರ್ಥಿಗಳು ಉತ್ತಮವಾಗಿ ಓದಿ, ಸಮಾಜಕ್ಕೆ ಸೇವೆ ಸಲ್ಲಿಸುವ ವೈದ್ಯರಾಬೇಕು ಎಂದರು.
ಶಾಲೆ ನಿರ್ದೇಶಕ ಮಾನಿಕ್‌ಲಾಲ ಕಾವಡೆ, ಶಾಲೆಯ ಮುಖ್ಯೊಪಾಧ್ಯಾಯಿನಿ ಸುಜಾತಾ ಕರಡಿಗುಡ್ಡ, ಶಿಕ್ಷಕರಾದ ಅಮೃತಾ ಸಿದ್ದಮಲ್ಲ, ಲೀಲಾ ಚಿಂದಿ, ಶೋಭಾ ದಡಿ, ನೀಲಮ್ಮ ಹುಳಬುತ್ತಿ, ಸೀಮಾ ಸಾವಳಗಿಮಠ, ಸಾಧನಾ ಕರಡಿಗುಡ್ಡ, ಮಂಜುಳಾ ಉಮಚಗಿ, ಕವಿತಾ ಪೂಜಾರ, ಪಲ್ಲವಿ ಕೋರಿ, ಸುನೀತಾ ನೇಮದಿ, ಶಿವಲೀಲಾ ನರಸಾಪುರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net