ಭಾನುವಾರವೂ ಬಿತ್ತನೆ ಬೀಜ ವಿತರಣೆ

ಬಾದಾಮಿಯ ರೈತ ಸಂಪರ್ಕ ಕೇಂದ್ರದಲ್ಲಿ ಮಹಾಂತೇಶ ಹಟ್ಟಿ ರೈತರಿಗೆ ಬೀಜ ವಿತರಣೆ ಮಾಡುತ್ತಿರುವುದು.
ಬಾದಾಮಿಯ ರೈತ ಸಂಪರ್ಕ ಕೇಂದ್ರದಲ್ಲಿ ಮಹಾಂತೇಶ ಹಟ್ಟಿ ರೈತರಿಗೆ ಬೀಜ ವಿತರಣೆ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾಂತೇಶ ಲಕ್ಷ್ಮಣ ಹಟ್ಟಿ ಮಾಹಿತಿ
  • ರೈತರಿಗೆ ಅನುಕೂಲ ಕ್ರಮ
ಬಾದಾಮಿ: ಮುಂಗಾರು ಬಿತ್ತನೆ ಹಿನ್ನೆಲೆ ರೈತರ ಬೇಡಿಕೆಗೆ ಸ್ಪಂದಿಸಿ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಭಾನುವಾರವೂ ಸಹ ಬೀಜ ವಿತರಣೆ ಮುಂದುವರಿಸಲಾಯಿತು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಲಕ್ಷ್ಮಣ ಹಟ್ಟಿ ತಿಳಿಸಿದರು.
ಪಟ್ಟಣದ ಎಪಿಎಂಸಿ ಎದುರಿನ ರೈತ ಸಂಪರ್ಕ ಕೇಂದ್ರದಲ್ಲಿ ಮಾತನಾಡಿದ ಅವರು, ಇದುವರೆಗೆ 1125 ರೈತರಿಗೆ ವಿವಿಧ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ಗೋವಿನ ಜೋಳ 4.20 ಕ್ವಿಂಟಾಲ್ ಸರಬರಾಜು , 3.10 ಕ್ವಿಂಟಾಲ್ ವಿತರಣೆ, ಸೂರ್ಯಕಾಂತಿ-4.50 ಕ್ವಿಂಟಾಲ್ ಸರಬರಾಜು, 2.66 ಕ್ವಿಂಟಾಲ್ ವಿತರಣೆ, ತೊಗರಿ-9.60 ಕ್ವಿಂಟಾಲ್ ಸರಬರಾಜು, 5.10ಕ್ವಿಂಟಾಲ್ ವಿತರಣೆ, ಸಜ್ಜೆ-8.25 ಕ್ವಿಂಟಾಲ್ ಸರಬರಾಜು, 4.32 ಕ್ವಿಂಟಾಲ್ ವಿತರಣೆ ಮಾಡಲಾಗಿದೆ ಎಂದು ವಿವರಿಸಿದರು.
ತೊಗರಿ ಬೀಜಗಳನ್ನು ಪ್ರಾಯೋಗಿಕವಾಗಿ ಆಯ್ದ ರೈತರಿಗೆ ನೀಡಲಾಗುತ್ತಿದ್ದು, ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು. ರೈತರು ತಮ್ಮ ಆಯ್ಕೆಯ ಕಂಪನಿಯ ಬೀಜಗಳನ್ನು ಖರೀದಿಸಲು ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದರು.
ಸರ್ಕಾರದ ನಿಯಮಾನುಸಾರ ಎಫ್.ಐ.ಡಿ. ಮೂಲಕ ಪ್ರತಿ ರೈತನಿಗೆ ಒಂದು ಎಕರೆಗೆ ಒಂದು ಚೀಲ ಮಾತ್ರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಎಲ್ಲ ರೈತರಿಗೆ ಸಮಾನವಾಗಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net