ಶಿಕ್ಷಣದೊಂದಿಗೆ ಶಿಸ್ತು, ಗುರಿ ಸಾಧನೆ ಅಗತ್ಯ

ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಬನಶಂಕರಿ ದೇವಾಲಯದಲ್ಲಿ ದೇವಾಂಗ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶ್ರೀಶೈಲ ಬುದ್ನಿ, ರಾಮಪ್ಪ ಕಾಮಗೊಂಡ, ಶ್ರೀಶೈಲ ಕೋಳಿ, ಶಂಕರ ಮರೆಗುದ್ದಿ, ರುದ್ರಪ್ಪ ಕೋಲಾರ ಇತರರಿದ್ದರು.
ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಬನಶಂಕರಿ ದೇವಾಲಯದಲ್ಲಿ ದೇವಾಂಗ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶ್ರೀಶೈಲ ಬುದ್ನಿ, ರಾಮಪ್ಪ ಕಾಮಗೊಂಡ, ಶ್ರೀಶೈಲ ಕೋಳಿ, ಶಂಕರ ಮರೆಗುದ್ದಿ, ರುದ್ರಪ್ಪ ಕೋಲಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಶೈಲ ಬುದ್ನಿ ಹೇಳಿಕೆ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಜಮಖಂಡಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು, ಸಮಯ ಪಾಲನೆ ಹಾಗೂ ಗುರಿ ಸಾಧನೆಯ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಶ್ರೀಶೈಲ ಬುದ್ನಿ ಹೇಳಿದರು.
ತಾಲೂಕಿನ ಹುನ್ನೂರು ಗ್ರಾಮದ ಬನಶಂಕರಿ ದೇವಾಲಯದಲ್ಲಿ ದೇವಾಂಗ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೂ ಅಪಾರ ಪ್ರತಿಭೆ ಅಡಗಿದ್ದು, ಪೋಷಕರು ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬಹುದು. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೂರವಿದ್ದು ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು. ಪರಿಶ್ರಮ, ಆತ್ಮವಿಶ್ವಾಸ ಮತ್ತು ಶಿಸ್ತು ಇದ್ದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ವಿವಿಧ ಶಾಲೆಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸಾಧನೆ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಗ್ರಾಮದ ಶಿವಾನಿ ಎಂ. ಹೊಳ್ಳೂರು ಅವರನ್ನು ವಿಶೇಷವಾಗಿ ಗೌರವಿಸಲಾಯಿತು.
ರಾಮಪ್ಪ ಕಾಮಗೊಂಡ, ಶ್ರೀಶೈಲ ಕೋಳಿ, ಶಂಕರ ಮರೆಗುದ್ದಿ, ರುದ್ರಪ್ಪ ಕೋಲಾರ, ಈರಪ್ಪ ಹನಗಂಡಿ, ಸಿದ್ದಮಲ್ಲಪ್ಪ ಗಡೆಪ್ಪನವರ, ಕಾಡಪ್ಪ ಮರೆಗುದ್ದಿ, ಶ್ರೀಶೈಲ ಹನಗಂಡಿ, ರಾಜು ಕೋಲಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net