ಅಂಗವಿಕಲತೆ ಸಾಧನೆಗೆ ಅಡ್ಡಿಯಲ್ಲ

ಲೋಕಾಪುರ ಪಟ್ಟಣದ ಅಂತಾರಾಷ್ಟ್ರೀಯ ಪ್ಯಾರ ಕ್ರೀಡಾಪಟು ಲೋಕಣ್ಣ ಹೊಳಬಸಪ್ಪ ಪರಣ್ಣನವರ ಅವರನ್ನು ಗೆಳೆಯರ ಬಗಳದ ವತಿಯಿಂದ ಸನ್ಮಾನಿಸಲಾಯಿತು. ಆಯ್.ಆರ್.ಮಠಪತಿ, ಶಿವಾನಂದ ಉದಪುಡಿ, ರವಿ ಬೋಳಿಶೆಟ್ಟಿ, ಮೈಬೂಬ ರಾಮದುರ್ಗ, ರಾಜು ಕಡೇಬಾಗಿಲ ಇತರರಿದ್ದರು.
ಲೋಕಾಪುರ ಪಟ್ಟಣದ ಅಂತಾರಾಷ್ಟ್ರೀಯ ಪ್ಯಾರ ಕ್ರೀಡಾಪಟು ಲೋಕಣ್ಣ ಹೊಳಬಸಪ್ಪ ಪರಣ್ಣನವರ ಅವರನ್ನು ಗೆಳೆಯರ ಬಗಳದ ವತಿಯಿಂದ ಸನ್ಮಾನಿಸಲಾಯಿತು. ಆಯ್.ಆರ್.ಮಠಪತಿ, ಶಿವಾನಂದ ಉದಪುಡಿ, ರವಿ ಬೋಳಿಶೆಟ್ಟಿ, ಮೈಬೂಬ ರಾಮದುರ್ಗ, ರಾಜು ಕಡೇಬಾಗಿಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲೋಕಣ್ಣ ಪರಣ್ಣನವರಿಗೆ ಸನ್ಮಾನ
  • ಪ್ಯಾರ ಕ್ರೀಡಾಪಟು
ಲೋಕಾಪುರ: ದೃಢ ಆತ್ಮವಿಶ್ವಾಸ, ಕಠಿಣ ಪರಿಶ್ರಮ ಮತ್ತು ಛಲ ಇದ್ದರೆ ಯಾವುದೇ ವ್ಯಕ್ತಿ ದೊಡ್ಡ ಸಾಧನೆ ಮಾಡಬಹುದು ಎಂದು ಹಾರುಗೇರಿ ವಿಚಾರ ವಾಹಿನಿಯ ಮುಖ್ಯಸ್ಥ ಆಯ್.ಆರ್. ಮಠಪತಿ ಹೇಳಿದರು. 
ಪಟ್ಟಣದ ಗಣ್ಯ ಉದ್ಯಮಿ ರವಿ ಬೋಳಿಶೆಟ್ಟಿ ನಿವಾಸದಲ್ಲಿ ಅಂತಾರಾಷ್ಟ್ರೀಯ ಪ್ಯಾರ ಕ್ರೀಡಾಪಟು, ವಿಶ್ವ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನ ಪಡೆದ ಲೋಕಣ್ಣ ಹೊಳಬಸಪ್ಪ ಪರಣ್ಣನವರಿಗೆ ಗೆಳೆಯರ ಬಳಗದಿಂದ ಸನ್ಮಾನಿಸಿ ಮಾತನಾಡಿದ ಅವರು, ಅಂಗವೈಕಲ್ಯವು ದೈಹಿಕ ಮಿತಿಯಷ್ಟೇ ಹೊರತು ಸಾಧನೆಗೆ ಅಡ್ಡಿಯಲ್ಲ. ಆದ್ದರಿಂದ ಅಂಗವೈಕಲ್ಯವನ್ನು ನೂನ್ಯತೆ ಎಂದು ಭಾವಿಸದೆ ಸಾಧನೆಯ ಮಾರ್ಗದತ್ತ ಸಾಗಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಅಂಗವೈಕಲ್ಯ ದೌರ್ಬಲ್ಯವಲ್ಲ, ಅದನ್ನು ಸವಾಲಾಗಿ ಸ್ವೀಕರಿಸಿ ಶ್ರದ್ಧೆ, ಆಸಕ್ತಿ ಮತ್ತು ಏಕಾಗ್ರತೆಯಿಂದ ಸಾಧನೆ ಮಾಡಿದ ಉದಾಹರಣೆ ಲೋಕಣ್ಣ ಪರಣ್ಣನವರು ಎಂದು ಹೇಳಿದರು.
ರವಿ ಬೋಳಿಶೆಟ್ಟಿ, ಮೈಬೂಬ ರಾಮದುರ್ಗ, ಅಪ್ಪಣ್ಣ ಚಿಗರಡ್ಡಿ, ಜಮಾಲಸಾಬ ಕುಂದೇನಾಯ್ಕ, ರಾಜು ಕಡೇಬಾಗಿಲ, ರುದ್ರಪ್ಪ ನೀಲಿ ಸೇರಿ ಅನೇಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net