ವಿದ್ಯಾರ್ಥಿಗಳ ಸಾಧನೆಗೆ ಶ್ರದ್ಧೆ ಮುಖ್ಯ

 ಗುಳೇದಗಡ್ಡದ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯಮಿ ಪರಶುರಾಮ ಪವಾರ ಅವರು ಉಚಿತವಾಗಿ ನೋಟ್ ಪುಸ್ತಕ ಹಾಗೂ ಪ್ರವೇಶ ಶುಲ್ಕ ವಿತರಿಸಿದರು. ಪ್ರಾಚಾರ್ಯ ವಿಠ್ಠಲ ಕಳಸಾ, ನಿವತ್ತ ಮುಖ್ಯೋಪಾಧ್ಯಾಯ ಪಿ.ಆರ್. ಬಂತಲ, ಎಸ್.ಎಚ್. ಮಡಿವಾಳರ, ಬಿ.ವೈ. ಗೌಡರ, ಡಿ.ವಾಯ್. ಹಾದಿಕಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪರಶುರಾಮ ಪವಾರ ಹೇಳಿಕೆ
  • ಉಚಿತ ನೋಟ್ ಪುಸ್ತಕ ವಿತರಣೆ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಅತ್ಯಂತ ಅಗತ್ಯ
ಗುಳೇದಗುಡ್ಡ: ವಿದ್ಯಾರ್ಥಿಗಳು ಶ್ರದ್ಧೆಯಿಂದ ಹಾಗೂ ನಿರಂತರ ಅಧ್ಯಯನ ಮಾಡಿದರೆ ಯಾವುದೇ ಗುರಿ ಸಾಧಿಸಲು ಸಾಧ್ಯವೆಂದು ಉದ್ಯಮಿ ಪರಶುರಾಮ ಪವಾರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪ್ರವೇಶ ಶುಲ್ಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಅತ್ಯಂತ ಅಗತ್ಯವಾಗಿದ್ದು, ಅದರಿಂದ ಅವರ ಸಾಧನೆಗೆ ದಾರಿ ಸುಗಮವಾಗುತ್ತದೆ ಎಂದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸುವ ಕಾಲೇಜಿನ ವಿದ್ಯಾರ್ಥಿಗಳಿಗೆ ತಲಾ 10,000 ರೂ. ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದರು.
ಪ್ರಾಚಾರ್ಯ ವಿಠ್ಠಲ ಕಳಸಾ ಮಾತನಾಡಿ, ಪರಶುರಾಮ ಪವಾರ ಅವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುತ್ತಿರುವ ಸಹಾಯ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದು ಹೇಳಿದರು.
ನಿವತ್ತ ಮುಖ್ಯೋಪಾಧ್ಯಾಯ ಪಿ.ಆರ್. ಬಂತಲ, ಎಸ್.ಎಚ್. ಮಡಿವಾಳರ, ಬಿ.ವೈ. ಗೌಡರ, ಡಿ.ವಾಯ್. ಹಾದಿಕಾರ, ಈರಣ್ಣ ದೊಡಮನಿ, ಎಸ್.ಬಿ. ಕೊಳ್ಳಿ, ಜೆ.ಬಿ. ಯಡವಣ್ಣವರ ಸೇರಿ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net