ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಅಭಾವ

ಇಳಕಲ್ಲದ ದೇವರ ದಾಸಿಮಯ್ಯ ವೃತ್ತದ ಸಮೀಪದ ಕಾಳಗಿ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ಪಡೆಯಲು ಕ್ಯಾನ್ ಹಿಡಿದು ಸಾಲಿನಲ್ಲಿ ನಿಂತಿರುವ ವಾಹನ ಸವಾರರು.
ಇಳಕಲ್ಲದ ದೇವರ ದಾಸಿಮಯ್ಯ ವೃತ್ತದ ಸಮೀಪದ ಕಾಳಗಿ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ಪಡೆಯಲು ಕ್ಯಾನ್ ಹಿಡಿದು ಸಾಲಿನಲ್ಲಿ ನಿಂತಿರುವ ವಾಹನ ಸವಾರರು.
Published on

ಪ್ರಮುಖ ಮುಖ್ಯಾಂಶಗಳು

  • ವಾಹನ ಸವಾರರು
  • ರೈತರಿಗೆ ಸಂಕಷ್ಟ
ಇಳಕಲ್ಲ: ನಗರದಲ್ಲಿ ಡೀಸೆಲ್ ಕೊರತೆಯಿಂದ ವಾಹನ ಸವಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಎರಡು-ಮೂರು ದಿನಗಳಿಂದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಲಭ್ಯವಿಲ್ಲದೆ ಪರದಾಟದ ಸ್ಥಿತಿ ಉಂಟಾಗಿದೆ.
ಎಸ್.ವಿ.ಎಂ. ಕಾಲೇಜ್ ಎದುರಿನ ಬಿಜ್ಜಳ ಪೆಟ್ರೋಲ್ ಬಂಕ್ ಹಾಗೂ ಕಂಠಿ ಸರ್ಕಲ್‌ನ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ವಾಹನ ಸವಾರರು ಇತರ ಬಂಕ್‌ಗಳಿಗೆ ಧಾವಿಸುತ್ತಿದ್ದಾರೆ.
ಗೊರಬಾಳ ನಾಕಾ ಹಾಗೂ ದೇವರ ದಾಸಿಮಯ್ಯ ವೃತ್ತದ ಸಮೀಪದ ಕಾಳಗಿ ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರ ಡೀಸೆಲ್ ದೊರೆಯುತ್ತಿದ್ದು, ಜನರು ಕ್ಯಾನ್‌ಗಳನ್ನು ತೆಗೆದುಕೊಂಡು ಸಾಲಿನಲ್ಲಿ ನಿಂತು ಡೀಸೆಲ್ ಪಡೆಯಲು ಹರಸಾಹಸಪಡುತ್ತಿದ್ದಾರೆ.
ಇದರಿಂದ ನಗರದಲ್ಲಿ ತಾತ್ಕಾಲಿಕ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್ ಸರಬರಾಜು ಮಾತ್ರ ಸಾಮಾನ್ಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net