ಶಾಸಕ ಚಿಮ್ಮನಕಟ್ಟಿಯವರಿಂದ ಕ್ಷೇತ್ರದ ಅಭಿವೃದ್ಧಿ

ಗುಳೇದಗುಡ್ಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರ ಜನ್ಮದಿನ ನಿಮಿತ್ತ ಅವರ ಅಭಿಮಾನಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ರೋಗಿಗಳಿಗೆ ಹಾಲು ಬ್ರೇಡ್, ಬಿಸ್ಕೇಟ್ ವಿತರಿಸಲಾಯಿತು. ಸಂಜಯ ಬರಗುಂಡಿ, ವೈ.ಆರ್. ಹೆಬ್ಬಳ್ಳಿ, ರಾಜು ತಾಪಡಿಯಾ, ಗೋಪಾಲ ಭಟ್ಟಡ, ರಮೇಶ ಬೂದಿಹಾಳ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಹೇಳಿಕೆ
  • ಜನ್ಮದಿನ ನಿಮಿತ್ತ ರೋಗಿಗಳಿಗೆ ಹಾಲು, ಬ್ರೇಡ್ ವಿತರಣೆ
  • ಕ್ಷೇತ್ರದ 5 ಕಡೆಗಳಲ್ಲಿ ಕೆಪಿಎಸ್ ಶಾಲೆ ಮಂಜೂರು
ಗುಳೇದಗುಡ್ಡ : ಶಾಸಕ ಭೀಮಸೇನ ಚಿಮ್ಮನಕಟ್ಟಿಯವರ 43ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಬ್ರೇಡ್, ಬಿಸ್ಕೆಟ್ ವಿತರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಮಾತನಾಡಿ, ಶಾಸಕ ಭೀಮಸೇನ ಚಿಮ್ಮನಕಟ್ಟಿಯವರು ಕ್ಷೇತ್ರದ ಶಾಸಕರಾದ ಮೇಲೆ ಇದುವರೆಗೂ 440 ಕೋಟಿ ರೂ. ಅನುದಾನ ತಂದಿದ್ದು, ಕ್ಷೇತ್ರದ 5 ಕಡೆಗಳಲ್ಲಿ ಕೆಪಿಎಸ್ ಶಾಲೆ ಮಂಜೂರು ಮಾಡಿಸಿದ್ದಾರೆ. ಅಲ್ಲದೇ ಪದವಿ ಕಾಲೇಜಿಗೆ ಅನುದಾನ, ಇಂದಿರಾ ಕ್ಯಾಂಟೀನ್, ಪಶು ಆಸ್ಪತ್ರೆಯ ಕೊಠಡಿ ನಿರ್ಮಾಣ ಸೇರಿ ನಾನಾ ಅಭಿವೃದ್ಧಿ ಕಾರ್ಯಗಳಲ್ಲಿ ಮಾಡಿದ್ದಾರೆ ಎಂದು ಹೇಳಿದರು.
ವೈ.ಆರ್. ಹೆಬ್ಬಳ್ಳಿ, ರಾಜು ತಾಪಡಿಯಾ, ಗೋಪಾಲ ಭಟ್ಟಡ, ರಮೇಶ ಬೂದಿಹಾಳ, ಶಿವಾನಂದ ಮಳ್ಳಿಮಠ, ರಂಗನಾಥ ಮೊಖಾಶಿ, ರಾಜಶೇಖರ ಹೆಬ್ಬಳ್ಳಿ, ಕೀರಪ್ಪ ತಳವಾರ, ಜಮೀರ ಮೌಲ್ವಿ, ಚಿದಾನಂದ ಕಾಟವಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net