ತಾಂತ್ರಿಕತೆಗೆ ಹೊಂದುವಂತ ಕೌಶಲ ಬೆಳೆಸಿಕೊಳ್ಳಿ

 ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆದ ೨೪ನೇ ಬ್ಯಾಚ್‌ನ ಔದ್ಯೋಗಿಕ ತರಬೇತಿ ಪತ್ರಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡ ಪಾಲಕರು.
ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆದ ೨೪ನೇ ಬ್ಯಾಚ್‌ನ ಔದ್ಯೋಗಿಕ ತರಬೇತಿ ಪತ್ರಗಳ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡ ಪಾಲಕರು.
Published on
ಕೂಡಲಸಂಗಮ : ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸಾಮಾನ್ಯವಾಗಿ ಶೇ.೧೦೦ರಷ್ಟು ಉದ್ಯೋಗ ಭರವಸೆ ನೀಡುವುದಿಲ್ಲ. ಆದರೆ ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವಿದ್ಯಾರ್ಥಿಗಳಿಗೆ ಪ್ರವೇಶ ಹಂತದಲ್ಲೇ ಶಿಕ್ಷಣದ ಜೊತೆಗೆ ಉದ್ಯೋಗ ಭರವಸೆ ನೀಡುತ್ತಿದ್ದು, ಅದರಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಾಚಾರ್ಯ ದೇವದಾಸ ನಾಯಕ ಹೇಳಿದರು.

ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮಂಗಳವಾರ ನಡೆದ ಬ್ಯಾಚ್‌ನ ಔದ್ಯೋಗಿಕ ತರಬೇತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂರು ವರ್ಷದ ತರಬೇತಿ ಬಳಿಕ ಒಂದು ವರ್ಷದ ಕಡ್ಡಾಯ ಕೈಗಾರಿಕಾ ತರಬೇತಿಯನ್ನು ಶಿಸ್ತಿನಿಂದ ಪೂರ್ಣಗೊಳಿಸಿದರೆ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ. ಬದಲಾಗುತ್ತಿರುವ ತಾಂತ್ರಿಕತೆಗೆ ಹೊಂದಿಕೊಳ್ಳುವ ಕೌಶಲ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಫ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಶಿವಕುಮಾರ ಕಂಚ್ಯಾಣಿ ಮಾತನಾಡಿ, ಆಯ್ಕೆಯಾದ ವಿದ್ಯಾರ್ಥಿಗಳು ಉದ್ಯೋಗಕ್ಕೆ ಮಾತ್ರ ಸೀಮಿತವಾಗದೆ ಅಧ್ಯಯನಕ್ಕೂ ಒತ್ತು ನೀಡಬೇಕು. ತರಬೇತಿ ಅವಧಿಯಲ್ಲಿ ಕಂಪನಿಗಳ ನಿಯಮಗಳನ್ನು ಪಾಲಿಸಿ ಸುರಕ್ಷತೆಯಿಂದ ಕಾರ್ಯನಿರ್ವಹಿಸುವುದು ಮುಖ್ಯ ಎಂದು ಹೇಳಿದರು. ಈ ವರ್ಷ ಕೇಂದ್ರದ ೭೪ ವಿದ್ಯಾರ್ಥಿಗಳು ದೇಶದ ವಿವಿಧ ೨೦ ಕಂಪನಿಗಳಲ್ಲಿ ತರಬೇತಿಗೆ ಆಯ್ಕೆಯಾಗಿದ್ದಾರೆ ಎಂದರು.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು. ಭಾಗವಹಿಸಿದ್ದರು. ಉಪನ್ಯಾಸಕರಾದ ವೀರಣ್ಣ ಮನಗೊಂಡ, ಸವಿತಾ ಮ್ಯಾಗೇರಿ, ಪಾಲಕರು ಸೇರಿ ಇತರರು ಉಪಸ್ಥಿತರಿದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net