ನಾಯಕತ್ವ ಗುಣಗುಣ ಬೆಳೆಸಿಕೊಳ್ಳಿ

ಲೋಕಾಪುರ ಪ್ರೌಢ ಶಾಲೆಯಲ್ಲಿ ಸೋಮವಾರ ಶಾಲಾ ಸಂಸತ್ತ ಚುನಾವಣೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಶಿಕ್ಷಕಿಯರಾದ ವಿ.ಎಸ್. ಪಾಟೀಲ, ಪಿ.ವಿ. ಕಾಸನಕುಂಟೆ, ಎಸ್.ಸಿ. ವಾರಿಕಲ್‌ಮಠ, ನಂದಾ ವಜ್ಜರಮಟ್ಟಿ, ಅನ್ನಪೂರ್ಣ ಕಲಾಲ, ಜಾನಕಿ ಶಿಂಧೆ, ಬಿಇಡಿ ಪ್ರಶಿಕ್ಷಣಾರ್ಥಿಗಳಾದ ವಿಜಯಲಕ್ಷ್ಮೀ ಹೆಗ್ಗಳಕಿ, ಚೈತ್ರ ಬುದ್ನಿ, ಮಂಜುಳಾ ಪಾಟೀಲ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಗುರುಮಾತೆ ಶಕುಂತಲಾ ಹುಲ್ಲಣ್ಣವರ ಹೇಳಿಕೆ
  • ಸರ್ಕಾರಿ ಶಾಲೆಯಲ್ಲಿ ಸಂಸತ್ ರಚನೆ
  • ಇಂದಿನ ಮಕ್ಕಳೇ ನಾಳಿನ ನಾಯಕರು
ಲೋಕಾಪುರ : ಪಟ್ಟಣದ ಸರ್ಕಾರಿ ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸೋಮವಾರ ಶಾಲಾ ಸಂಸತ್ ಚುನಾವಣೆ ನಡೆಯಿತು. ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಮುಖ್ಯ ಗುರುಮಾತೆ ಶಕುಂತಲಾ ಹುಲ್ಲಣ್ಣವರ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ನಾಯಕತ್ವ ಗುಣ ಬೆಳೆಸಲು ಹಾಗೂ ಉತ್ತಮ ನಾಗರಿಕರಾಗಿ ಬೆಳೆಯಲು ಶಾಲಾ ಸಂಸತ್ ಚುನಾವಣೆ ಸಹಕಾರಿಯಾಗುತ್ತದೆ. ಇಂದಿನ ಮಕ್ಕಳೇ ನಾಳಿನ ನಾಯಕರು ಎಂದು ತಿಳಿಸಿದರು.
ಪ್ರಧಾನಮಂತ್ರಿಯಾಗಿ ಅಪ್ಪೀಜ್ ಖಾಜಿ, ಉಪ ಪ್ರಧಾನಿ ಪ್ರೀತಿಮ್ ಲಮಾಣಿ, ಕ್ರೀಡಾ ಮಂತ್ರಿ ನಂದಕುಮಾರ ಹುಗ್ಗಿ, ಸ್ವಚ್ಛತಾ ಮಂತ್ರಿ ಮೇಘಾ ವಾಬಣ್ಣವರ, ಆರೋಗ್ಯ ಮಂತ್ರಿ ಉಮ್ಮಿ ಐಮನ್ ಭಾಗವಾನ, ಸಾಂಸ್ಕೃತಿಕ ಮಂತ್ರಿ ಖುಷಿ ಪೋತದಾರ, ಶಿಕ್ಷಣ ಮಂತ್ರಿ ವರ್ಷ ಬೋವಿ, ಹಣಕಾಸು ಮಂತ್ರಿ ತಯಬಾ ಭಾಗವಾನ, ಪ್ರವಾಸಮಂತ್ರಿ ಸುಚಿತ್ರ ಜುನ್ನಪ್ಪನವರ, ವಾರ್ತಾ ಮಂತ್ರಿ ಪ್ರೀತಿ ಲಮಾಣಿ, ತೋಟಗಾರಿಕೆ ಮಂತ್ರಿ ಅಶ್ವಿನಿ ರುದ್ರಾಕ್ಷಿ, ರಕ್ಷಣಾ ಮಂತ್ರಿ ಪೀರಮಾ ನದಾಫ ಆಯ್ಕೆಯಾದರು.
ಗುರುಮಾತೆ ಎಸ್.ಪಿ. ವಜ್ಜರಮಟ್ಟಿ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಆರ್.ವ್ಹಿ. ಮಠ ಸ್ವಾಗತಿಸಿದರು. ಎಸ್.ಎಲ್. ಮಾಳೇದ, ಆರ್.ಕೆ. ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪಿ.ಎಂ. ಚೌಗಲಾ ವಂದಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಕಿಯರಾದ ವಿ.ಎಸ್. ಪಾಟೀಲ, ಪಿ.ವಿ. ಕಾಸನಕುಂಟೆ, ಎಸ್.ಸಿ. ವಾರಿಕಲ್‌ಮಠ, ನಂದಾ ವಜ್ಜರಮಟ್ಟಿ, ಅನ್ನಪೂರ್ಣ ಕಲಾಲ, ಜಾನಕಿ ಶಿಂಧೆ, ಬಿಇಡಿ ಪ್ರಶಿಕ್ಷಣಾರ್ಥಿಗಳಾದ ವಿಜಯಲಕ್ಷ್ಮೀ ಹೆಗ್ಗಳಕಿ, ಚೈತ್ರ ಬುದ್ನಿ, ಮಂಜುಳಾ ಪಾಟೀಲ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net