ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಿ

ಬಾಗಲಕೋಟೆ ನಗರದಲ್ಲಿ ಜಿಲ್ಲಾ ಹೂಗಾರ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಉಮೇಶ ಮೇಟಿ ಉದ್ಘಾಟಿಸಿದರು.
ಬಾಗಲಕೋಟೆ ನಗರದಲ್ಲಿ ಜಿಲ್ಲಾ ಹೂಗಾರ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಉಮೇಶ ಮೇಟಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಉಮೇಶ ಮೇಟಿ ಸಲಹೆ
  • ಹೂಗಾರ ಸಮಾಜದ ಒಗ್ಗಟ್ಟಿಗೆ ಶ್ರಮಿಸಿ
  • ಪ್ರತಿಭಾ ಪುರಸ್ಕಾರ
ಬಾಗಲಕೋಟೆ:

ಸರಳ ಸಜ್ಜನಿಕೆಯ ಸಮಾಜವಾಗಿರುವ ಹೂಗಾರ ಸಮಾಜದವರು ಸಂಘಟನಾತ್ಮಕವಾಗಿ ಸಮಾಜಮುಖಿಯಾಗಿ ಕಾರ್ಯ ಮಾಡುವುದರೊಂದಿಗೆ ಮಕ್ಕಳನ್ನು ಶೈಕ್ಷಣಿವಾಗಿ ಬೆಳೆಸಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಉಮೇಶ ಮೇಟಿ ಹೇಳಿದರು.

ಬಾಲಕೋಟೆ ಜಿಲ್ಲಾ ಹೂಗಾರ, ಜೀರ, ಗುರವ, ಪೂಜಾರ, ಫುಲಾರಿ ಸಮಾಜ ಸೇವಾ ಸಂಘದ ವತಿಯಿಂದ ಬಾಗಲಕೋಟೆ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೂಗಾರ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬಾಗಲಕೋಟೆಯಲ್ಲಿ ಹೂಗಾರ ಸಮಾಜಕ್ಕೆ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಸರ್ವ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಿಗೆ ಹೂಗಾರ ಬಾಂಧವರ ಸೇವೆ ಅನನ್ಯವಾಗಿದೆ. ತಮ್ಮ ವಿವಿಧ ಬೇಡಿಕೆಗಳ ಕುರಿತು ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತುವೆ. ಸಮಾಜದ ಒಗ್ಗಟ್ಟಿಗೆ ಶೈಕ್ಷಣಿಕ ಪ್ರಗತಿ ಅವಶ್ಯ ಎಂದರು.
ಉಪನ್ಯಾಸ ನೀಡಿದ ಭಾರತ ಸರ್ಕಾರದ ಪ್ರಾಂತಿಯ ನಿವೃತ್ತ ನಿರ್ದೇಶಕ ಅರುಣ ಪೂಜಾರ, ಸರ್ಕಾರದ ವ್ಯವಸ್ಥೆಯಲ್ಲಿ ಹೂಗಾರ ಸಮಾಜ ಬಲಿಪಶುವಾಗಿದೆ. ಸಮಾಜ ಸುಧಾರಣೆಗೆ ಶಿಕ್ಷಣ ಅವಶ್ಯಕ. ಈ ದಿಶೆಯಲ್ಲಿ ಸಮಾಜ ಗಟ್ಟಿಗೊಳಿಸಲು ಒಗ್ಗಟ್ಟು ಅಗತ್ಯವಾಗಿದ್ದು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕೆಂದರು.
2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಸಾಧಕರನ್ನು ಗೌರವಿಸಲಾಯಿತು.
ನದಿ ಸಿನ್ನೂರಿನ ಹೂಗಾರ ಮಾದಯ್ಯ ಶರಣರ ಶಕ್ತಿಪೀಠದ ಶ್ರೀಗುರು ರಾಜೇಂದ್ರ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಹೂಗಾರ ಸಮಾಜದ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿದರು. ಬಾಗಲಕೋಟೆ ಜಿಲ್ಲಾ ಹೂಗಾರ ಸಮಾಜದ ಅಧ್ಯಕ್ಷ ಹನಮಂತ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗಪ್ಪ ಹುಗಾರ, ಹನಮಂತ ಹೂಗಾರ, ಪ್ರವೀಣ ಪೂಜಾರ, ಜಗನ್ನಾಥ ಹೂಗಾರ, ನಂದೆಪ್ಪ ಹೂಗಾರ, ಭಾರತಿ ಹೂಗಾರ, ವಿವಿಧ ತಾಲೂಕು ಅಧ್ಯಕ್ಷರಾದ ಸಿದ್ದಪ್ಪ ಹೂಗಾರ, ಶಾಷಪ್ಪ ಹೂಗಾರ, ಮಲ್ಲಿಕಾರ್ಜುನ ಹೂಗಾರ, ಶರಣಪ್ಪ ಹೂಗಾರ, ಮಲ್ಲಪ್ಪ ಗುರವ, ಕಾಶಿನಾಥ ಗುರುವ, ಶಿವಲಿಂಗಪ್ಪ ಹೂಗಾರ, ಶ್ರೀಶೈಲ ಗುರವ, ಶ್ರೀಶೈಲ ಹೂಗಾರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net