ಬನಶಂಕರಿಯಲ್ಲಿ 8ರಂದು ದೇವಾಂಗ ಜಾಗೃತಿ ಸಮಾವೇಶ

ಬಾದಾಮಿ ನಗರದ ಕಾನಿಪ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶದ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿದರು. ಟಿ. ರಾಜೇಶ, ಸಂಕಣ್ಣ ಕರಡಿಗುಡ್ಡ, ಪ್ರಕಾಶ್ ಪಟ್ಟದಕಲ್ಲ, ಕಂದಗಲ್ಲ, ಮಹೇಶ್ ಶೇಬನಕಟ್ಟಿ ಪಿತಾಂಬ್ರಪ್ಪ ಹವೇಲಿ ಇತರರಿದ್ದರು.
ಬಾದಾಮಿ ನಗರದ ಕಾನಿಪ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶದ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ಮಾತನಾಡಿದರು. ಟಿ. ರಾಜೇಶ, ಸಂಕಣ್ಣ ಕರಡಿಗುಡ್ಡ, ಪ್ರಕಾಶ್ ಪಟ್ಟದಕಲ್ಲ, ಕಂದಗಲ್ಲ, ಮಹೇಶ್ ಶೇಬನಕಟ್ಟಿ ಪಿತಾಂಬ್ರಪ್ಪ ಹವೇಲಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾವೇಶ ಸಮಿತಿ ಅಧ್ಯಕ್ಷ ರವೀಂದ್ರ ಕಲಬರ್ಗಿ ಮಾಹಿತಿ
  • ಪಟ್ಟಾಭಿಷೇಕ, ತುಲಾಭಾರ ಮಹೋತ್ಸವ
ಬಾದಾಮಿ: ಸಮೀಪದ ಬನಶಂಕರಿಯಲ್ಲಿ ಮೇ 8, 9ರಂದು ಅಖಿಲ ಭಾರತ ದೇವಾಂಗ (ನೇಕಾರ) ಜಾಗೃತಿ ಸಮಾವೇಶ-2026 ಜತೆಗೆ ದಯಾನಂದ ಪುರಿ ಮಹಾಸ್ವಾಮಿಗಳ 36ನೇ ವರ್ಷದ ಪಟ್ಟಾಭಿಷೇಕ ಹಾಗೂ ತುಲಾಭಾರ ಸಮಾರಂಭ ವೈಭವದಿಂದ ನಡೆಯಲಿದೆ ಎಂದು ಸಮಾವೇಶ ಸಮಿತಿ ಅಧ್ಯಕ್ಷ ರವೀಂದ್ರ ಕಲಬರ್ಗಿ ತಿಳಿಸಿದರು.
ನಗರದ ಕಾನಿಪ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 8ರಂದು ಬೆಳಗ್ಗೆ 5 ಗಂಟೆಗೆ ಬನಶಂಕರಿದೇವಿಗೆ ಅಭಿಷೇಕ, 6 ಗಂಟೆಗೆ ಸಣ್ಣಕ್ಕಿ ಬಾಗೂರು ಬನಶಂಕರಿದೇವಿ ಉತ್ಸವ ಮೂರ್ತಿಯ ಆಹ್ವಾನದೊಂದಿಗೆ ಶ್ರೀ ಚೌಡೇಶ್ವರಿ ದೇವಿಯ ಕತ್ತಿ ಹಬ್ಬದ ಉದ್ಘಾಟನೆಯನ್ನು ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ ನೆರವೇರಿಸುವವರು.
ನಂತರ 9ರಿಂದ 11 ರವರೆಗೆ ನಡೆಯಲಿರುವ ಮಹಿಳೆಯರ ಕುಂಭ ಮೇಳ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ವಿಪ ಸದಸ್ಯ ಉಮಾಶ್ರೀ ಉದ್ಘಾಟಿಸುವರು. ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ದಯಾನಂದ ಪುರಿ ಶ್ರೀ, ಬಸವರಾಜ ಪಟ್ಟದಾರ್ಯ ಶ್ರೀಗಳು ಸೇರಿ ಆರು ಜನ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಚನಕಾರ ದೇವರ ದಾಸಿಮಯ್ಯನವರ ಇಂಗ್ಲಿಷ್ ವಚನಗಳ ಕೃತಿ ಬಿಡುಗಡೆ ಮಾಡುವರು.
ರಾಜ್ಯ ಬಿಜೆಪಿ ಅಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಅವರು ದಾಸೋಹ ಭವನ 1 ಮತ್ತು 2ನೇ ಮಹಡಿ ಉದ್ಘಾಟಿಸುವರು. ರಾಜ್ಯಸಭಾ ಸದಸ್ಯ ಕೆ. ನಾರಾಯಣ್ ಅಧ್ಯಕ್ಷತೆ ವಹಿಸುವರು.
ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ ಉಪಸ್ಥಿತರಿರಲಿದ್ದು, ದಾನಿಗಳಿಗೆ ಸನ್ಮಾನ ನಡೆಯಲಿದೆ.
ಮೇ 9ರಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ದಯಾನಂದ ಪುರಿ ಶ್ರೀಗಳು ತುಲಾಭಾರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಆದಿಚುಂಚನಗಿರಿಮಠದ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿ ಇತರ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸುವರು. ಡಿಸಿಎಂ ಡಿ.ಕೆ. ಶಿವಕುಮಾರ ಅವರು ಬನಶಂಕರಿ ಐಟಿಐ ಕಾಲೇಜ್ ಆವರಣದಲ್ಲಿ ಮತ್ತು ಬನಶಂಕರಿ ಶಾಖಾ ಮಠದ ಆವರಣದಲ್ಲಿ ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಅತಿಥಿ ಗೃಹಗಳ ಶಂಕುಸ್ಥಾಪನೆ ನೆರವೇರಿಸುವರು. ರಾಜ್ಯದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಕ್ಕರೆ ಸಚಿವ ಶಿವಾನಂದ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ದಾನಿಗಳಿಗೆ ಸನ್ಮಾನಿಸುವವರು. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಚಿವರು, ಮಾಜಿ ಸಚಿವರು, ಮುಖಂಡರು ಭಾಗವಹಿಸುವರು ಎಂದು ತಿಳಿಸಿದರು.
ಟಿ. ರಾಜೇಶ, ಸಂಕಣ್ಣ ಕರಡಿಗುಡ್ಡ, ಪ್ರಕಾಶ್ ಪಟ್ಟದಕಲ್ಲ, ಮಹೇಶ್ ಶೇಬನಕಟ್ಟಿ ಪಿತಾಂಬ್ರಪ್ಪ ಹವೇಲಿ, ಬಸವರಾಜ ಕುದರಿ, ವಿಜಯಕುಮಾರ್ ಭಾಪ್ರಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net