

ಪ್ರಮುಖ ಮುಖ್ಯಾಂಶಗಳು
ಬಾಗಲಕೋಟೆಯಲ್ಲಿ ಫೆ. 26ರಂದು ಜರುಗುವ ಪ್ರತಿಭಟನೆ ಹಿನ್ನೆಲೆ ಗ್ರಾಮದ ಕೆಲವು ಹಿಂದೂಪರ ಕಾರ್ಯಕರ್ತರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಪೊಲೀಸರು ನೋಟಿಸ್ ಜತೆ ಸಮನ್ಸ್ ನೀಡಿದ್ದರಿಂದ ಹಿಂದೂಪರ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.ಪೊಲೀಸ್ ಠಾಣೆಗೆ ತೆರಳಿದ ಸಮನ್ಸ್ನಲ್ಲಿ ಹೆಸರಿದ್ದ ಹಿಂದೂ ಮುಖಂಡರು ಇದನ್ನು ಪ್ರಶ್ನಿಸುವುದರೊಂದಿಗೆ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಸಂಜೆಯೊಳಗಾಗಿ ನಮಗೆ ನೀಡಿರುವ ಸಮನ್ಸ್ಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲವಾದರೆ ಠಾಣೆ ಮುಂದೆ ಧರಣಿ ಕೂಡಲಾಗುವುದು ಎಂದು ಹಿಂದೂಪರ ಮುಖಂಡರು ಪೊಲೀಸರನ್ನು ಆಗ್ರಹಿಸಿದರು.