

ಪ್ರಮುಖ ಮುಖ್ಯಾಂಶಗಳು
ಬಿಜೆಪಿ ಸರ್ಕಾರ ರಾಜ್ಯ, ಕೇಂದ್ರದಲ್ಲಿ ಆಡಳಿತ ನಡೆಸಿದರು ಯಾವುದೇ ಜನ ಉಪಯೋಗಿ ಕೆಲಸ ಮಾಡಿಲ್ಲ. ಮನಮೋಹನ ಸಿಂಗ್ ರೈತರ 70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ 10 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದರು. ಆದರೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಂಬಾನಿ, ಅದಾನಿ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿಗೆ ಕಿಂಚಿತ್ತು ಬಡವರ ಪರ ಕಾಳಜಿ ಇಲ್ಲ. ಬೆಲೆ ಏರಿಕೆಮಾಡಿ ಜನರ ಬದುಕಿಗೆ ಪೆಟ್ಟು ನೀಡಿದ್ದಾರೆ. ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು.
-ಎಂ.ಬಿ. ಪಾಟೀಲ, ಕೈಗಾರಿಕೆ ಸಚಿವ
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿದ್ದ ಬಾಗಲಕೋಟೆ ಜಿಲ್ಲೆಯವರು ಯಾವುದೇ ಕೆಲಸ ಮಾಡಲಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾವ ಕೊಡುಗೆ ನೀಡಿಲ್ಲ. ರೈತರಿಗೆ ಸಮರ್ಪಕ ಪರಿಹಾರ ನೀಡಲಿಲ್ಲ. ನಮ್ಮ ಕಾಂಗ್ರೆಸ್ ನ್ಯಾಯಯುತ ಪರಿಹಾರ ನೀಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ನೀಡಿದೆ. ಸಂಘರ್ಷದಿಂದ ಕೈಗಾರಿಕೆಗಳು ಬರುವುದಿಲ್ಲ. ಜನರು ಇದನ್ನು ಅರ್ಥ ಮಾಡಿಕೊಂಡು ಈ ಸಾರಿ ಉಮೇಶ ಮೇಟಿ ಅವರಿಗೆ ಅವಕಾಶ ನೀಡಬೇಕು.
-ಆರ್.ಬಿ. ತಿಮ್ಮಾಪೂರ, ಅಬಕಾರಿ ಸಚಿವ
ಕಾಂಗ್ರೆಸ್ ಸರ್ಕಾರ ಬಡವರು, ಶೋಷಿತರು, ಸಾಮಾನ್ಯ ವರ್ಗದ ಪರವಾಗಿ ಯೋಜನೆ ನೀಡಿದೆ. ಪಂಚ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗ ಜನರಿಗೆ ತಲುಪುವಂತೆ ಮಾಡಿದೆ. ವಸತಿ ಯೋಜನೆ ಮೂಲಕ ಬಡವರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ. ಬಿಜೆಪಿ ಅಪಪ್ರಚಾರ ಮಾಡುತ್ತಾರೆ. ಎರಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅವಕಾಶ ನೀಡಬೇಕು.
-ಜಮೀರ ಅಹ್ಮದ್ ಖಾನ್, ಸಚಿವ