ಗಡಿಭಾಗಗಳಲ್ಲಿ ಕನ್ನಡ ಬಲಪಡಿಸಲು ಒತ್ತಾಯ

ರಬಕವಿಯ ಘಟ್ಟಗಿ ಬಸವೇಶ್ವರ ದೇವಸ್ಥಾನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಮತ್ಯುಂಜಯ ರಾಮದುರ್ಗ ಉದ್ಘಾಟಿಸಿದರು. ಮ.ಕ.ಮೇಗಾಡಿ, ಶಿವಾನಂದ ದಾಶಾಳ, ಬಸವರಾಜ ಮಟ್ಟಿಕಲ್ಲಿ, ದಾಕ್ಷಾಯಣಿ ಮಂಡಿ ಇದ್ದರು.
ರಬಕವಿಯ ಘಟ್ಟಗಿ ಬಸವೇಶ್ವರ ದೇವಸ್ಥಾನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಮತ್ಯುಂಜಯ ರಾಮದುರ್ಗ ಉದ್ಘಾಟಿಸಿದರು. ಮ.ಕ.ಮೇಗಾಡಿ, ಶಿವಾನಂದ ದಾಶಾಳ, ಬಸವರಾಜ ಮಟ್ಟಿಕಲ್ಲಿ, ದಾಕ್ಷಾಯಣಿ ಮಂಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮತ್ಯುಂಜಯ ರಾಮದುರ್ಗ ಅಭಿಮತ
  • ಕನ್ನಡಾಭಿಮಾನ ಜಾಗೃತಿಗರ ಕಸಾಪದ ಮಹತ್ವದ ಪಾತ್ರ
  • ಕನ್ನಡ ನಾಡು-ನುಡಿ ಏಳಿಗೆ ಹಾಗೂ ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಮಹತ್ವದ ಪಾತ್ರವಹಿಸಿದೆ
ರಬಕವಿ/ಬನಹಟ್ಟಿ: ಕನ್ನಡ ನಾಡು-ನುಡಿ ಏಳಿಗೆ ಹಾಗೂ ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಮಹತ್ವದ ಪಾತ್ರವಹಿಸಿದೆ ಎಂದು ರಾಜ್ಯ ನಿವತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮತ್ಯುಂಜಯ ರಾಮದುರ್ಗ ಹೇಳಿದರು.
ನಗರದ ಘಟ್ಟಗಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ರಾಜ್ಯ ಕಸಾಪ, ಜಿಲ್ಲಾ ಘಟಕ, ತಾಲೂಕು ಕಸಾಪ ಹಾಗೂ ವಲಯ ಮಹಾಲಿಂಗಪುರ ಅವರ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಡಿಭಾಗಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬಲಪಡಿಸಲು ಸರ್ಕಾರದಿಂದ ಗಡಿ ಅಭಿವದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ಮತ್ತು ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ಶಿವಾನಂದ ದಾಶಾಳ ಉಪನ್ಯಾಸ ನೀಡಿ, ಕಸಾಪ ತನ್ನ ಸ್ಥಾಪನೆಯಿಂದಲೇ ಕನ್ನಡದ ಅಭಿವದ್ಧಿಗೆ ನಿರಂತರ ಸೇವೆ ಸಲ್ಲಿಸುತ್ತಿದ್ದು, ಸಾಹಿತ್ಯ ಸಮ್ಮೇಳನಗಳಲ್ಲಿ ಅಂಗೀಕರಿಸಲಾದ ನಿರ್ಣಯಗಳನ್ನು ಸರ್ಕಾರ ಜಾರಿಗೊಳಿಸಬೇಕೆಂದು ಹೇಳಿದರು. ಗ್ರಾಮೀಣ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಕುರಿತು ಜಾಗತಿ ಮೂಡಿಸಲಾಗುತ್ತಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಮ.ಕ. ಮೇಗಾಡಿ ಮಾತನಾಡಿ, ಕನ್ನಡಿಗರಲ್ಲಿ ಒಗ್ಗಟ್ಟು ಮತ್ತು ಭಾಷಾಭಿಮಾನ ಬೆಳೆಸಲು ಪ್ರತಿಯೊಬ್ಬರೂ ಕಸಾಪ ಸದಸ್ಯತ್ವ ಪಡೆಯಬೇಕೆಂದು ಕರೆ ನೀಡಿದರು.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬನಹಟ್ಟಿಯ ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಬಿ. ಎಂ. ಮಟ್ಟಿಕಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಸುಶಾಂತ ಶ್ರೀಶೈಲ ಬುರ್ಲಿ ಅವರನ್ನು ಸನ್ಮಾನಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಪರಪ್ಪ ಪೂಜಾರಿ, ಕಸಾಪ ಜಿಲ್ಲಾ ಘಟಕದ ಮಹಿಳಾ ಪ್ರತಿನಿಧಿ ದಾಕ್ಷಾಯಣಿ ಮಂಡಿ, ತೇರದಾಳ ತಾಲೂಕು ಕಸಾಪ ಅಧ್ಯಕ್ಷ ಗಂಗಾಧರ ಮೋಪಗಾರ, ಮಹಾಲಿಂಗಪುರ ವಲಯ ಅಧ್ಯಕ್ಷ ಬಸವರಾಜ ಮೇಟಿ, ಸಾಹಿತಿಗಳಾದ ಯಶವಂತ ವಾಜಂತ್ರಿ, ಮಹಾದೇವ ಕವಿಶೆಟ್ಟಿ, ಎಸ್.ಎಸ್. ಹಿರೇಮಠ, ಈರಯ್ಯ ಹಿರೇಮಠ, ಚಿದಾನಂದ ಸೊಲಾಪೂರ, ಶರತ್ ಜಂಬಗಿ, ಮಹಾಶಾಂತ ಶೆಟ್ಟಿ, ಈರಪ್ಪ ಮನ್ಮಿ, ಎಂ.ಆರ್. ಕುಂಬಾರ, ಶೈಲಾ ಮಿರ್ಜಿ ಮತ್ತಿತರರಿದ್ದರು.
ಅನಸೂಯಾ ಹಿರೇಮಠ ಪ್ರಾರ್ಥಿಸಿದರು. ಚಂದ್ರಪ್ರಭಾ ಬಾಗಲಕೋಟ ಸ್ವಾಗತಿಸಿದರು. ಡಾ. ಚಂದ್ರಕಾಂತ ಹೊಸೂರ, ಶ್ರೀಶೈಲ ಬುರ್ಲಿ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net