ರಂಗಸಮುದ್ರ ಕೆರೆಗೆ ನೀರು ಹರಿಸಲು ಆಗ್ರಹ

ಗುಳೇದಗುಡ್ಡ ತಾಲೂಕಿನ ರೈತರು ರಂಗಸಮುದ್ರ ಕೆರೆ ತುಂಬಿಸುವಂತೆ ಆಗ್ರಹಿಸಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಮಂಜುನಾಥ ಪಾಟೀಲ, ಯಮನಪ್ಪ ಕೊಳಗದ, ವಿಠ್ಠಲ ಘಟ್ಟಿ, ವಿ.ಬಿ. ಬಡಗೇರ, ಸಿದ್ಲಿಂಗಪ್ಪ ಕೊಣ್ಣೂರ, ಯಲ್ಲಪ್ಪ ಸಣ್ಣಕ್ಕಿ, ಹುಚ್ಚಪ್ಪ ಬಡದೆಲಿ ಮತ್ತಿತರರಿದ್ದರು.
ಗುಳೇದಗುಡ್ಡ ತಾಲೂಕಿನ ರೈತರು ರಂಗಸಮುದ್ರ ಕೆರೆ ತುಂಬಿಸುವಂತೆ ಆಗ್ರಹಿಸಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಮಂಜುನಾಥ ಪಾಟೀಲ, ಯಮನಪ್ಪ ಕೊಳಗದ, ವಿಠ್ಠಲ ಘಟ್ಟಿ, ವಿ.ಬಿ. ಬಡಗೇರ, ಸಿದ್ಲಿಂಗಪ್ಪ ಕೊಣ್ಣೂರ, ಯಲ್ಲಪ್ಪ ಸಣ್ಣಕ್ಕಿ, ಹುಚ್ಚಪ್ಪ ಬಡದೆಲಿ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರಿಗೆ ಮನವಿ ಸಲ್ಲಿಕೆ
  • ಬಾದಾಮಿ ಕ್ಷೇತ್ರದ ಭೀಮನಗಡ, ಮಂಗಳಗುಡ್ಡ, ಚಿಮ್ಮಲಗಿ, ಉಪನಾಳ, ಕಾಟಾಪುರ, ಸಿದ್ದನಕೊಳ್ಳ ಗ್ರಾಮಗಳ ಅಂದಾಜು 2000 ಎಕರೆ ನೀರಾವರಿ ಸೌಲಭ್ಯ ದೊರೆಯುತ್ತಿದೆ.
  • ಜಾನುವಾರುಗಳು ಈ ಕೆರೆಯನ್ನು ಅವಲಂಬಿಸಿದೆ.
ಗುಳೇದಗುಡ್ಡ : ತಾಲೂಕಿನ ಚಿಮ್ಮಲಗಿ ಹಾಗೂ ಮಂಗಳಗುಡ್ಡ ಗ್ರಾಮದ ಜಾನುವಾರುಗಳು ಈ ಕೆರೆಯನ್ನು ಅವಲಂಬಿಸಿದೆ. ರಂಗಸಮುದ್ರ ಕೆರೆಗೆ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸುವಂತೆ ಕೋರಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ಸೋಮವಾರ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.
ಬಾದಾಮಿ ಕ್ಷೇತ್ರದ ಭೀಮನಗಡ, ಮಂಗಳಗುಡ್ಡ, ಚಿಮ್ಮಲಗಿ, ಉಪನಾಳ, ಕಾಟಾಪುರ, ಸಿದ್ದನಕೊಳ್ಳ ಗ್ರಾಮಗಳ ಅಂದಾಜು 2000 ಎಕರೆ ನೀರಾವರಿ ಸೌಲಭ್ಯ ದೊರೆಯುತ್ತಿದೆ. ಜೊತೆಗೆ ಚಿಮ್ಮಲಗಿ ಹಾಗೂ ಮಂಗಳಗುಡ್ಡ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಜಾನುವಾರುಗಳು ಈ ಕೆರೆಯನ್ನು ಅವಲಂಬಿಸಿದೆ. ಆಲಮಟ್ಟಿ ಹಿನ್ನಿರಿನಿಂದ ಏತ ನೀರಾವರಿ ಯೋಜನೆ ಮೂಲಕ ರಂಗಸಮುದ್ರ ಕೆರೆ ತುಂಬಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು, ಶೀಘ್ರವೇ ರಂಗಸಮುದ್ರ ಕೆರೆಗೆ ನೀರು ಬಿಡುವಂತೆ ಸೂಚಿಸಿದರು.
ಮಂಜುನಾಥ ಪಾಟೀಲ, ಯಮನಪ್ಪ ಕೊಳಗದ, ವಿಠ್ಠಲ ಘಟ್ಟಿ, ವಿ.ಬಿ. ಬಡಗೇರ, ಸಿದ್ಲಿಂಗಪ್ಪ ಕೊಣ್ಣೂರ, ಯಲ್ಲಪ್ಪ ಸಣ್ಣಕ್ಕಿ, ಹುಚ್ಚಪ್ಪ ಬಡದೆಲಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net