ಸಾಲದ ಮೊತ್ತ ಕಡಿಮೆ ಮಾಡಿಸಲು ಆಗ್ರಹ..!

 ಬಾಗಲಕೋಟೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಅವರಲ್ಲಿ ಮುಧೋಳ ರೈತರು ಬ್ಯಾಂಕ್ ಸಾಲ ಮರು ಪಾವತಿ ವಿಚಾರವಾಗಿ ಒನ್ ಟೈಮ್ ಸೆಟಲ್‌ಮೆಂಟ್‌ಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು. ಜಿ.ಪಂ. ಸಿಇಒ ಶಶಿಧರ ಕುರೇರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ರಾಜಕುಮಾರ ಇತರರಿದ್ದರು.
ಬಾಗಲಕೋಟೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ ಅವರಲ್ಲಿ ಮುಧೋಳ ರೈತರು ಬ್ಯಾಂಕ್ ಸಾಲ ಮರು ಪಾವತಿ ವಿಚಾರವಾಗಿ ಒನ್ ಟೈಮ್ ಸೆಟಲ್‌ಮೆಂಟ್‌ಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು. ಜಿ.ಪಂ. ಸಿಇಒ ಶಶಿಧರ ಕುರೇರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ರಾಜಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಂದ ಸಂಸದ ಗದ್ದಿಗೌಡರ ಅವರಿಗೆ ಮನವಿ
  • ಬ್ಯಾಂಕ್‌ಗಳಿಂದ ಲಿಲಾವ್ ನೋಟಿಸ್
  • ಬ್ಯಾಂಕ್ ಅಧಿಕಾರಿಗಳ ಸಭೆ ಕರೆಯುವ ಅಭಯ
ಬಾಗಲಕೋಟೆ: ಸಾಲ ಮರು ಪಾವತಿಯಲ್ಲಿ ವಿಳಂಬ ಮಾಡಿರುವ ರೈತರಿಗೆ ಬ್ಯಾಂಕ್‌ಗಳಿಂದ ಲಿಲಾವ್ ನೋಟಿಸ್ ಜಾರಿ ಮಾಡುತ್ತಿದ್ದಾರೆ ಎಂದು ಮುಧೋಳ ರೈತರು ಸೋಮವಾರ ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ಇರುವ ಸಂಸದ ಪಿ.ಸಿ. ಗದ್ದಿಗೌಡರ ಕಚೇರಿಯಲ್ಲಿ ಸಂಸದರ ಎದುರು ತಮ್ಮ ಸಂಕಷ್ಟ ತೋಡಿಕೊಂಡರು.
ಮುಧೋಳದ ಕೆನರಾ ಬ್ಯಾಂಕ್‌ನಲ್ಲಿ ರೈತರು ಪಡೆದಿರುವ ಸಾಲ ಮರು ಪಾವತಿ ವಿಚಾರವಾಗಿ ಬ್ಯಾಂಕ್‌ಗಳಿಂದ ನೋಟಿಸ್, ಆಸ್ತಿ ಜಪ್ತಿ ನೋಟಿಸ್ ಬರುತ್ತಿವೆ. ಇದರಿಂದ ರೈತರು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ.
ನ್ಯಾಯಾಲಯದಿಂದ ಆಸ್ತಿ ಜಪ್ತಿ ನೋಟಿಸ್ ಜಾರಿ ಮಾಡಿದರೆ ರೈತರು ತುಂಬ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ರೈತರಿಗೆ ಒನ್ ಟೈಮ್ ಸೆಟಲ್‌ಮೆಂಟ್‌ನಲ್ಲಿ ಕಡಿಮೆ ಹಣ ಪಾವತಿಗೆ ಅವಕಾಶ ಕಲ್ಪಿಸಿಕೊಡಬೇಕು. ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಇಲ್ಲವಾದಲ್ಲಿ ರೈತರು ಉಗ್ರ ಹೋರಾಟ ಮಾಡುವುದಾಗಿ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ತಿಳಿಸಿದರು.
ಅನೇಕ ರೈತರ ಸಾಲವೂ ಕಟಬಾಕಿ ಇದ್ದು, ಸಾಲಕ್ಕಿಂತ ಹಲವು ಪಟ್ಟು ಬಡ್ಡಿ ಹೆಚ್ಚಳ ಆಗಿದೆ. ರೈತರು ಸಂಕಷ್ಟದಲ್ಲಿದ್ದು, ಬಡ್ಡಿಯನ್ನು ಸಂಪೂರ್ಣ ಕೈಬಿಡಬೇಕು. ಜೊತೆಗೆ ಸಾಲದ ಮೊತ್ತದಲ್ಲೂ ರಿಯಾಯಿತಿ ಮಾಡಿ ಸಾಲ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಂಸದ ಪಿ.ಸಿ. ಗದ್ದಿಗೌಡರ ಅವರು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಸೇರಿ ಕೆಲ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು.
ರೈತರು ಪಡೆದಿರುವ ಸಾಲ ಮರು ಪಾವತಿ ಮತ್ತು ಒನ್ ಟೈಮ್ ಸೆಟಲ್‌ಮೆಂಟ್ ಕುರಿತು ಚರ್ಚಿಸಲು ಬ್ಯಾಂಕ್ ಅಧಿಕಾರಿಗಳ ಜೊತೆಗೆ ಫೆ. 24ರಂದು ಸಭೆ ನಡೆಸಲಾಗುವುದು. ಬ್ಯಾಂಕ್ ನಿಯಮಾವಳಿ ಏನಿದೆ? ಹಾಗೂ ತಮ್ಮ ಬೇಡಿಕೆ ಬಗ್ಗೆ ಚರ್ಚಿಸೋಣ ಎಂದು ಸಂಸದರು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net