ಥ್ರೀ-ಫೇಸ್ ವಿದ್ಯುತ್ ಪೂರೈಸಲು ಆಗ್ರಹ

ಬಾಗಲಕೋಟೆ ಸಮೀಪದ ಹೊನ್ನಾಕಟ್ಟಿ ಕ್ರಾಸ್ ಬಳಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಮನವಿ ಸ್ವೀಕರಿಸಿ, ರೈತರಿಗೆ ಲಿಖಿತ ಭರವಸೆ ನೀಡಿದ ಹೆಸ್ಕಾಂ ಅಽಕಾರಿ ಬಾಲಚಂದ್ರ ಹಲಗತ್ತಿ ಮಾತನಾಡಿದರು. ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮನ್ನಿಕೇರಿಯ ನಿರ್ವಾಣ ಸ್ವಾಮೀಜಿ, ರೈತರಾದ ಗುರು ಗಾಣಗೇರ, ಮುತ್ತಪ್ಪ ಹಿರೇಕುಂಬಿ, ಮಹಾಂತೇಶ ಚೊಳಚಗುಡ್ಡ ಇತರರಿದ್ದರು.
ಬಾಗಲಕೋಟೆ ಸಮೀಪದ ಹೊನ್ನಾಕಟ್ಟಿ ಕ್ರಾಸ್ ಬಳಿ ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಮನವಿ ಸ್ವೀಕರಿಸಿ, ರೈತರಿಗೆ ಲಿಖಿತ ಭರವಸೆ ನೀಡಿದ ಹೆಸ್ಕಾಂ ಅಽಕಾರಿ ಬಾಲಚಂದ್ರ ಹಲಗತ್ತಿ ಮಾತನಾಡಿದರು. ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮನ್ನಿಕೇರಿಯ ನಿರ್ವಾಣ ಸ್ವಾಮೀಜಿ, ರೈತರಾದ ಗುರು ಗಾಣಗೇರ, ಮುತ್ತಪ್ಪ ಹಿರೇಕುಂಬಿ, ಮಹಾಂತೇಶ ಚೊಳಚಗುಡ್ಡ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ

ರೈತರ ಕೃಷಿ ಪಂಪ್‌ಸೆಟ್ ಗಳಿಗೆ ಪ್ರತಿ ದಿನ ಹಗಲು ಹೊತ್ತಿನಲ್ಲಿ 8 ಗಂಟೆ ಥ್ರೀ-ಫೇಸ್ ಹಾಗೂ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಟು-ಫೇಸ್ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಸಮೀಪದ ಹೊನ್ನಾಕಟ್ಟಿ ಕ್ರಾಸ್ ಬಳಿ ರೈತರು ಪ್ರತಿಭಟನೆ ನಡೆಸಿದರು.

ಬಾಗಲಕೋಟೆ ತಾಲೂಕಿನ ಹೊನ್ನಾಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಕೃಷಿ ಬಿಟ್ಟು ಬೇರೆ ಉದ್ಯೋಗ ಇಲ್ಲ. ಮಳೆ ಇಲ್ಲದೇ ಭೀಕರ ಬರ ಆವರಿಸಿದೆ. ಇದೀಗ ಕೃಷಿ ಪಂಪಸೆಟ್‌ಗಳ ಮೂಲಕ ಬೆಳೆಗಳಿಗೆ ನೀರು ಪೂರೈಸಲು ವಿದ್ಯುತ್ ಪೂರೈಕೆ ಅಗತ್ಯವಾಗಿದೆ. ಸದ್ಯ ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ಸಮಯದಲ್ಲಿ ಸಮರ್ಪಕ ಮತ್ತು ನಿರಂತರ ವಿದ್ಯುತ್ ಪೂರೈಕೆ ಇಲ್ಲದೇ ಕೃಷಿ ಪಂಪ್‌ಸೆಟ್‌ಗಳನ್ನು ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳೆಗಳಿಗೆ ಸಕಾಲದಲ್ಲಿ ನೀರು ಹರಿಸಲು ಸಾಧ್ಯವಾಗದೇ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ ಎಂದು ಪ್ರತಿಭಟನಾಕಾರರ ಹೇಳಿದರು.

ಕೃಷಿ ಚಟುವಟಿಕೆಗಳು ಹಾಗೂ ಬೆಳೆಗಳ ರಕ್ಷಣೆಯ ದೃಷ್ಟಿಯಿಂದ ಸಂಜೆ 6 ಗಂಟೆಯಿಂದ ಬೆಳಗಿನ 6 ಗಂಟೆ ವರೆಗೂ ಟು-ಫೇಸ್ ವಿದ್ಯುತ್ ಪೂರೈಸಬೇಕು. ಹಗಲು ಹೊತ್ತಿನಲ್ಲಿ ಕನಿಷ್ಠ 8 ಗಂಟೆ ಕಾಲ ನಿರಂತರವಾಗಿ ಥ್ರೀ-ಫೇಸ್ ವಿದ್ಯುತ್ ಒದಗಿಸಬೇಕು. ಥ್ರೀ-ಫೇಸ್ ವಿದ್ಯುತ್ ಪೂರೈಕೆಯ ಸಮಯವನ್ನು ಮುಂಚಿತವಾಗಿ ನಿಗದಿಪಡಿಸಿ ರೈತರಿಗೆ ತಿಳಿಸಬೇಕು. ಪದೇ ಪದೇ ಉಂಟಾಗುವ ವಿದ್ಯುತ್ ಕಡಿತ, ಕಡಿಮೆ ವೋಲ್ಟೇಜ್ ಹಾಗೂ ಅನಿಯಮಿತ ವಿದ್ಯುತ್ ಪೂರೈಕೆಯನ್ನು ಸರಿಪಡಿಸಲು ಅಗತ್ಯ ತಾಂತ್ರಿಕ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತರು ಈಗಾಗಲೇ ಬೀಜ, ಗೊಬ್ಬರ, ಔಷಽ, ಕೂಲಿ ಸೇರಿ ಕೃಷಿಗೆ ಹೆಚ್ಚಿನ ಹಣ ವೆಚ್ಚ ಮಾಡಿದ್ದು, ಸಮರ್ಪಕ ವಿದ್ಯುತ್ ಪೂರೈಕೆಯ ಕೊರತೆಯಿಂದ ಬೆಳೆ ನಷ್ಟವಾದಲ್ಲಿ ರೈತರು ತೀವ್ರ ಆರ್ಥಿಕ ಸಂಕಷ್ಟ ಸಿಲುಕುವ ಸಾಧ್ಯತೆ ಇದೆ. ಹೀಗಾಗಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಮಾಡಬಾರದು ಎಂದು ಆಗ್ರಹಿಸಿ, ಈ ಕುರಿತು ಲಿಖಿತ ಭರವಸೆ ನೀಡಬೇಕೆಂದು ಸ್ಥಳಕ್ಕೆ ಆಗಮಿಸಿದ್ದ ಹೆಸ್ಕಾಂ ಅಽಕಾರಿಗೆ ಪಟ್ಟುಹಿಡಿದರು.

ರೈತರ ಮನವಿ ಸ್ವೀಕರಿಸಿದ ಹೆಸ್ಕಾಂ ಎಇಇ ಬಾಲಚಂದ್ರ ಹಲಗತ್ತಿ, ಈಗಾಗಲೇ ಥ್ರೀ-ಫೇಸ್ 6.5 ಗಂಟೆ ಕೊಡುತ್ತಿದ್ದು, ಇನ್ನು ಮುಂದೆ ಅದನ್ನು 7 ಗಂಟೆ ಪೂರೈಸಲಾಗುವುದು. ಹಾಗೆಯೇ ಸಂಜೆ 6ರಿಂದ ರಾತ್ರಿ 10 ಗಂಟೆ ವರೆಗೆ ಟು-ಫೇಸ್ ವಿದ್ಯುತ್ ಪೂರೈಸಲಾಗುವುದು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ವಿದ್ಯುತ್ ಲಭ್ಯತೆ ಅನುಸಾರವಾಗಿ ಮುಂದಿನ ದಿನಗಳಲ್ಲಿ ಕಂಪನಿಯ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಲಿಖಿತ ಭರವಸೆ ನೀಡಿದರು.

ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮನ್ನಿಕೇರಿಯ ನಿರ್ವಾಣ ಸ್ವಾಮೀಜಿ, ರೈತರಾದ ಗುರು ಗಾಣಗೇರ, ಮುತ್ತಪ್ಪ ಹಿರೇಕುಂಬಿ, ಮಹಾಂತೇಶ ಚೊಳಚಗುಡ್ಡ, ಮಾರುತಿ ಸೂರ್ಯವಂಶಿ, ಬಸಪ್ಪ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net