ರಬಕವಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಆಗ್ರಹ

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರಿಗೆ ರಬಕವಿ ಸೇರಿ ತಾಲೂಕಿನ ವಿವಿಧ ಗ್ರಾಮಸ್ಥರು ರಬಕವಿಯಲ್ಲಿ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದ ಪ್ರಜಾಸೌಧ ಕಟ್ಟಡದ ಶಂಕುಸ್ಥಾಪನೆ ನೆರವೇರಿಸುವಂತೆ ಒತ್ತಾಯಿಸಿದರು. ರಾಮಣ್ಣ ಹುಲಕುಂದ, ನೀಲಕಂಠ ಮುತ್ತೂರ, ಸಂಜೀವ ಜೋತಾವರ ಇತರರಿದ್ದರು.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರಿಗೆ ರಬಕವಿ ಸೇರಿ ತಾಲೂಕಿನ ವಿವಿಧ ಗ್ರಾಮಸ್ಥರು ರಬಕವಿಯಲ್ಲಿ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದ ಪ್ರಜಾಸೌಧ ಕಟ್ಟಡದ ಶಂಕುಸ್ಥಾಪನೆ ನೆರವೇರಿಸುವಂತೆ ಒತ್ತಾಯಿಸಿದರು. ರಾಮಣ್ಣ ಹುಲಕುಂದ, ನೀಲಕಂಠ ಮುತ್ತೂರ, ಸಂಜೀವ ಜೋತಾವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ವಿಜಯಾನಂದ ಕಾಶಪ್ಪನವರಿಗೆ ಮನವಿ
  • ಶಂಕು ಸ್ಥಾಪನೆಗೆ ಚಾಲನೆ ನೀಡುವಂತೆ ಒತ್ತಾಯ
  • ಪ್ರಜಾಸೌಧ ನಿರ್ಮಾಣದಿಂದ ತಾಲೂಕು ಮಟ್ಟದ ವಿವಿಧ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲವಾಗುವುದರ ಜತೆಗೆ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ.
ರಬಕವಿ/ಬನಹಟ್ಟಿ :

ರಬಕವಿ-ಬನಹಟ್ಟಿ ತಾಲೂಕು ಪ್ರಜಾಸೌಧ ಕಟ್ಟಡವನ್ನು ರಬಕವಿಯಲ್ಲಿ ನಿರ್ಮಿಸಲು ಈಗಾಗಲೇ ನಿಗದಿಪಡಿಸಿರುವ ಸ್ಥಳದಲ್ಲಿ ಶಂಕುಸ್ಥಾಪನೆ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡುವಂತೆ ಒತ್ತಾಯಿಸಿ ರಬಕವಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರಿಗೆ ಭಾನುವಾರ ಮನವಿ ಸಲ್ಲಿಸಿದರು.

ರಬಕವಿ ನಗರದ ಸಿಟಿಎಸ್ ನಂ. 80ರ ವ್ಯಾಪ್ತಿಯಲ್ಲಿರುವ 3 ಎಕರೆ 18 ಗುಂಟೆ ಜಾಗವನ್ನು ತಾಲೂಕು ಪ್ರಜಾಸೌಧ ನಿರ್ಮಾಣಕ್ಕಾಗಿ ಕಂದಾಯ ಇಲಾಖೆಗೆ ಶಾಶ್ವತವಾಗಿ ಹಾಗೂ ಉಚಿತವಾಗಿ ಹಸ್ತಾಂತರಿಸಲು ಜಲ ಸಂಪನ್ಮೂಲ ಇಲಾಖೆ ಈಗಾಗಲೇ ಅನುಮತಿ ನೀಡಿದೆ. ಅಲ್ಲದೆ, ಜಮೀನನ್ನು ಕಂದಾಯ ಇಲಾಖೆ ಹೆಸರಿಗೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹೀಗಾಗಿ ಸಿಟಿಎಸ್ ನಂ. 80ರ ಜಾಗವನ್ನು ಶೀಘ್ರ ಕಂದಾಯ ಇಲಾಖೆ ಹೆಸರಿಗೆ ವರ್ಗಾಯಿಸಿ, ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಪ್ರಜಾಸೌಧ ನಿರ್ಮಾಣದಿಂದ ತಾಲೂಕು ಮಟ್ಟದ ವಿವಿಧ ಸರ್ಕಾರಿ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲವಾಗುವುದರ ಜತೆಗೆ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ. ಕಟ್ಟಡ ನಿರ್ಮಾಣದಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆತು ಉದ್ಯೋಗಾವಕಾಶಗಳೂ ಹೆಚ್ಚಾಗಲಿವೆ. ಹೀಗಾಗಿ ಜನರ ಬಹು ದಿನಗಳ ಬೇಡಿಕೆಯಾಗಿರುವ ಪ್ರಜಾಸೌಧ ನಿರ್ಮಾಣ ಕಾಮಗಾರಿಯನ್ನು ವಿಳಂಬ ಮಾಡದೆ ಶೀಘ್ರ ಆರಂಭಿಸಬೇಕು ಎಂದು ನಾಗರಿಕರು ಆಗ್ರಹಿಸಿದರು.
ಸಂಜೀವ ಜೋತಾವರ, ಸದಾಶಿವ ಖವಾಸಿ, ರಾಮಣ್ಣ ಹುಲಕುಂದ, ಸಂಗಮೇಶ ಮಡಿವಾಳ, ಮಲ್ಲಿಕಾರ್ಜುನ ವಂದಾಲ, ಯಮನಪ್ಪ ದೋಡಮನಿ, ಮಹಮ್ಮದ ಜಾರೆ, ವೆಂಕನಗೌಡ ಪಾಟೀಲ, ಕೃಷ್ಣಾ ಲೆಂಡಿ, ಶಿವಾನಂದ ಬಾಗಲಕೋಟೆಮಠ, ಬಸವರಾಜ ತೆಗ್ಗಿ, ಸಂಜಯ ತೆಗ್ಗಿ, ಸೋಮಶೇಖರ ಕೊಟ್ರಶೆಟ್ಟಿ, ಭೀಮಸಿ ಪಾಟೀಲ, ಪ್ರವೀಣ ಹಜಾರೆ, ರವಿ ಗಡಾದ, ಆನಂದ ಜುಗಳಿ, ಚಂದ್ರು ಬಕನತ್ತಿ, ಮಲ್ಲು ಮುತ್ತೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net