ಸಾಮೂಹಿಕ ರಾಜೀನಾಮೆಗೆ ನಿರ್ಧಾರ..!

ಜಮಖಂಡಿ ನಗರದ ರಮಾ ನಿವಾಸದಲ್ಲಿ ಬಿಜೆಪಿ ಮುಖಂಡರು ಸಾಮೂಹಿಕ ರಾಜೀನಾಮೆ ಪತ್ರ ಪ್ರದರ್ಶಿಸಿದರು. ಜಿ.ಪಂ. ಮಾಜಿ ಸದಸ್ಯೆ ಮಹಾದೇವಿ ಮೂಲಿಮನಿ, ತಾ.ಪಂ. ಮಾಜಿ ಅಧ್ಯಕ್ಷೆ, ಸವಿತಾ ಕಲ್ಯಾಣಿ, ರಾಜೇಶ್ವರಿ ವಾಗ್ಮೋರೆ, ಸುಜಾತಾ ಸಾರವಾಡ, ಉಮೇಶ ಆಲಮೇಲ್ಕರ, ಭೀಮಸಿ ಹಾದಿಮನಿ, ಕೃಷ್ಣಾ ರಾಥೋಡ, ಗದಿಗೆಪ್ಪ ಧಾರವಾಡ ಇದ್ದರು.
ಜಮಖಂಡಿ ನಗರದ ರಮಾ ನಿವಾಸದಲ್ಲಿ ಬಿಜೆಪಿ ಮುಖಂಡರು ಸಾಮೂಹಿಕ ರಾಜೀನಾಮೆ ಪತ್ರ ಪ್ರದರ್ಶಿಸಿದರು. ಜಿ.ಪಂ. ಮಾಜಿ ಸದಸ್ಯೆ ಮಹಾದೇವಿ ಮೂಲಿಮನಿ, ತಾ.ಪಂ. ಮಾಜಿ ಅಧ್ಯಕ್ಷೆ, ಸವಿತಾ ಕಲ್ಯಾಣಿ, ರಾಜೇಶ್ವರಿ ವಾಗ್ಮೋರೆ, ಸುಜಾತಾ ಸಾರವಾಡ, ಉಮೇಶ ಆಲಮೇಲ್ಕರ, ಭೀಮಸಿ ಹಾದಿಮನಿ, ಕೃಷ್ಣಾ ರಾಥೋಡ, ಗದಿಗೆಪ್ಪ ಧಾರವಾಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖಂಡ ಉಮೇಶ ಆಲಮೇಲ್ಕರ ಹೇಳಿಕೆ
  • ಮೂಲ ಬಿಜೆಪಿ ಕಾರ್ಯಕರ್ತರ ಕಡೆಗಣನೆ ಆರೋಪ
  • ಶಾಸಕ ಜಗದೀಶ ಗುಡಗುಂಟಿ ವಿರುದ್ಧ ಅಸಮಾಧಾನ
ಜಮಖಂಡಿ : ಕ್ಷೇತ್ರದ ಮೂಲ ಬಿಜೆಪಿ ಕಾರ್ಯಕರ್ತರು ಮನನೊಂದು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮುಖಂಡ ಉಮೇಶ ಆಲಮೇಲ್ಕರ ಹೇಳಿದರು.
ರಮಾನಿವಾಸ ನಿವಾಸದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗುಡಗುಂಟಿ ಅವರಿಗೆ ಸರಿಯಾದ ಮಾಹಿತಿ ನೀಡದೆ ಕೆಲವರು ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಾಣಿಸಿ, ಪಕ್ಷದಲ್ಲಿ ಹೆಸರು ಇಲ್ಲದ, ಸಾರ್ವಜನಿಕವಾಗಿ ಪರಿಚಯ ಇಲ್ಲದವರನ್ನು ಗ್ರಾಮೀಣ ಹಾಗೂ ನಗರ ಮಂಡಲಗಳಿಗೆ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಮೂಲ ಕಾರ್ಯಕರ್ತರಿಗೆ ಯಾವುದೇ ಜವಾಬ್ದಾರಿಗಳನ್ನು ನೀಡದೇ ಕಡೆಗಣಿಸಲಾಗಿದೆ. ಇದರಿಂದ ಮನನೊಂದು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ. ಹಿಂದೂತ್ವ, ಹಿಂದೂ ರಾಷ್ಟ್ರದ ಸಿದ್ಧಾಂತಕ್ಕೆ ತಲೆಬಾಗಿ ಪಕ್ಷಕ್ಕಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇವೆ. ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದೇವೆ. ಪಕ್ಷ ವಲಸಿಗರ ಕೈಗೆ ಸೇರಿ ನಲುಗುವಂತಾಗಿದೆ. ಮೂಲ ಕಾರ್ಯಕರ್ತರು ಪಕ್ಷದ ಹಿರಿಯರೊಂದಿಗೆ ಮಾತನಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಜಿ.ಪಂ. ಮಾಜಿ ಸದಸ್ಯೆ ಮಹಾದೇವಿ ಮೂಲಿಮನಿ, ತಾ.ಪಂ. ಮಾಜಿ ಅಧ್ಯಕ್ಷೆ, ಸವಿತಾ ಕಲ್ಯಾಣಿ, ರಾಜೇಶ್ವರಿ ವಾಗ್ಮೋರೆ, ಸುಜಾತಾ ಸಾರವಾಡ, ಭೀಮಸಿ ಹಾದಿಮನಿ, ಕೃಷ್ಣಾ ರಾಥೋಡ, ಗದಿಗೆಪ್ಪ ದಾರವಾಡ, ನೇಮಿನಾಥ ಆಲಗೂರ, ರಾಜೇಶ್ವರಿ ಕೊಡಗ, ಅಡಿವೆಪ್ಪ ಇಟಗಿ, ಮಹದೇವ ನಾಯಕ, ಸಚಿನ ಜಗಣಿ, ಶಿವಾಜಿ ಸಬಕಾಳೆ, ಉಮೇಶ ಗೌಳಿ, ಅಡಿವೆಪ್ಪ ಕೊಂಕಣಿ, ರಾಜೇಶ ಅರಳಿ, ಶ್ರೀಶೈಲ ಬಾರಿಕಾಯಿ, ಸುರೇಶ ಕುಂಬಾರ, ಸಂಗಮೇಶ ನ್ಯಾಮಗೌಡ, ಲಕ್ಷ್ಮಣ ಬಂಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net