ಹಿಪ್ಪರಗಿ ಬ್ಯಾರೇಜ್‌ನಲ್ಲಿ ಡೆಡ್ ಸ್ಟೋರೇಜ್ ನೀರು ಖಾಲಿ!!

ರಬಕವಿ-ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿನ ನೀರು ಡೆಡ್ ಸ್ಟೋರೇಜ್‌ಗಿಂತ ತೀರ ಪಾತಾಳಕ್ಕೆ ಇಳಿದಿರುವುದು.
ರಬಕವಿ-ಬನಹಟ್ಟಿ ಸಮೀಪದ ಹಿಪ್ಪರಗಿ ಬ್ಯಾರೇಜ್‌ನಲ್ಲಿನ ನೀರು ಡೆಡ್ ಸ್ಟೋರೇಜ್‌ಗಿಂತ ತೀರ ಪಾತಾಳಕ್ಕೆ ಇಳಿದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೇವಲ 7 ದಿನಗಳ ನೀರು ಬಾಕಿ
  • ನೀರಿನ ಪ್ರಮಾಣವೂ ಗಣನೀಯವಾಗಿ ಕಡಿಮೆ
ರಬಕವಿ/ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಡೆಡ್ ಸ್ಟೋರೇಜ್ ಮಟ್ಟಕ್ಕೂ ಕೆಳಗೆ ಇಳಿದಿದೆ. 6 ಟಿಎಂಸಿ ಸಾಮರ್ಥ್ಯದ ಈ ಬ್ಯಾರೇಜ್‌ನಲ್ಲಿ ಈಗ ಉಳಿದಿರುವ ನೀರು ಕೇವಲ ಏಳು ದಿನಗಳಿಗೆ ಮಾತ್ರ ಸಾಕಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಬ್ಯಾರೇಜ್‌ನ 0.8 ಟಿಎಂಸಿ ಡೆಡ್ ಸ್ಟೋರೇಜ್ ನೀರಿನ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಹಿನ್ನೀರಿನ ಪ್ರದೇಶಗಳಾದ ರಬಕವಿ-ಬನಹಟ್ಟಿ, ತೇರದಾಳ ಹಾಗೂ ಅಥಣಿ ಭಾಗದ ನೂರಾರು ಗ್ರಾಮಗಳಿಗೆ ನೀರಿನ ತೀವ್ರ ಅಭಾವ ಎದುರಾಗುವ ಆತಂಕ ವ್ಯಕ್ತವಾಗಿದೆ.
ಕೃಷಿ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಾರದ ಎರಡು ದಿನ ಕೃಷಿಭೂಮಿಗಳಿಗೆ ನೀರಿನ ಬಳಕೆಗೆ ನಿರ್ಬಂಧ ಹೇರಲಾಗಿದ್ದು, ಲಭ್ಯವಿರುವ ನೀರನ್ನು ಕುಡಿಯುವ ಅಗತ್ಯಗಳಿಗೆ ಮೀಸಲಿಡುವ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಜನ-ಜಾನುವಾರು ಕುಡಿಯುವ ನೀರಿನ ಅಗತ್ಯ ಪೂರೈಸುವುದೇ ಪ್ರಮುಖ ಆದ್ಯತೆಯಾಗಲಿದೆ.
ಈ ನಡುವೆ ಮೇಲ್ಭಾಗದಿಂದ ನೀರಿನ ಹರಿವು ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇರುವುದರಿಂದ ಮಹಾರಾಷ್ಟçದಿಂದ ತಕ್ಷಣ ನೀರು ಬಿಡುಗಡೆಗೊಳಿಸಲು ಜನಪ್ರತಿನಿಽಗಳು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net