ಮರಳಿ ಹಣ ನೀಡುವಂತೆ ಗ್ರಾಹಕರ ಗೋಳು

ಬೀಳಗಿ ಪಟ್ಟಣದ ಗಾಂಧಿ ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘದಲ್ಲಿ ಹಣ ಹೂಡಿಕೆ ಮಾಡಿದ ಗ್ರಾಹಕರು ತಮ್ಮ ಹಣ ಮರಳಿ ಕೊಡುವಂತೆ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ ಮಹಿಳಾ ಗ್ರಾಹಕರಿಂದ ಸಂಘದ ಕಚೇರಿಗೆ ೇರಾವ ಹಾಕಿದರು.
ಬೀಳಗಿ ಪಟ್ಟಣದ ಗಾಂಧಿ ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘದಲ್ಲಿ ಹಣ ಹೂಡಿಕೆ ಮಾಡಿದ ಗ್ರಾಹಕರು ತಮ್ಮ ಹಣ ಮರಳಿ ಕೊಡುವಂತೆ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ ಮಹಿಳಾ ಗ್ರಾಹಕರಿಂದ ಸಂಘದ ಕಚೇರಿಗೆ ೇರಾವ ಹಾಕಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಕೋಟ್ಯಾಂತರ ರೂಗಳ ವಂಚನೆ
  • ಒಂದು ವರ್ಷದಿಂದ ಕೇಳುತ್ತ ಬಂದರು ಕೂಡ ಮರಳಿ ಹಣ ಕೊಡದ ಕಾರಣ ಸಂಘದ ಕಚೇರಿಗೆ ಘೇರಾವ ಹಾಕಿ ಪೊಲೀಸ್ ಠಾಣೆಗೆ ದೂರು ನೀಡಲು ನೂರಾರು ಮಹಿಳೆಯರು ಮುಂದಾದರು.
  • ಸುಮಾರು ಕೋಟ್ಯಾಂತರ ಹಣ ಗ್ರಾಹಕರ ಹಣ ದುರ್ಬಳಕ್ಕೆಯಾಗಿದೆ.
ಬೀಳಗಿ: ಪಟ್ಟಣದ ಗಾಂಧಿ ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘದಲ್ಲಿ ಹಣ ಹೂಡಿಕೆ ಮಾಡಿದ ಗ್ರಾಹಕರು ತಮ್ಮ ಹಣ ಮರಳಿ ಕೊಡುವಂತೆ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸುಮಾರು ಒಂದು ವರ್ಷದಿಂದ ಕೇಳುತ್ತ ಬಂದರು ಕೂಡ ಮರಳಿ ಹಣ ಕೊಡದ ಕಾರಣ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ ಸಂಘದ ಮಹಿಳಾ ಸದಸ್ಯ ಗ್ರಾಹಕರಿಂದ ಸಂಘದ ಕಚೇರಿಗೆ ಘೇರಾವ ಹಾಕಿ ಪೊಲೀಸ್ ಠಾಣೆಗೆ ದೂರು ನೀಡಲು ನೂರಾರು ಮಹಿಳೆಯರು ಮುಂದಾದರು.
ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಸುಮಾರು 10ರಿಂದ 15 ಸಂಘಗಳ ರಚನೆ ಮಾಡಿ ಸೇವಾ ಪ್ರತಿನಿಧಿಗಳ ಮೂಲಕ ಹಣ ಸಂಗ್ರಹ ಮಾಡಿ ಮೂರು ವರ್ಷಕ್ಕೆ 7,500 ಗ್ರಾಹಕ ಹಣ ತೊಡಗಿಸಿಕೊಂಡು ಆದರ ಬಡ್ಡಿ 2,500 ಸೇರಿಸಿ 10 ಸಾವಿರ ಹಣ ಕೊಡುವುದಾಗಿ ನಂಬಿಸಿ ಅವರಿಂದ ಹಣ ಸಂಗ್ರಹ ಮಾಡಿದ್ದಾರೆ. ಅವದಿ ಮುಗಿದಿದೆ ಮರಳಿ ಆವು ಹಣ ಕೇಳಲು ಹೋದಾಗ ಇಂದು ನಾಳೆ ಅನುತ್ತೇಲ್ಲ ಸುಮಾರು ಒಂದು ವರ್ಷವಾದರೂ ಇನ್ನೂ ವರಗೆ ಮರಳಿ ಹಣ ನೀಡಿಲ್ಲ. ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಹಿ ಮಾಡಿ ನಿಮ್ಮ ಹಣವನ್ನು ಬ್ಯಾಂಕಿನಲ್ಲಿ ಪಡೆದುಕೊಳ್ಳಿ ಎಂದು ಅವರೆಲ್ಲರಿಗೂ ಎಸ್‌ಬಿಐ ಬ್ಯಾಂಕ್ ಖಾತೆಯ ಚೆಕ್ ನೀಡಿದ್ದಾರೆ. ಎಸ್‌ಬಿಐ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇರುವುದು ಗೋತ್ತಾಗಿದ್ದರಿಂದ ಜನರು ಎಚ್ಚರಗೊಂಡು ನಾವು ಮೊಸ ಹೋಗಿದ್ದೇವೆ. ನಾವು ಸಂಘದಲ್ಲಿ ನಮ್ಮ ಹಣ ಕೊಡಿ ಎಂದು ಕೇಳಿದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಮಾಡಲು ಬಂದು ನೀವು ಪೊಲೀಸ್‌ರ ಹತ್ತಿರ ನಮ್ಮೇಲ್ಲ ಕಂಪ್ಲೀಟ್ ಕೊಡಿ ನಾವು ನೋಡಿಕೊಳ್ಳುತ್ತೇವೆ ಎಂದು ನಮ್ಮ ದಬಾಯಿಸುತ್ತಾರೆ ಎಂದು ಮಹಿಳೆಯ ದೂರಿದರು. ಇವತ್ತು ಅವರು ನಮಗೆ ಸಿಕ್ಕಿದ್ದಾರೆ ನಮಗೆ ಹಣ ಕೋಡಿ ಇಲ್ಲಾಂದರೆ ನಿಮಗೆ ಬೀಡುವುದಿಲ್ಲ ಹೇಳಿ ವಾಗ್ದಾದಕ್ಕೆ ನಡೆಯಿತು.
ತಾಲೂಕಿನಲ್ಲಿ ಸುಮಾರು ಪ್ರತಿಯೊಂದು ಗ್ರಾಮದಲ್ಲಿ ಹತ್ತಾರು ಸಂಘಗಳ ಮೂಲಕ ಸುಮಾರ. 270 ಮಹಿಳಾ ಸಂಘಗಳು ಮೂಲಕ ಹಣ ಸಂಗ್ರವಾಹಿದೆ. ಸುಮಾರು ಕೋಟ್ಯಾಂತರ ಹಣ ಗ್ರಾಹಕರ ಹಣ ದುರ್ಬಳಕ್ಕೆಯಾಗಿದೆ.
ಈ ಘಟನೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಿಪಿಐ ಹಣಮಂತ ಸಣಮನಿ, ವಂಚನೆಯಾಗಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ಕೋಡಿ ಅವರನ್ನು ಕರೆಯಿಸಿ ವಿಚಾರಣೆ ಮಾಡುತ್ತೇವೆ ಎಂದರು.
ಬಾಗಲಕೋಟೆ ಡಿವೈಎಸ್ಪಿ ಗಜಾನನ ಸುತಾರ ಆಗಮಿಸಿ ಮಾತನಾಡಿ, ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘದ ಜವಾಬ್ದಾರಿ ಇದ್ದ ಸಂಘದ ಅಧ್ಯಕ್ಷೆ ಮತ್ತು ಕಾರ್ಯದರ್ಶಿಗಳಿಗೆ ವಿಚಾರಣೆ ಮಾಡಿದ ನಂತರ ಹಣ ಕಳೆದುಕೊಂಡು ವಂಚನೆಗೊಳಾದ ಗ್ರಾಹಕರಿಂದ ವಿವರಣೆ ಪಡೆದು ಇಂತಹ ಕೆಲವು ಸಂಘಗಳು ಹಲವು ಮೊಸಮಾಡಿದ್ದು ಹಲವಾರು ಬಾರಿ ಪತ್ರಿಕೆಯಲ್ಲಿ ವರದಿಗಳು ಪ್ರಕಟ ಮತ್ತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಇನ್ನೂ ಜನರು ಜಾಗೃತ ಗೊಂಡಿಲ್ಲ. ಈ ಪ್ರಕರಣವು ಒಂದು ಗಂಭೀರ ಪ್ರಕರಣವಾಗಿದೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸಂಘದಲ್ಲಿ ಹಣ ತೊಡಗಿದುವುದು ಕಾನೂನು ಬದ್ಧವಾಗಿದೋ ಅಥವಾ ಇಲ್ಲ ಅನುವುದು ಸಹಕಾರ ಇಲಾಖೆಯಲ್ಲಿ ವಿಚಾರಣೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಂಘದಲ್ಲಿ ಯಾರ್ಯಾರು ಹಣ ತೋಡಸಿದ್ದಾರೆ ಅವರಿಗೆ ನ್ಯಾಯುತವಾಗಿ ಹಣ ಮರಳಿ ಕೊಡಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net