ಜೀವನದಲ್ಲಿ ಉತ್ತಮ ಸಂಸ್ಕಾರ ರೂಢಿಸಿಕೊಳ್ಳಿ

 ಮಹಾಲಿಂಗಪುರದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಾಲಿಂಗಪ್ಪ ಕುಳ್ಳೊಳ್ಳಿ, ಬಸವರಾಜ ಘಟ್ನಟ್ಟಿ, ಬಸವರಾಜ ಢಪಳಾಪುರ ಇತರರಿದ್ದರು.
ಮಹಾಲಿಂಗಪುರದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಹಾಲಿಂಗಪ್ಪ ಕುಳ್ಳೊಳ್ಳಿ, ಬಸವರಾಜ ಘಟ್ನಟ್ಟಿ, ಬಸವರಾಜ ಢಪಳಾಪುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಆರ್.ಆರ್. ಪಾಟೀಲ ಸಲಹೆ
  • ಸಮಾಜದಿಂದ ಪ್ರತಿಭಾ ಪುರಸ್ಕಾರ
  • ಸಾಧಕರಿಗೆ ಸನ್ಮಾನ
ಮಹಾಲಿಂಗಪುರ: ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಬೆಳೆಸಿಕೊಂಡರೆ ಸಮಾಜಕ್ಕೆ ಆಸ್ತಿಯಾಗಿ, ಉತ್ತಮ ಪ್ರಜೆಯಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಎಂದು ರಬಕವಿ-ಬನಹಟ್ಟಿ ಸಿಪಿಐ ಆರ್.ಆರ್. ಪಾಟೀಲ ಹೇಳಿದರು.
ಪಟ್ಟಣದ ಟೊಣಪಿನಾಥ ಸಾಂಸ್ಕೃತಿಕ ಭವನದಲ್ಲಿ ಬಣಜಿಗ ಸಮಾಜದ ಕ್ಷೇಮಾಭಿವದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಭ್ರಾತತ್ವದ ಭಾವ ಕುಗ್ಗಿ, ಸಂಬಂಧಗಳು ದೂರವಾಗಿ, ವಸ್ತು ಪ್ರಧಾನ ಜೀವನದತ್ತ ಒಲವು ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನಮ್ಮಲ್ಲಿ ಸಹಜ ಪ್ರೀತಿ ಬಂದಲ್ಲಿ ಮಾತ್ರ ನಾವು ಪಡೆದಿರುವ ಶಿಕ್ಷಣಕ್ಕೊಂದು ಅರ್ಥ ಬರುತ್ತದೆ ಎಂದರು.
ಜಮಖಂಡಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಯಶವಂತ ಕೊಕ್ಕನವರ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆ ತೊರೆದು ಆತ್ಮವಿಶ್ವಾಸ ಮತ್ತು ಛಲ ಬೆಳೆಸಿಕೊಳ್ಳಬೇಕು. ಅಶ್ಲೀಲತೆ ಹಾಗೂ ದ್ವೇಷ ಪ್ರಚಾರದ ಪ್ರಭಾವದಿಂದ ದೂರವಿದ್ದು ಗುರಿ ಸಾಧನೆ ಕಡೆಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಹೊಳಬಸು ಬಾಳಶೆಟ್ಟಿ, ರಮೇಶ ಹರಕಂಗಿ ಮಾತನಾಡಿದರು. ಸಮಾಜದ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಕೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ದ್ವಿತೀಯ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಮಾಡಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾಜದ ಉಪಾಧ್ಯಕ್ಷ ಬಸವರಾಜ ಘಟ್ನಟ್ಟಿ, ಈಶ್ವರ ಬಿದರಿ, ಬಸವರಾಜ ಢಪಳಾಪುರ, ಮಹಾದೇವಪ್ಪ ಅಂಗಡಿ, ರಾಚಪ್ಪ ಕುಳ್ಕೊಳ್ಳಿ, ಪ್ರವೀಣ ಅವರಾದಿ, ಚಂದ್ರಶೇಖರ ಗೊಂದಿ, ಮಹಾಲಿಂಗಪ್ಪ ಅವರಾದಿ, ಚನಬಸಪ್ಪ ಹೊಸೂರ, ಸಂಜು ಅಂಗಡಿ, ಡಾ. ರಮೇಶ ಹರಕಂಗಿ, ಶಶಿಕಲಾ ಅವರಾದಿ, ಶೈಲಾ ಶೆಟ್ಟರ, ಪಲ್ಲವಿ ಘಟ್ನಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net