ಕೂಡಲ ಸಂಗಮಕ್ಕೆ ಭಕ್ತರ ದಂಡು

ಶಿವರಾತ್ರಿಯ ನಿಮಿತ್ತ ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು
ಶಿವರಾತ್ರಿಯ ನಿಮಿತ್ತ ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗ್ಗೆಯಿಂದ ದರ್ಶನಕ್ಕೆ ಜನ ಸಾಗರ
  • ಸಂಗಮನಾಥನಿಗೆ ವಿಶೇಷ ಪೂಜೆ
ಕೂಡಲಸಂಗಮ: ಕೃಷ್ಣಾ, ಮಲಪ್ರಭಾ ನದಿಯ ಸಂಗಮವಾದ ಕೂಡಲಸಂಗಮಕ್ಕೆ ಶಿವರಾತ್ರಿಯ ನಿಮಿತ್ತ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡಿ ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆದು ಶಿವರಾತ್ರಿ ಆಚರಿಸಿದರು.
ಕೆಲವು ಭಕ್ತರು ಕುಟುಂಬ ಸಮೇತ ಆಗಮಿಸಿ ದೇವರ ದರ್ಶನ ಪಡೆದು ದೇವಾಲಯ ಆವರಣದಲ್ಲಿ ಹಣ್ಣು, ಸಿಹಿಭೋಜನ ಸವೆದರು, ಇನ್ನೂ ಕೆಲವು ಭಕ್ತರು ಬೆಳಗ್ಗೆಯಿಂದ ನದಿಯ ದಡದಲ್ಲಿ ಶಿವನಾಮಸ್ಮರಣ ಮಾಡಿ ಮಧ್ಯಾಹ್ನ 3 ಗಂಟೆಗೆ ಕೃಷ್ಣಾ, ಮಲಪ್ರಭಾ ನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಕ್ಷೇತ್ರಾಧಿಪತಿ ಸಂಗಮನಾಥನಿಗೆ ವಿಶೇಷ ಅಭಿಷೇಕ ಮಾಡಿಸಿದರು.
ಶನಿವಾರ ರಾತ್ರಿಯೇ ಕೆಲವು ಭಕ್ತರು ಆಗಮಿಸಿ ದೇವಾಲಯ ಆವರಣದಲ್ಲಿಯೇ ವಾಸ್ತವ್ಯ ಮಾಡಿ ಬೆಳಗ್ಗೆ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ತೆರಳಿದರು. ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ಭಕ್ತರು ದರ್ಶನಕ್ಕೆ ಸರದಿ ಆರಂಭವಾಗಿತ್ತು. ಮಧ್ಯಾಹ್ನ 4 ಗಂಟೆಯ ನಂತರ ಭಕ್ತರ ಸಂಖ್ಯೆ ಅಧಿಕಗೊಂಡಿತು.
ದರ್ಶನಕ್ಕಾಗಿ 1 ಗಂಟೆ ಸರದಿಯ ಸಾಲಿನಲ್ಲಿ ನಿಂತರು. ಶಿವರಾತ್ರಿಯ ನಿಮಿತ್ತ ದೇವಾಲಯ ಮುಂಭಾಗದಲ್ಲಿ ಹಣ್ಣುಗಳ ವ್ಯಾಪಾರ ಅಽಕ ಇತ್ತು. ಈ ವರ್ಷ ಶಿವರಾತ್ರಿ ಭಾನುವಾರ ಬಂದಿರುವುದರಿಂದ ಭಕ್ತರ ಸಂಖ್ಯೆ ಅಽಕವಾಗಿತ್ತು ಎಂದು ಅರ್ಚಕ ಕರಸಂಗಯ್ಯ ಗುಡಿ ಹೇಳಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net