ಆರೋಗ್ಯಕರ ಜೀವನ ರೂಪಿಸಿಕೊಳ್ಳಿ

ಕಮತಗಿಯ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ವ್ಯಸನಮುಕ್ತ ದಿನಾಚರಣೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಪಿ.ಎಂ. ಗುರುವಿನಮಠ ಮಾತನಾಡಿದರು. ಉಪನ್ಯಾಸಕಿಯರಾದ ಪ್ರೊ. ಕೆ.ಜಿ. ಅಂಗಡಿ, ಪ್ರೊ. ಎ.ಎಸ್. ಪುರಾಣಿಕಮಠ ಸೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಮತಗಿಯ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ವ್ಯಸನಮುಕ್ತ ದಿನಾಚರಣೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಪಿ.ಎಂ. ಗುರುವಿನಮಠ ಮಾತನಾಡಿದರು. ಉಪನ್ಯಾಸಕಿಯರಾದ ಪ್ರೊ. ಕೆ.ಜಿ. ಅಂಗಡಿ, ಪ್ರೊ. ಎ.ಎಸ್. ಪುರಾಣಿಕಮಠ ಸೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ. ಪಿ.ಎಂ. ಗುರುವಿನಮಠ ಹೇಳಿಕೆ
  • ಪ್ರತಿಭಾ ಪ್ರದರ್ಶನ ಕಾರ್ಯಕ್ರಮ
ಕಮತಗಿ :

ಇಂದಿನ ಯುವ ಜನತೆ ಮದ್ಯಪಾನ, ಧೂಮಪಾನ ಸೇರಿ ವಿವಿಧ ಮಾದಕ ವ್ಯಸನಗಳಿಂದ ದೂರವಿದ್ದು, ತಮ್ಮ ಆರೋಗ್ಯ ಹಾಗೂ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ.ಎಂ. ಗುರುವಿನಮಠ ಹೇಳಿದರು.

ಪಟ್ಟಣದ ಗ್ರಾಮೀಣ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಸಂಯೋಜಿತ ಜಮಖಂಡಿಯ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ಡಾ. ಲಿಂ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವ್ಯಸನಗಳು ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ಸಮಯ ಮತ್ತು ಸಾಮರ್ಥ್ಯವನ್ನು ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಸಾಧನೆಯತ್ತ ಕೇಂದ್ರೀಕರಿಸಿದರೆ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.
ಉಪನ್ಯಾಸಕಿಯರಾದ ಪ್ರೊ. ಕೆ.ಜಿ. ಅಂಗಡಿ ಹಾಗೂ ಪ್ರೊ. ಎ.ಎಸ್. ಪುರಾಣಿಕಮಠ ವ್ಯಸನಮುಕ್ತ ಜೀವನದ ಮಹತ್ವ ಕುರಿತು ಮಾತನಾಡಿದರು.
ಪ್ರೊ. ಆರ್.ಜಿ. ಚಿತ್ತವಾಡಗಿ, ಪ್ರೊ. ಜಿ.ಎಸ್. ಬಾದವಾಡಗಿ, ಪ್ರೊ. ಎಂ.ಎಸ್. ಶೆಟ್ಟರ, ಬಿ.ಆರ್. ಕುಬಸದ, ನಾರಾಯಣ ಹುಲಮನಿಗೌಡ್ರ, ಎಸ್.ಎಸ್. ಬುಗಟಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net