ಈಗಾಗಲೇ 39,136 ಮತದಾರರನ್ನು ಸ್ಥಳಾಂತರಿಸಲಾಗಿದೆ. ಡಬಲ್ ಇದ್ದವರು 8475, ಇತರೆ 343 ಇದ್ದು, ಗಣತಿ ಕಾರ್ಯದಲ್ಲಿ ಗೈರು ಹಾಜರಿದ್ದವರ ಸಂಖ್ಯೆ 949 ಇದೆ. ಇದರ ಪಟ್ಟಿಯನ್ನು ಬೂತ್‌ಮಟ್ಟದ ಏಜಂಟರಿಗೆ ನೀಡಿದ್ದು, ಮತದಾರರ ವಿವರ ಕುರಿತು ಆಕ್ಷೇಪಣೆಗಳು ಇದ್ದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ಗಣಕೀಕರಣ ಕಾರ್ಯ ಇನ್ನು ಶೇ. 30ರಷ್ಟು ಬಾಕಿ ಉಳಿದಿದ್ದು, ರಾಜಕೀಯ ಪಕ್ಷದ ಪ್ರತಿನಿಧಿಗಳು ತಮ್ಮ ಪಕ್ಷದ ಬೂತ್‌ಮಟ್ಟದ ಏಜಂಟರಿಗೆ ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಮೂಲಕ ಮತಗಟ್ಟೆ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಹೇಳಿದರು.