ಗ್ರಾಮೀಣ ಶಿಕ್ಷಣಕ್ಕೆ ಸಿಕ್ಕ ಕೊಡುಗೆ

ಮುಧೋಳ ತಾಲೂಕಿನ ಉತ್ತೂರ ಗ್ರಾಮದಲ್ಲಿ ನೂತನ ಸರ್ಕಾರಿ ವಾಣಿಜ್ಯ ಪದವಿ ಪೂರ್ವ ಕಾಲೇಜ್ ಪ್ರಾರಂಭವಾಯಿತು. ಶಂಕರ ತಿಮ್ಮಾಪೂರ, ಕೆ.ಟಿ. ಪಾಟೀಲ್, ಕಲ್ಲಪ್ಪ ಮಳಲಿ, ಅಪ್ಪಾಸಾಹೇಬ ನಿಂಬಾಳಕರ, ಎ.ಕೆ. ಬಶೆಟ್ಟಿ, ಎಸ್.ಎನ್. ಪಡಸಲಗಿ ಇತರರಿದ್ದರು.
ಮುಧೋಳ ತಾಲೂಕಿನ ಉತ್ತೂರ ಗ್ರಾಮದಲ್ಲಿ ನೂತನ ಸರ್ಕಾರಿ ವಾಣಿಜ್ಯ ಪದವಿ ಪೂರ್ವ ಕಾಲೇಜ್ ಪ್ರಾರಂಭವಾಯಿತು. ಶಂಕರ ತಿಮ್ಮಾಪೂರ, ಕೆ.ಟಿ. ಪಾಟೀಲ್, ಕಲ್ಲಪ್ಪ ಮಳಲಿ, ಅಪ್ಪಾಸಾಹೇಬ ನಿಂಬಾಳಕರ, ಎ.ಕೆ. ಬಶೆಟ್ಟಿ, ಎಸ್.ಎನ್. ಪಡಸಲಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆ.ಟಿ. ಪಾಟೀಲ ಹೇಳಿಕೆ
  • ಉತ್ತೂರಿನಲ್ಲಿ ಸರ್ಕಾರಿ ವಾಣಿಜ್ಯ ಪಿಯು ಕಾಲೇಜ್ ಆರಂಭ
ಮುಧೋಳ: ಉತ್ತೂರ ಗ್ರಾಮದಲ್ಲಿ ಸರ್ಕಾರಿ ವಾಣಿಜ್ಯ ಪದವಿ ಪೂರ್ವ ಕಾಲೇಜ್ ಸ್ಥಾಪನೆಯಾಗಿದ್ದು ಸಂತಸ ತಂದಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಬದಲಾವಣೆಯಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಕೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಉತ್ತೂರ ಗ್ರಾಮದಲ್ಲಿ ಸೋಮವಾರ ನೂತನ ಸರ್ಕಾರಿ ವಾಣಿಜ್ಯ ಪದವಿ ಪೂರ್ವ ಕಾಲೇಜ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕಾಲೇಜ್ ಪ್ರಾರಂಭವಾಗಿರುವುದು ಸ್ಥಳೀಯ ವಿದ್ಯಾರ್ಥಿಗಳಿಗೆ ಸಿಕ್ಕ ದೊಡ್ಡ ಕೊಡುಗೆಯಾಗಿದೆ ಎಂದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ಹಾಗೂ ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ನಿರಂತರ ಪ್ರಯತ್ನದಿಂದ ಈ ಕಾಲೇಜ್ ಆರಂಭವಾಗಿದ್ದು, ಇದು ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಹೇಳಿದರು.
ಪ್ರಾಚಾರ್ಯ ಎಸ್.ಎನ್. ಪಡಸಲಗಿ ಮಾತನಾಡಿ, ವಾಣಿಜ್ಯ ಶಿಕ್ಷಣದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ಹಿರಿಯ ಮುಖಂಡ ಶಂಕರ ತಿಮ್ಮಾಪೂರ ಹಾಗೂ ನಿವೃತ್ತ ಮೇಜರ್ ಅಪ್ಪಾಸಾಹೇಬ ನಿಂಬಾಳಕರ ಜಂಟಿಯಾಗಿ ಮಾತನಾಡಿ, ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಮೂಲಾಧಾರವಾಗಿದ್ದು, ಈ ಕಾಲೇಜ್ ಉತ್ತೂರ ಸೇರಿ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಜ್ಞಾನಕೇಂದ್ರವಾಗಲಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶಾಂತಯ್ಯ ಹಿರೇಮಠ ಮತ್ತು ಶೇಖರಯ್ಯ ಮಠಪತಿ ಅವರು, ವಿದ್ಯಾರ್ಥಿಗಳಿಗೆ ಸನ್ಮಾರ್ಗದ ಆಶೀರ್ವಚನ ನೀಡಿದರು. ಎ.ಕೆ. ಬಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಯಶಸ್ಸಿನ ಮಾರ್ಗದರ್ಶನ ನೀಡಿದರು. ಅತಿಥಿಗಳು ವಿದ್ಯಾರ್ಥಿಗಳಿಗೆ ಹೂ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಕಲ್ಲಪ್ಪ ಮಳಲಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಮಠಪತಿ, ರಮೇಶ ಪರೀಟಿ, ಪರಮಾನಂದ ಚಿಗರಿ, ಹನಮಂತ ಗುಡೆಪ್ಪನವರ, ಮಲ್ಲಪ್ಪ ಇರಪ್ಪನವರ, ಕುಮಾರ ಮಿರ್ಜಿ ಸೇರಿ ಗಣ್ಯರು, ಗ್ರಾಮಸ್ಥರು ಹಾಗೂ ಪಾಲಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net