ಕಲಾದಗಿಯಲ್ಲಿ ಸುಸಜ್ಜಿತ ಹಿಂದೂ ರುದ್ರಭೂಮಿ ನಿರ್ಮಾಣ

 ಕಲಾದಗಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಹಿಂದೂ ರುದ್ರಭೂಮಿ
ಕಲಾದಗಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಹಿಂದೂ ರುದ್ರಭೂಮಿ
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಓ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ
  • ಗ್ರಾಪಂನಿಂದ ಇನ್ನುಳಿದ ಕೆಲಸ
  • ಅಂತ್ಯಕ್ರಿಯೆ ನಡೆಸುವುದಕ್ಕೂ ಅಸೌಕರ್ಯವಾಗಿತ್ತು
ಕಲಾದಗಿ: ಅಂಕಲಗಿ ರಸ್ತೆಯಲ್ಲಿರುವ ಗ್ರಾಮ ಪ್ರಮುಖ ಹಿಂದೂ ರುದ್ರಭೂಮಿ ದೀರ್ಘಕಾಲದ ನಿರ್ಲಕ್ಷೃದಿಂದ ಹಾಳಾಗಿದ್ದ ಸ್ಥಿತಿಯಿಂದ ಹೊರಬಂದು ಇದೀಗ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ಹಲವು ವರ್ಷಗಳಿಂದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ದುಸ್ಥಿತಿಯಲ್ಲಿದ್ದ ಈ ರುದ್ರಭೂಮಿಯಲ್ಲಿ ಶವಾಗಾರದ ಕಟ್ಟೆ ಹಾನಿಗೊಳಗಾಗಿದ್ದು, ಮೇಲ್ಚಾವಣಿಯ ತಗಡೂ ಕಿತ್ತುಹೋಗಿ, ಅಂತ್ಯಕ್ರಿಯೆ ನಡೆಸುವುದಕ್ಕೂ ಅಸೌಕರ್ಯವಾಗಿತ್ತು. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ.
ಈ ಸಮಸ್ಯೆಯನ್ನು ಗಮನಿಸಿದ ತಾಪಂ ಇಓ ಸುಭಾಷ ಸಂಪಗಾವಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ತಮ್ಮ ಅನುದಾನದಿಂದ ಅಭಿವದ್ಧಿ ಮಾಡುವ ಭರವಸೆ ನೀಡಿದರು. ಅದರಂತೆ ತಾಪಂ ವತಿಯಿಂದ 5 ಲಕ್ಷ ರೂ. ಅನುದಾನ ನೀಡಲಾಗಿದ್ದು, ರುದ್ರಭೂಮಿಯ ಶವಾಗಾರ ಕಟ್ಟೆ ಹಾಗೂ ಆವರಣವನ್ನು ಸುಧಾರಿಸಿ, ರಸ್ತೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಇನ್ನು ನೀರು ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಶೀಘ್ರದಲ್ಲೇ ಕಲ್ಪಿಸಲಾಗುವುದು ಎಂದು ಗ್ರಾಪಂ ಪಿಡಿಓ ಖಾದರ ಮುಲ್ಲಾ ತಿಳಿಸಿದ್ದಾರೆ.
"

ಅನೇಕ ಬಾರಿ ಗ್ರಾಪಂನವರಿಗೆ ಮನವಿ ಮಾಡಿದರು ಈ ರುದ್ರಭೂಮಿ ದುರಸ್ಥಿಯಾಗಿರಲಿಲ್ಲ. ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಬಂದಕೂಡಲೇ ಬಾಗಲಕೋಟೆ ತಾಪಂ ಇಒ ಸುಭಾಷ ಸಂಪಗಾವಿ ಅವರು ತಮ್ಮ ಅನುದಾನವನ್ನು ನೀಡಿ ಈ ರುದ್ರಭೂಮಿಯನ್ನು ಸುಸಜ್ಜಿತಗೊಳಿಸಿರುವುದಕ್ಕೆ, ಬೆಳಕಿನ ಹಾಗೂ ನೀರಿನ ವ್ಯವಸ್ಥೆ ಮಾಡಲಿರುವ ಸ್ಥಳಿಯ ಗ್ರಾಪಂನವರಿಗೆ ಧನ್ಯವಾದಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net