ಪರ್ವತಿ ಹಳ್ಳಕ್ಕೆ ನೂತನ ಸೇತುವೆ ನಿರ್ಮಾಣ

ಗುಳೇದಗುಡ್ಡದ ಸಮೀಪದ ಪರ್ವತಿ ಗ್ರಾಮದ ಹಳ್ಳದ ಸೇತುವೆ ನಿರ್ಮಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ರಾಜು ತಾಪಡಿಯಾ, ನ್ಯಾಯವಾದಿ ಸುಭಾಷ ಹೊಸಮನಿ. ಫಕೀಪ್ಪ ತಳವಾರ, ರಮೇಶ ಬೂದಿಹಾಳ, ಚಿದಾನಂದಸಾ ಕಾಟವಾ ಇತರರಿದ್ದರು.
ಗುಳೇದಗುಡ್ಡದ ಸಮೀಪದ ಪರ್ವತಿ ಗ್ರಾಮದ ಹಳ್ಳದ ಸೇತುವೆ ನಿರ್ಮಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಿದರು. ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ರಾಜು ತಾಪಡಿಯಾ, ನ್ಯಾಯವಾದಿ ಸುಭಾಷ ಹೊಸಮನಿ. ಫಕೀಪ್ಪ ತಳವಾರ, ರಮೇಶ ಬೂದಿಹಾಳ, ಚಿದಾನಂದಸಾ ಕಾಟವಾ ಇತರರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಗುಳೇದಗುಡ್ಡ

ಪರ್ವತಿ, ಕೆರಿಕಾನಾಪೂರ, ಹಲ್ಲಿಕೇರಿ ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕಿಸುವ ಹಳ್ಳದ ಸೇತುವೆ ೪೦-೫೦ ವರ್ಷಗಳಿಂದ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಈ ಸೇತುವೆ ಮೇಲೆ ನೀರು ತುಂಬಿಹರಿದು ಪಟ್ಟಣದೊಂದಿಗೆ ಗ್ರಾಮಗಳ ಸಂಪರ್ಕ ಕಡಿದು ಹೋಗುತ್ತಿತ್ತು, ಈ ಹಿನ್ನೆಲೆಯಲ್ಲಿ ಈ ಹಳ್ಳಕ್ಕೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಪಟ್ಟಣ ಸಮೀಪದ ಪರ್ವತಿ ಗ್ರಾಮದ ಹಳ್ಳಕ್ಕೆ ಲೋಕೋಪಯೋಗಿ ಇಲಾಖೆಯಿಂದ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸೇತುವೆಗಳು ಗ್ರಾಮ ಹಾಗೂ ಪಟ್ಟಣಗಳ ನಡುವೆ ಸಂಬಂಧ ಬೆಸೆಯುವ ಕೆಲಸ ಮಾಡುತ್ತವೆ ಎಂದರು.

ಈ ಸೇತುವೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಗ್ರಾಮಸ್ಥರು ಒತ್ತಾಯಿಸುತ್ತಿದ್ದರು. ಸೇತುವೆ ನಿರ್ಮಾಣದಿಂದ ಹಳ್ಳದಲ್ಲಿ ದೊಡ್ಡ ಪ್ರಮಾಣದ ನೀರು ಬಂದರೂ ಗ್ರಾಮಗಳ ಸಂಪರ್ಕ ಕಡಿತಗೊಳ್ಳುವುದಿಲ್ಲ. ಇದರಿಂದ ಗ್ರಾಮಸ್ಥರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇದಲ್ಲದೇ ಇದೇ ಹಳ್ಳಕ್ಕೆ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಅನುದಾನ ದೊರೆತಿದ್ದು ಆದಷ್ಟು ಶೀಘ್ರ ಆ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

ಬಾದಾಮಿ ಮತಕ್ಷೇತ್ರ ಎಲ್ಲ ಗ್ರಾಮ, ಪಟ್ಟಣಗಳ ಅಭಿವೃದ್ಧಿಗೆ ಯಾವುದೇ ಪಕ್ಷ, ಜಾತಿ, ಧರ್ಮ ಬೇಧ ಮಾಡದೇ ಅನುದಾನ ತಂದು ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಪಟ್ಟಣದಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ಭೂಮಿ ಹುಡುಕಾಟ ನಡೆಸಿದ್ದು, ಆದಷ್ಟು ಶೀಘ್ರ ಮಿನಿ ವಿಧಾನಸೌಧ ನಿರ್ಮಿಸಲು ಭೂಮಿ ಪೂಜೆ ಮಾಡಲಾಗುವುದು ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ, ರಾಜು ತಾಪಡಿಯಾ, ನ್ಯಾಯವಾದಿ ಸುಭಾಷ ಹೊಸಮನಿ, ಫಕೀಪ್ಪ ತಳವಾರ, ರಮೇಶ ಬೂದಿಹಾಳ, ಚಿದಾನಂದಸಾ ಕಾಟವಾ, ರಜಾಕ ಕುದರಿ, ಯಮನಪ್ಪ ಗೌಡರ, ಮೋತಿಲಾಲ ರಾಠೋಡ, ಲೆಂಕಪ್ಪೆ ಹಿರೇಕುರುಬರ, ಸಲೀಮ ಮೊಮಿನ, ರಾಜು ಸಂಗಮ, ಬಸನಗೌಡ ಗೌಡರ, ಅಮರೇಶ ಬಸನಗೌಡ, ಭೀಮಾಶಂಕರ ದೇಸಾಯಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net