ಕಾಂಗ್ರೆಸ್ ಗೆಲುವು ಸೂರ್ಯನಷ್ಟೇ ಸತ್ಯ

ಜಮಖಂಡಿ ನಗರದ ಕಾಂಗ್ರೆಸ್ ಮುಖಂಡ ಡಾ.ತೌಫಿಕ ಪಾರ್ಥನಳ್ಳಿ ಅವರ ನಿವಾಸದಲ್ಲಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿದರು. ಅಬುಬಕರ ಕುಡಚಿ, ಬಿ.ಜಿ. ಪಾಟೀಲ ಇತರರಿದ್ದಾರೆ.
ಜಮಖಂಡಿ ನಗರದ ಕಾಂಗ್ರೆಸ್ ಮುಖಂಡ ಡಾ.ತೌಫಿಕ ಪಾರ್ಥನಳ್ಳಿ ಅವರ ನಿವಾಸದಲ್ಲಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿದರು. ಅಬುಬಕರ ಕುಡಚಿ, ಬಿ.ಜಿ. ಪಾಟೀಲ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಉಪ ಚುನಾವಣೆ
  • ಕಾಂಗ್ರೆಸ್ ಅಭ್ಯರ್ಥಿ
ಜಮಖಂಡಿ: ಉಪ ಚುನಾವಣೆಯಲ್ಲಿ ಜನರ ಅಭೂತಪೂರ್ವ ಉತ್ಸಾಹ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವುದು ಸೂರ್ಯನಷ್ಟೇ ಸತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಮುಖಂಡ ಡಾ. ತೌಫಿಕ್ ಪಾರ್ಥನಳ್ಳಿ ಅವರ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯ ಹಿಂದೂತ್ವದ ಅಜೆಂಡಾವನ್ನು ಕಠಿಣವಾಗಿ ಟೀಕಿಸುತ್ತಾ ಬಿಜೆಪಿಯವರು ಮಾತ್ರ ಹಿಂದೂಗಳಾ? ನಾವೆಲ್ಲ ಯಾರು? ನಾವೂ ಹಿಂದೂಗಳೇ. ಆದರೆ ನಮ್ಮದು ಬಸವಣ್ಣನವರ ತತ್ವದ, ಪರಮಹಂಸರ, ಸ್ವಾಮಿ ವಿವೇಕಾನಂದರ ತತ್ವದ ಹಿಂದೂತ್ವ. ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿ ಸಂವಿಧಾನದ ಅಡಿಯಲ್ಲಿ ಎಲ್ಲ ಜಾತಿ-ಧರ್ಮದವರು ಅಣ್ಣ-ತಮ್ಮಂದಿರಂತೆ ಬದುಕುವುದು ನಮ್ಮ ಹಿಂದೂತ್ವವಾಗಿದೆ. ದಲಿತರು, ಹಿಂದುಳಿದವರು ಹಿಂದೂಗಳಲ್ಲವೇ? ಹಿಂದೂತ್ವ ಎಂಬುದು ಯಾರೊಬ್ಬರ ಖಾಸಗಿ ಆಸ್ತಿಯಲ್ಲ, ಅದು ನಮ್ಮೆಲ್ಲರ ಆಸ್ತಿ ಎಂದು ಗುಡುಗಿದರು.
ಆಲಮಟ್ಟಿ ಜಲಾಶಯದ ವಿಚಾರವಾಗಿ ಮಾತನಾಡುತ್ತಾ, ಗೆಜೆಟ್ ಅಽಸೂಚನೆ ಹೊರಡಿಸುವ ಯೋಗ್ಯತೆ ಇಲ್ಲದವರು ನಮ್ಮನ್ನು ಟೀಕಿಸುತ್ತಿದ್ದಾರೆ. ಗೆಜೆಟ್ ಆಗದಿದ್ದರೂ ನಾವು ರೈತರಿಗೆ 30 ರಿಂದ 40 ಲಕ್ಷ ರೂ. ಗಳವರೆಗೆ ಪರಿಹಾರ ನೀಡುತ್ತಿದ್ದೇವೆ. ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿರುವ ಬಿಜೆಪಿಯವರಿಗೆ ಆಲಮಟ್ಟಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಅಂಜುಮನ್ ಕಮಿಟಿ ಅಧ್ಯಕ್ಷ ಡಾ. ತೌಫಿಕ್ ಪಾರ್ಥನಳ್ಳಿ, ಅಪ್ಪಾಸಾಬ ಮನಗೂಳಿ, ಬಿ.ಜಿ. ಪಾಟೀಲ, ರಾಜೇಸಾಬ ಸೌದಾಗರ, ಅಬೂಬಕರ್ ಕುಡಚಿ, ಹಣಮಂತ ತೇಲಿ, ಜಬ್ಬಾರ್ ಮುಂಡೂಗನೂರ, ಅಶೋಕ ಹುಲ್ಯಾಳ, ಲಕ್ಷ್ಮಣ ಮುಚ್ಚಂಡಿ, ಸತ್ಯಪ್ಪ ಚನಾಳ, ವೆಂಕಟೇಶ ಗುಡೆಪ್ಪನವರ, ಅಮೋಘ ಮೌರ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net