ಕಾಂಗ್ರೆಸ್‌ನಿಂದ ವಾಲ್ಮೀಕಿ ಸಮಾಜಕ್ಕೆ ಅನ್ಯಾಯ

ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡ ರಾಜು ನಾಯ್ಕರ್ ಮಾತನಾಡಿದರು. ಪ್ರಕಾಶ ನಾಯ್ಕರ್, ಮಹಾದೇವ ನಾಯಕ, ಹನಮಂತ ಲೋಕಾಪುರ ಇದ್ದರು.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ವಾಲ್ಮೀಕಿ ಸಮಾಜದ ಮುಖಂಡ ರಾಜು ನಾಯ್ಕರ್ ಮಾತನಾಡಿದರು. ಪ್ರಕಾಶ ನಾಯ್ಕರ್, ಮಹಾದೇವ ನಾಯಕ, ಹನಮಂತ ಲೋಕಾಪುರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖಂಡರಿಂದ ಗಂಭೀರ ಆರೋಪ
  • ದಾವಣಗೆರೆಗೆ ಬಿಜೆಪಿಯಿಂದ ಎಸ್‌ಟಿಗೆ ಟಿಕೆಟ್‌ಗೆ ಶ್ಲಾಘನೆ
ಬಾಗಲಕೋಟೆ: ಸರ್ಕಾರದಲ್ಲಿ ಮೂವರು ಇದ್ದ ವಾಲ್ಮೀಕಿ ಸಮಾಜದ ಇಬ್ಬರನ್ನು ಕೈಬಿಟ್ಟು, ಆ ಸ್ಥಾನಕ್ಕೆ ನಮ್ಮ ಸಮಾಜದವರಿಗೆ ಅವಕಾಶ ಕಲ್ಪಿಸದೇ ಅನ್ಯಾಯ ಮಾಡಿದೆ ಎಂದು ವಾಲ್ಮೀಕಿ ಸಮಾಜದ ಮುಖಂಡರು ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡ ಪ್ರಕಾಶ ನಾಯ್ಕರ್ ಮತ್ತು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್ ಮಾತನಾಡಿ, ಅದೇ ಬಿಜೆಪಿ ದಾವಣಗೆರೆ ದಕ್ಷಿಣ ಸಾಮಾನ್ಯ ಕ್ಷೇತ್ರವಾಗಿದ್ದರೂ ಪರಿಶಿಷ್ಟ ಪಂಗಡದ ವ್ಯಕ್ತಿಗೆ ಟಿಕೆಟ್ ನೀಡಿರುವುದನ್ನು ನಮ್ಮ ಸಮಾಜ ಸ್ವಾಗತಿಸುತ್ತದೆ ಎಂದರು.
ಬಿಜೆಪಿಯು ವಾಲ್ಮೀಕಿ ಸಮುದಾಯಕ್ಕೆ ಮನ್ನಣೆ ನೀಡುತ್ತಾ ಬಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಟಿಕೆಟ್ ನೀಡಿರುವುದರಿಂದ ನಾವು ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಬಾದಾಮಿ ಸಾಮಾನ್ಯ ಕ್ಷೇತ್ರವಾಗಿದ್ದರೂ ಬಿ. ಶ್ರೀರಾಮುಲು ಅವರಿಗೆ ಟಿಕೆಟ್ ನೀಡಿದ್ದ ಬಿಜೆಪಿ ಇದೀಗ ದಾವಣಗೇರೆ ದಕ್ಷಿಣ ಕ್ಷೇತ್ರದಲ್ಲಿ ನಮ್ಮ ಸಮಾಜಕ್ಕೆ ಆದ್ಯತೆ ನೀಡಿದೆ. ಕಾಂಗ್ರೆಸ್ ಸರ್ಕಾರ ಎಸ್ಟಿಗೆ ಪ್ರಬಲ ಸಮಾಜವನ್ನು ಸೇರಿಸುವ ಹುನ್ನಾರ ನಡೆಸಿದೆ ಎಂದು ದೂರಿದರು.
ಕಾಂಗ್ರೆಸ್ ವಾಲ್ಮೀಕಿ ಸಮಾಜದಿಂದ ಸಚಿವರಾಗಿದ್ದ ನಾಗೇಂದ್ರ ಹಾಗೂ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಮೂಲಕ ಅನ್ಯಾಯ ಮಾಡಿದೆ. ಅದೇ ಸಮಾಜದ ಇನ್ನೂ ಹಲವರು ಶಾಸಕರಿದ್ದರೂ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಟೀಕಿಸಿದರು.
ಸಚಿವ ಸಂಪುಟದಲ್ಲಿ ಸತೀಶ ಜಾರಕಿಹೊಳಿ ಅವರೊಬ್ಬರೇ ಉಳಿದಿದ್ದಾರೆ. ಅವರನ್ನು ಮುಗಿಸುವ ಯತ್ನ ದೊಡ್ಡಮಟ್ಟದಲ್ಲಿ ನಡೆದಿದೆ. ಮುಖ್ಯಮಂತ್ರಿ ಮಾಡುತ್ತೇವೆ ಎಂದು ಮೂಗಿಗೆ ತುಪ್ಪ ಸವರಲಾಗುತ್ತಿದೆ. ಜಾರಕಿಹೊಳಿ ಅವರನ್ನು ಸಿಎಂ ಮಾಡುವುದಿಲ್ಲ. ಈಗಾಗಲೇ ಅವರ ಕುಟುಂಬದ ಇಬ್ಬರು ಬಿಜೆಪಿಯಲ್ಲಿದ್ದಾರೆ. ಸತೀಶ ಅವರು ಎಚ್ಚರದಿಂದ ಇರಬೇಕು ಎಂದರು.
ಒಳಮೀಸಲಾತಿ ಗೊಂದಲ ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. 22ರಿಂದ ಚಿತ್ರದುರ್ಗದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ಒಳಮೀಸಲಾತಿ ಜಾರಿಗೆ ಆಗ್ರಹಿಸಲಾಗುವುದು ಎಂದು ಹೇಳಿದರು.
ಮಹಾದೇವ ನಾಯಕ, ಹನುಮಂತ ಲೋಕಾಪುರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net