ಕಾಂಗ್ರೆಸ್ ಮಹಿಳಾ ವಿರೋಧಿ ನಿಲುವು

ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ಶಶಿಕಲಾ ಮಜ್ಜಗಿ, ಮುಖಂಡರಾದ ಸವಿತಾ ಲಂಕೆನ್ನವರ, ಶೋಭಾ ರಾವ, ಸುಜಾತಾ ಶಿಂಧೆ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ಸ್ಮೀತಾ ಪವಾರ, ಪ್ರೇಮಾ ಅಂಬಿಗೇರ ಸೇರಿದಂತೆ ಇತರರು ಇದ್ದರು.
ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ಶಶಿಕಲಾ ಮಜ್ಜಗಿ, ಮುಖಂಡರಾದ ಸವಿತಾ ಲಂಕೆನ್ನವರ, ಶೋಭಾ ರಾವ, ಸುಜಾತಾ ಶಿಂಧೆ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ಸ್ಮೀತಾ ಪವಾರ, ಪ್ರೇಮಾ ಅಂಬಿಗೇರ ಸೇರಿದಂತೆ ಇತರರು ಇದ್ದರು.
Published on
ಬಾಗಲಕೋಟೆ: ಮಹಿಳೆಯರಿಗೆ ರಾಜಕೀಯ ಮೀಸಲಾತಿ ದೊರೆಯಬೇಕು ಎನ್ನುವ ಕಾರಣಕ್ಕೆ ಶೇ.೩೩ ಮೀಸಲಾತಿ ಕಾಯ್ದೆ ಜಾರಿಗೆ ತರಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರಲು ಮುಂದಾಗಿತ್ತು, ಆದರೇ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ವಿರೋಧ ವ್ಯಕ್ತಪಡಿಸಿ ಮಹಿಳಾ ವಿರೋಽ ನಿಲುವು ಹೊಂದಿರುವುದು ಸ್ಪಷ್ಟವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಸಂಜೆ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷದ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ. ನಾರಿ ಶಕ್ತಿ ವಂದನ ಕಾಯ್ದೆ ಸೋಲಿಸುವ ಮೂಲಕ ಮಹಿಳೆಯರ ಹಕ್ಕು ಕಸಿದುಕೊಂಡಿದೆ. ಬಿಜೆಪಿ ರಾಷ್ಟç, ಜನಪರ, ಮಹಿಳೆಯರ ಧ್ವನಿಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಕೊಡಲಿ ಪೆಟ್ಟು ನೀಡಿದೆ. ಮಹಿಳೆಯರ ವಿರೋಽ ಎನ್ನುವುದು ಕಾಂಗ್ರೆಸ್ ಸಾಬೀತು ಪಡಿಸಿದೆ. ಮಹಿಳೆಯರಿಗೆ ಹಕ್ಕು ಸಿಗಬಾರದು ಎನ್ನುವುದೇ ಕಾಂಗ್ರೆಸ್ ಅಜೆಂಡಾ. ಶೇ.೩೩ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ನಿಲವು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ತ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಮಹಿಳೆಯರ ಹಕ್ಕುಗಳು ಸಮಾಽಯಾಗುವುದನ್ನು ತನ್ನ ಜಯ ಎಂದು ಹೆಮ್ಮೆ ಪಡುವ ಕಾಂಗ್ರೆಸ್‌ನ ಮನಸ್ಥಿತಿ ಎಂತಹ ಕ್ರೂರ ಮನಸ್ಥಿತಿ ಇರಬೇಕು?. ಇದು ಕಾಂಗ್ರೆಸ್ಸಿಗರ ಮಹಿಳಾ ವಿರೋಽ ಧೋರಣೆ ಎತ್ತಿ ತೋರಿಸಿದೆ. ಅವರ ದೃಷ್ಟಿಯಲ್ಲಿ ಮಹಿಳೆಯರು ಕೇವಲ ಘೋಷಣೆಗಳಿಗೆ ಸೀಮಿತವಾಗಬೇಕೇ ಹೊರತು ಅಽಕಾರಕ್ಕೆ ಬರಬಾರದು ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಈ ದ್ರೋಹ ಪ್ರತಿಯೊಬ್ಬ ಮಹಿಳೆಯೂ, ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಖಂಡಿಸಬೇಕು ಎಂದು ತಿಳಿಸಿದರು.
ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ಶಶಿಕಲಾ ಮಜ್ಜಗಿ ಮಾತನಾಡಿ, ಕಾಂಗ್ರೆಸ್ ಗುರಿ ಕೇವಲ ಚುನಾವಣೆ ಗೆಲ್ಲುವುದು ಹೊರತು ದೇಶದ ಪ್ರಗತಿ, ಮಹಿಳೆಯರ ಏಳಿಗೆ ಅಲ್ಲ. ಬಿಜೆಪಿಯವರು ರಾಷ್ಟç ಕಲ್ಯಾಣ ಗುರಿ ಹೊಂದಿದೆ. ನಮಗೆ ಯಾವಾಗಲೂ ದೇಶ ಮತ್ತು ದೇಶದ ಜನತೆಯೇ ಮೊದಲ ಆದ್ಯತೆ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ಮತ್ತು ನ್ಯಾಯ ಒದಗಿಸುವುದೇ ನಮ್ಮ ಸಂಕಲ್ಪ ಎಂದರು.
ಮುಖAಡರಾದ ಸವಿತಾ ಲಂಕೆನ್ನವರ, ಶೋಭಾ ರಾವ, ಸುಜಾತಾ ಶಿಂಧೆ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ಸ್ಮೀತಾ ಪವಾರ, ಪ್ರೇಮಾ ಅಂಬಿಗೇರ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net