ಕೂಡಲಸಂಗಮದವರೆಗೆ ಪಾದಯಾತ್ರೆ ತೀರ್ಮಾನ

 ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 23ನೇ ದಿನ ಮುಂದುವರಿಯಿತು. ಬಸವರಾಜ ಬಡ್ಡಿ, ಹಸನಸಾಬ ಪಿಂಜಾರ, ಮಹಾಂತೇಶ ನಾಡಗೌಡರ, ಸಂಗಪ್ಪ ಆನೇಹೊಸೂರ, ಭೀಮಪ್ಪ ಗೋನಾಳ ಇತರರಿದ್ದರು.
ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 23ನೇ ದಿನ ಮುಂದುವರಿಯಿತು. ಬಸವರಾಜ ಬಡ್ಡಿ, ಹಸನಸಾಬ ಪಿಂಜಾರ, ಮಹಾಂತೇಶ ನಾಡಗೌಡರ, ಸಂಗಪ್ಪ ಆನೇಹೊಸೂರ, ಭೀಮಪ್ಪ ಗೋನಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇದ್ದಲಗಿ ಮುಳುಗಡೆ ಸಂತ್ರಸ್ತರ ಗೋಳು
  • ಜನ ಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷೃ
  • ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ
ಹುನಗುಂದ : ತಾಲೂಕಿನ ಇದ್ದಲಗಿ ಗ್ರಾಮದ ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 23ನೇ ದಿನಕ್ಕೆ ಮುಂದುವರಿಯಿತು.
ಕಳೆದ 23 ದಿನಗಳಿಂದ ಪುನರ್ವಸತಿ ಕೇಂದ್ರದಲ್ಲಿ ಹೊಸ ಶೆಡ್‌ಗಳನ್ನು ನಿರ್ಮಿಸಿ ಕೊಡುವುದು, 2ನೇ ಹಂತದ ಪರಿಹಾರ ಒದಗಿಸುವುದು ಮತ್ತು 4 ಗುಂಟೆ ನಿವೇಶನ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ನಡೆಸುತ್ತಿರುವ ಸಂತ್ರಸ್ತರ ಧರಣಿಗೆ ಸ್ಥಳೀಯ ಜನಪ್ರತಿನಿಧಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಇರುವುದರಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಮತ್ತು ಬೇಡಿಕೆ ಈಡೇರಿಕೆಗೆ ಸಂತ್ರಸ್ತರು ಜೂನ್ ಮೊದಲನೇ ವಾರದಲ್ಲಿ ವಿನೂತನ ಹೋರಾಟಕ್ಕೆ ಸಜ್ಜಾಗಿದ್ದಾರೆ.
23 ದಿನಗಳಿಂದ ನಾವು ಹೋರಾಟ ಮಾಡುತ್ತಾ ಬಂದರೂ ಸಂತ್ರಸ್ತರ ಹಲವು ಬೇಡಿಕೆಗಳಲ್ಲಿ ಒಂದು ಬೇಡಿಕೆ ಈಡೇರಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಮಳೆಗಾಲ ಆರಂಭವಾದರೆ ಅನೇಕ ಅವಾಂತರಗಳೇ ಇಲ್ಲಿ ಸಂಭವಿಸುತ್ತವೆ ಎನ್ನುವ ಸಾಮಾನ್ಯ ಪ್ರಜ್ಞೆ ಅಧಿಕಾರಿಗಳಿಗಿಲ್ಲ. ಇದೇ ರೀತಿ ಕುಳಿತು ಧರಣಿ ಮಾಡುವುದರಿಂದ ನಮ್ಮ ಬೇಡಿಕೆಗಳು ಈಡೇರುವುದಿಲ್ಲ ಎನ್ನುವುದನ್ನು ಅರ್ಥೈಸಿಕೊಂಡು ಮಂಗಳವಾರ ಇದ್ದಲಗಿ ಗ್ರಾಮದ ಎಲ್ಲ ಸಂತ್ರಸ್ತರು ಸೇರಿ ಸಭೆ ಮಾಡಿದ್ದು. ಇದ್ದಲಗಿ ಸೇರಿ ಉಳಿದ 9 ಮುಳುಗಡೆ ಗ್ರಾಮಗಳ ಸಂತ್ರಸ್ತರು ಸೇರಿಸಿ ಸಂತ್ರಸ್ತರ ಬೇಡಿಕೆ ಈಡೇರಿಕೆಗಾಗಿ ಇದ್ದಲಗಿಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ತೀರ್ಮಾನವನ್ನು ಸಂತ್ರಸ್ತರು ತೆಗೆದುಕೊಂಡಿದ್ದಾರೆ.
ಬಸವರಾಜ ಬಡ್ಡಿ, ಹಸನಸಾಬ ಪಿಂಜಾರ, ಮಹಾಂತೇಶ ನಾಡಗೌಡರ, ಸಂಗಪ್ಪ ಆನೇಹೊಸೂರ, ಭೀಮಪ್ಪ ಗೋನಾಳ, ಬಸಪ್ಪ ಹಳಪೇಟಿ, ಮಲ್ಲಪ್ಪ ಅಡಿಹಾಳ, ಭೀಮಪ್ಪ ಆಡಿಹಾಳ, ಸಂಗಮೇಶ ಆನೇಹೊಸೂರ, ಕಲ್ಲಪ್ಪ ಆನೇಹೊಸೂರ, ಶರಣಪ್ಪ ಮುಳ್ಳೂರ, ಬಸವರಾಜ ಮುಳ್ಳೂರ, ಹಬೀಸಾಬ ಮುಲ್ಲಾ, ಹುಚ್ಚಪ್ಪ ಬೂದಗೂಳಿ, ಹನಮಂತ ಹಡಪದ ಸೇರಿ ಇತರರಿದ್ದರು.

ಕೂಡಲಸಂಗಮದವರೆಗೆ ಪಾದಯಾತ್ರೆಗೆ ಯೋಜನೆ

ಮೇ 6ರಿಂದ ಮುಳುಗಡೆ ಸಂತ್ರಸ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕುಳಿತು ಬರೋಬರಿ 23 ದಿನ ಕಳೆದಿವೆ. ಧರಣಿ ಸ್ಥಳಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಂದರೂ ಸಂತ್ರಸ್ತರಿಗೆ ಮೊಸಳೆ ಕಣ್ಣೀರು ಒರಿಸುವ ಕೆಲಸ ಮಾಡಿ ಹೋದರು. ಆದರೆ ಇಲ್ಲಿವರೆಗೂ ಸಂತ್ರಸ್ತರ ಒಂದು ಬೇಡಿಕೆಯೂ ಕೂಡಾ ಈಡೇರುತ್ತಿಲ್ಲ. ಅತೀ ಶೀಘ್ರದಲ್ಲಿಯೇ ಇದ್ದಲಗಿ ಗ್ರಾಮದಿಂದ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡುವ ತೀರ್ಮಾನ ಮಾಡಿದ್ದು. ಪಾದಯಾತ್ರೆ ನಡೆಸಲು ಸಂಬಂಧಿಸಿದ ಅಧಿಕಾರಿಗಳ ಅನುಮತಿ ಪಡೆದುಕೊಂಡು ನಂತರ ತಾಲೂಕಿನ ಎಲ್ಲ ಶರಣ, ಸಂತ, ಮಠಾಧೀಶರನ್ನು ಕರೆದುಕೊಂಡು ಸಂತ್ರಸ್ತರ ಬೇಡಿಕೆ ಈಡೇರಿಸುವಂತೆ ಬೃಹತ್ ಪಾದಯಾತ್ರೆ ಕೈಕೊಳ್ಳಲಾಗಿದೆ ಎಂದು ಧರಣಿ ನಿರತ ಸಂತ್ರಸ್ತರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net