ಹೊರ ದೇಶಗಳೊಂದಿಗೆ ಪೈಪೋಟಿ ನಡೆಸಿ

 ಬಾಗಲಕೋಟೆ ತೋವಿವಿಯಲ್ಲಿ ಆಯೋಜಿಸಿದ್ದ ತೋಟಗಾರಿಕೆ ಮೇಳದ ಮೂರನೇ ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಮೇಶ ಎಚ್., ಬೆಂಗಳೂರು ನಗರ ಜಿಲ್ಲೆಯ ಮುನಿರಾಜು ಬಿ.ಎನ್., ರಾಮನಗರ ಜಿಲ್ಲೆಯ ದೇವರಾಜು ಜಿ., ತುಮಕೂರಿನ ಚನ್ನಕೇಶವ ಸ್ವಾಮಿ, ಕೊಪ್ಪಳ ಜಿಲ್ಲೆಯ ಸುದೇಶಕುಮಾರ ಪಟ್ಟಣಶೆಟ್ಟಿ, ರಾಯಚೂರು ಜಿಲ್ಲೆಯ ಪದ್ಮಾವತಿ ಬಾಗೋಡಿ, ಬಳ್ಳಾರಿ ಜಿಲ್ಲೆಯ ಕೆ.ಬಸಪ್ಪ ಚನ್ನಬಸಪ್ಪ ಹಾಗೂ ವಿಜಯನಗರ ಜಿಲ್ಲೆಯ ಪೂಜ್ಯ ಡಾ.ಮಹೇಶ್ವರ ಸ್ವಾಮಿಗಳಿಗೆ ಫಲಶ್ರೇಷ್ಠ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಚಿವ ಸತೀಶ್ ಜಾರಕಿಹೊಳಿ, ಸಂಸದ ಪಿ.ಸಿ. ಗದ್ದಿಗೌಡರ, ಗದಗ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಶ್ರೀಗಳು, ಜಿಪಂ ಸಿಇಒ ಶಶಿಧರ ಕುರೇರ, ಕುಲಪತಿ ಡಾ.ವಿಷ್ಣುವರ್ಧನ ಮತ್ತಿತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಸಚಿವ ಸತೀಶ ಜಾರಕಿಹೊಳಿ ಸಲಹೆ
  • ಮೂರು ದಿನಗಳ ತೋಟಗಾರಿಕೆ ಮೇಳಕ್ಕೆ ತೆರೆ
  • ರಾಷ್ಟ್ರೀಯ ರೈತ ದಿನಾಚರಣೆ
ಬಾಗಲಕೋಟೆ: ರೈತರು ಕೃಷಿ ಮತ್ತು ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಹೊಸ ಹೊಸ ತಳಿಗಳತ್ತ ಅಣಿಯಾದಾಗ ಉತ್ಪಾದನೆಯತ್ತ ಗಮನಹರಿಸಿದಾಗ ಮಾತ್ರ ಬೇರೆ ದೇಶಗಳ ಜತೆ ಪೈಪೋಟಿ ಮಾಡಲು ಸಾಧ್ಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತೋಟಗಾರಿಕೆ ವಿವಿಯ ಉದ್ಯಾಗಿರಿಯಲ್ಲಿ ಮಂಗಳವಾರ ರಾಷ್ಟ್ರೀಯ ರೈತ ದಿನಾಚರಣೆ, ಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ ಹಾಗೂ ತೋಟಗಾರಿಕೆ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರಲ್ಲೂ ಸ್ಪರ್ಧೆ ಮಾಡಬೇಕಿದೆ. ಅದು ಮಾರುಕಟ್ಟೆ ಇರಬಹುದು, ಹೊಸ ತಳಿ, ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆಯುವಾಗ ನಮ್ಮ ಮುಂದಿರುವ ಸವಾಲುಗಳನ್ನು ನಾವು ಸ್ವೀಕರಿಸಬೇಕಾಗಿದೆ. ಇದರಿಂದ ಬೇರೆ ದೇಶಗಳ ಜೊತೆ ಸ್ಪರ್ಧೆಗೆ ಇಳಿಯಲು ಸಾಧ್ಯವಾಗುತ್ತದೆ ಎಂದರು.
ಬಾಗಲಕೋಟೆಯಲ್ಲಿ ತೋಟಗಾರಿಕೆ ವಿವಿ ಸ್ಥಾಪನೆ ಆದ ಮೇಲೆ ಬಹಳಷ್ಟು ಹೊಸ ಹೊಸ ತಳಿಗಳನ್ನು ಹೊರತಂದಿದ್ದು, ಆ ತಳಿಗಳ ಪರಿಚಯ ಮಾಡುವಂತಹ ಪ್ರಯತ್ನ ಮಾಡಿದೆ. ನಾವು ಈ ಭಾಗದಲ್ಲಿ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದೇವೆ. ಇದರ ಜತೆಗೆ ಪರ್ಯಾಯ ಬೆಳೆಗಳ ಅವಶ್ಯಕತೆ ಬಹಳಷ್ಟಿದೆ. ಸಾಧನೆ ಮಾಡಿದಂತ ರೈತರು ನಮಗೆಲ್ಲ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ತೋವಿವಿ ತೋಟಗಾರಿಕೆ ಮೇಳವನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆಕರ್ಷಣೆಯಾಗಲಿ. ಇಂತಹ ಮೇಳದಿಂದ ತೋಟಗಾರಿಕೆಯಲ್ಲಿ ಬದಲಾವಣೆ ಬರಲಿ. ಮುಂದಿನ ಸಲ ಇನ್ನಷ್ಟು ವಿಶೇಷತೆಯಿಂದ ಕೂಡಿರಲಿ ಎಂದು ಸಲಹೆ ನೀಡಿದರು. ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ರೈತರಿಗೆ ಅವರ ಶ್ರಮಕ್ಕೆ ತಕ್ಕಂತೆ ಉತ್ಪಾದನೆ ಬಂದು ಅವರ ಆದಾಯ ಮಟ್ಟ ಹೆಚ್ಚಾಗಬೇಕಿದೆ. ವಿಶ್ವವಿದ್ಯಾಲಯ ಹೊರತಂದ ವಿನೂತನ ತಂತ್ರಜ್ಞಾನದ ಮೂಲಕ ಹೊಸ ಮಾದರಿಯ ತಳಿಗಳ ಮಾಹಿತಿಯನ್ನು ಪಡೆದುಕೊಂಡು ಕೃಷಿ ಮತ್ತು ತೋಟಗಾರಿಕೆಯಲ್ಲಿ ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು. ಮುಖ್ಯವಾಗಿ ಯುವಕರು ಕೃಷಿಯತ್ತ ಹೆಚ್ಚಿನ ಗಮನಹರಿಸುವ ಕೆಲಸವಾಗಬೇಕು. ಕೇವಲ ಕಬ್ಬು ಬೆಳೆಯುವುದರಿಂದ ಮಣ್ಣಿನ ಲವತ್ತತೆ ಕಡಿಮೆಯಾಗುತ್ತದೆ. ಉತ್ತಮ ಬೆಳೆ ತೆಗೆಯುವುದರ ಜತೆಗೆ ಮಣ್ಣಿ ಲವತ್ತತೆ ಕಾಪಾಡಿಕೊಳ್ಳುವತ್ತ ಗಮನಹಿಸಬೇಕು ಎಂದು ತಿಳಿಸಿದರು.
ಗದಗ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ.ಆರ್.ಸಿ.ಜಗದೀಶ, ಬಾಗಲಕೋಟೆ ನಬಾರ್ಡನ ಜಿಲ್ಲಾ ವ್ಯವಸ್ಥಾಪಕ ಡಾ.ಮಂಜುನಾಥ ರೆಡ್ಡಿ, ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net