ಅಲೆಮಾರಿ, ಬುಡಕಟ್ಟು ಜನಾಂಗ ಅಭಿವೃದ್ಧಿಗೆ ಬದ್ಧ

 ಕಲಾದಗಿಯಲ್ಲಿ ಹರಣಶಿಕಾರಿ ಸಮುದಾಯದವರಿಂದ ಅಲೆಮಾರಿ ಅಭಿವೃದ್ಧಿ ನಿಗಮ ರಾಜ್ಯ ಅಧ್ಯಕ್ಷೆ ಜಿ. ಪಲ್ಲವಿ ಮನವಿ ಸ್ವೀಕರಿಸಿದರು. ಮುಖಂಡರಾದ ಶ್ಯಾಮಕಾಳೆ, ಕುಮಾರ ಕಾಳೆ, ಅಂಜಲಿ ಬಾನು ಇತರರಿದ್ದರು.
ಕಲಾದಗಿಯಲ್ಲಿ ಹರಣಶಿಕಾರಿ ಸಮುದಾಯದವರಿಂದ ಅಲೆಮಾರಿ ಅಭಿವೃದ್ಧಿ ನಿಗಮ ರಾಜ್ಯ ಅಧ್ಯಕ್ಷೆ ಜಿ. ಪಲ್ಲವಿ ಮನವಿ ಸ್ವೀಕರಿಸಿದರು. ಮುಖಂಡರಾದ ಶ್ಯಾಮಕಾಳೆ, ಕುಮಾರ ಕಾಳೆ, ಅಂಜಲಿ ಬಾನು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿಗಮ ರಾಜ್ಯ ಅಧ್ಯಕ್ಷೆ ಜಿ. ಪಲ್ಲವಿ ಭರವಸೆ
  • ಕಲಾದಗಿ ಹರಣಶಿಕಾರಿ ಕಾಲನಿಗೆ ಭೇಟಿ
  • ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ
ಕಲಾದಗಿ: ಶಿಕ್ಷಣ ಸೇರಿ ಅನೇಕ ಮೂಲ ಸೌಕರ್ಯಗಳಿಂದ ವಂಚಿತಗೊಂಡಿರುವ ಅಲೆಮಾರಿ ಮತ್ತು ಬುಡಕಟ್ಟು ಜನಾಂಗ ಸಮಾಜಮುಖಿಯಾಗಿಸಲು ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮ ರಾಜ್ಯ ಅಧ್ಯಕ್ಷೆ ಜಿ. ಪಲ್ಲವಿ ಹೇಳಿದರು.
ಗ್ರಾಮದ ಹರಣಶಿಕಾರಿ ಕಾಲನಿಗೆ ಶನಿವಾರ ಸಂಜೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಬಹು ಹೊತ್ತು ಸಮಾಜದವರಿಂದ ವಿವಿಧ ಸಮಸ್ಯೆಗಳನ್ನು ಆಲಿಸಿ ನಿಗಮದಿಂದ ಹಾಗೂ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಲನಿಯಲ್ಲಿ ಕೂಡಲೇ ಜಾಗೃತಿ ಶಿಬಿರ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೇರಿ ಇನ್ನಿತರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಲೆಮಾರಿ ಜನಾಂಗಗಳ ಸಮಸ್ಯೆಗಳನ್ನು ಖುದ್ದು ಅರಿಯಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ಪರಿಹರಿಸಿಕೊಳ್ಳಿ, ಅಲ್ಲಿಯೂ ಪರಿಹಾರ ದೊರೆಯದಿದ್ದರೆ ನನ್ನನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಿಮ್ಮೊಂದಿಗೆ ನಿಗಮ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಸಮಾಜದ ಮುಖಂಡ ಗ್ರಾ.ಪಂ. ಸದಸ್ಯ ಶ್ಯಾಮ ಕಾಳೆ ಮಾತನಾಡಿ, ಗ್ರಾಮದಲ್ಲಿರುವ ತಮ್ಮ ಸಮುದಾಯದ 150 ಕುಟುಂಬಗಳು ಶಾಶ್ವತ ಮನೆ ನಿರ್ಮಾಣದ ಯೋಜನೆಯಿಂದ ವಂಚಿತವಾಗಿರುವ ಬಗ್ಗೆ ವಿವರಿಸಿದರು. ಅಲ್ಲದೆ ಕಲಾದಗಿ ಪುಕೆಯಲ್ಲಿ ಶಾಶ್ವತ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಜಿ. ಪಲ್ಲವಿ ಕಾಲನಿಗೆ ಬರುತ್ತಿದ್ದಂತೆ ಇಡೀ ಕಾಲನಿಯ ಓಣಿಗಳನ್ನು ಸುತ್ತಾಡಿದರು. ಆಗೆಲ್ಲಾ ಕಂಡ ಅಸ್ವಚ್ಛತೆ ಬಗ್ಗೆ ಬೇಸರ ವ್ಯಕ್ತಮಾಡಿದರು. ಉಪ ತಹಸೀಲ್ದಾರ ಆರ್.ಆರ್. ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ರವಿ ಇದ್ದಲಗಿ, ಮಹಿಳಾ ಮತ್ತು ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ ಭಗವತಿ, ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಹನುಮಂತ ಭಜಂತ್ರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net