ಮುಖ್ಯ ಅತಿಥಿಯಾಗಿದ್ದ ಡಾ. ಪ್ರಮೋದ ಮಿರ್ಜಿ ಮಾತನಾಡಿ, ಸಂಸ್ಕೃತ ಭಾರತದ ಆತ್ಮ. ಎಲ್ಲ ಭಾಷೆಗಳ ಜನನಿ. ಸಂಸ್ಕೃತ ಎಂದರೆ ಸಂಸ್ಕಾರ, ಸಂಸ್ಕೃತಿ, ಸನಾತನ. ವೇದ, ಉಪನಿಷತ್, ರಾಮಾಯಣ, ಮಹಾಭಾರತದಂಥ ಅಮೂಲ್ಯ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ. ಏಕತೆ ಹಾಗೂ ಸನಾತನ ಧರ್ಮ ರಕ್ಷಣೆ ಸಂಸ್ಕೃತದಿಂದ ಸಾಧ್ಯ. ಪ್ರತಿಯೊಬ್ಬರೂ ಸಂಸ್ಕೃತ ಕಲಿಯಲು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದರು.