ಫಾತಿಮಾ ಕುಟುಂಬಕ್ಕೆ ಸಿಎಂ ಐದು ಲಕ್ಷ ರೂ. ನೆರವು

ಬಾಗಲಕೋಟೆ ಉಪ ಕದನದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪ್ರಚಾರದ ಮೆರವಣಿಗೆ ವೇಳೆಯಲ್ಲಿ ಸಾವನ್ನಪ್ಪಿದ್ದ -Áತಿಮಾ ತುಪ್ಪದ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿ ಐದು ಲಕ್ಷ ರೂ.ಗಳ ನೆರವಿನ ಹಣವನ್ನು ಭಾನುವಾರ ಅವರ ಕುಟುಂಬಕ್ಕೆ ಕಾಂಗ್ರೆಸ್ ಅಭ್ಯರ್ಥಿ  ಉಮೇಶ ಮೇಟಿ, ಮುಖಂಡ ಹೊಳಬಸು ಶೆಟ್ಟರ ಸೇರಿದಂತೆ ಮುಸ್ಲಿಂ ಮುಖಂಡರು ವಿತರಿಸಿದರು.
ಬಾಗಲಕೋಟೆ ಉಪ ಕದನದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪ್ರಚಾರದ ಮೆರವಣಿಗೆ ವೇಳೆಯಲ್ಲಿ ಸಾವನ್ನಪ್ಪಿದ್ದ -Áತಿಮಾ ತುಪ್ಪದ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿ ಐದು ಲಕ್ಷ ರೂ.ಗಳ ನೆರವಿನ ಹಣವನ್ನು ಭಾನುವಾರ ಅವರ ಕುಟುಂಬಕ್ಕೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ, ಮುಖಂಡ ಹೊಳಬಸು ಶೆಟ್ಟರ ಸೇರಿದಂತೆ ಮುಸ್ಲಿಂ ಮುಖಂಡರು ವಿತರಿಸಿದರು.
Published on
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆಯ ಪ್ರಚಾರದ ಮೆರವಣಿಗೆ ವೇಳೆ ನಿಧನ ಹೊಂದಿದ್ದ ಕಾಂಗ್ರೆಸ್ ಕಾರ್ಯಕರ್ತೆ ಫಾತಿಮಾ ತುಪ್ಪದ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಲಕ್ಷ ರೂ.ಗಳ ವೈಯಕ್ತಿಕ ನೆರವು ನೀಡಿದ್ದಾರೆ.
ನವನಗರದ ವಾಂಬೆ ಕಾಲನಿಯಲ್ಲಿ ಇರುವ -Áತಿಮಾ ಅವರ ಮನೆಗೆ ಭಾನುವಾರ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಹಾಗೂ ಸಿದ್ದರಾಮಯ್ಯ ಆಪ್ತ, ಮುಖಂಡ ಹೊಳಬಸು ಶೆಟ್ಟರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ತೆರಳಿ ಐದು ಲಕ್ಷ ರೂ.ಗಳನ್ನು ಕುಟುಂಬ ಸದಸ್ಯರಿಗೆ ನೀಡಿದರು.
ಏ. ೬ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಗರದಲ್ಲಿ ಬಹಿರಂಗ ಪ್ರಚಾರ ನಡೆಸಿದ್ದರು. ಇದಕ್ಕೂ ಮುನ್ನ ನಗರದಲ್ಲಿ ನಡೆದಿದ್ದ ಮೆರವಣಿಗೆ ವೇಳೆ ಫಾತಿಮಾ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ವಿಷಯ ತಿಳಿದು ಕಾರ್ಯಕ್ರಮದ ಬಳಿಕ ಸಿದ್ದರಾಮಯ್ಯ ಅವರು ಫಾತಿಮಾ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಬಂದಿದ್ದರು. ಇದೀಗ ಅವರ ಕುಟುಂಬಕ್ಕೆ ಐದು ಲಕ್ಷ ರೂ.ಗಳ ನೆರವು ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಕಳುಹಿಸಿದ್ದ ಐದು ಲಕ್ಷ ರೂ.ಗಳನ್ನು ಫಾತಿಮಾ ಕುಟುಂಬಕ್ಕೆ ಹಸ್ತಾಂತರಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ, ಫಾತಿಮಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಇದ್ದರು. ಪಕ್ಷದ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಅವರು ನಿಧನರಾಗಿದ್ದು ತೀವ್ರ ದುಃಖ ಉಂಟು ಮಾಡಿದೆ. ಕುಟುಂಬದ ಜೊತೆ ಪಕ್ಷ ಇದ್ದೆ ಇರುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಐದು ಲಕ್ಷ ರೂ.ಗಳ ನೆರವು ಕಳುಹಿಸಿದ್ದಾರೆ. ತಾಯಿಯವರನ್ನು ತಂದು ಕೊಡಲು ಆಗಲ್ಲ. ಆದರೆ, ಪಕ್ಷ ನಿಮ್ಮ ಜೊತೆ ಇರುತ್ತದೆ. ಸಿಎಂ ಕಳುಹಿಸಿರುವ ನೆರವಿನ ಹಣ ಪಡೆದುಕೊಳ್ಳುವಂತೆ ತಿಳಿಸಿದರು. ಇದೇ ವೇಳೆ ಫಾತಿಮಾ ಕುಟುಂಬಕ್ಕೆ ಮನೆ ಇಲ್ಲ, ಬಾಡಿಗೆ ಮನೆಯಲ್ಲಿ ಇದ್ದಾರೆ ಎನ್ನುವ ವಿಚಾರವನ್ನು ನೆರೆಹೊರೆಯವರು ತಿಳಿಸಿದರು. ಆಶ್ರಯ ಯೋಜನೆಯಲ್ಲಿ ಆನ್‌ಲೈನ್ ನಲ್ಲಿ ಅರ್ಜಿ ಹಾಕಿ, ತಮಗೆ ಮನೆ ಕೊಡೆಸುವ ಪ್ರಯತ್ನವನ್ನು ಕಾಂಗ್ರೆಸ್ ಮುಖಂಡರು ಮಾಡಿಕೊಡುತ್ತೇವೆ ಎಂದು ಅಭಯ ನೀಡಿದರು.
ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಅಯುಬ ಪುಣೇಕರ, ರಸೂಲಸಾಬ ಪೆಂಡಾರಿ, ನಾಗರಾಜ ಹದ್ಲಿ, ಬುಡಾ ಅಧ್ಯಕ್ಷ ರಜಾಕ ಬೇನೂರ, ಸಿಕಂದರ್ ಅಥಣಿ, ದ್ಯಾಮಣ್ಣ ಗಾಳಿ, ರಾಜೀವಗಾಂಽ ಕಾಲನಿಯ ಜಮಾತದ ಪದಾಽಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net