ಕೃಷ್ಣಾ ನದಿಯಲ್ಲಿ ಮಕ್ಕಳ ಸುರಕ್ಷತೆ ಎಚ್ಚರಿಕೆ

ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಯಲ್ಲಿ ಮಕ್ಕಳು ಈಜುತ್ತಿರುವ ದೃಶ್ಯ.
ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಯಲ್ಲಿ ಮಕ್ಕಳು ಈಜುತ್ತಿರುವ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಗೆ ನಗರಸಭೆಯ ಮನವಿ
  • ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಅಗತ್ಯ
ರಬಕವಿ/ಬನಹಟ್ಟಿ: ಅವಳಿ ನಗರ ಸಮೀಪ ಹರಿಯುವ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಅಗತ್ಯವಾಗಿದೆ. ಶಾಲೆ-ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು ಈಜಲು ನದಿಗೆ ತೆರಳುವುದು ಸಾಮಾನ್ಯವಾಗಿದ್ದು, ಈ ಸಂದರ್ಭದಲ್ಲಿ ಪಾಲಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಹುಬ್ಬಳ್ಳಿಯಿಂದ ಅಜ್ಜಿಮನೆಗೆ ಬಂದಿದ್ದ 13 ವರ್ಷದ ಬಾಲಕನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಎಲ್ಲರಲ್ಲೂ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈಜು ಬಾರದ ಮಕ್ಕಳನ್ನು ನದಿಗೆ ಇಳಿಸದಂತೆ ನೋಡಿಕೊಳ್ಳಬೇಕು. ಈಜು ಪರಿಣಿತರ ಮೇಲ್ವಿಚಾರಣೆಯಲ್ಲಿ ಮಾತ್ರ ಈಜು ಕಲಿಸುವುದು ಸುರಕ್ಷಿತ ಎಂಬ ಸಲಹೆ ನೀಡಲಾಗಿದೆ.
ನಗರಸಭೆ ಪೌರಾಯುಕ್ತ ರಮೇಶ್ ಜಾಧವ ಮಾತನಾಡಿ, ನದಿದಡದಲ್ಲಿ ಇರುವ ಕಲ್ಲುಗಳು ತೀವ್ರವಾಗಿ ಚೂಪಾಗಿರುವುದರಿಂದ ಗಾಯಗಳ ಅಪಾಯ ಹೆಚ್ಚಿದೆ. ಎತ್ತರ ಪ್ರದೇಶಗಳಿಂದ ಜಿಗಿಯುವುದು ಅಥವಾ ತಲೆ ಕೆಳಗಾಗಿ ನೀರಿಗೆ ಧುಮುಕುವುದು ಅಪಾಯಕಾರಿ ಕ್ರಮಗಳಾಗಿದ್ದು, ಇವುಗಳನ್ನು ತಪ್ಪಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ನದಿಯಲ್ಲಿ ನಿಂತಿರುವ ನೀರು ಕುಡಿಯುವ ನೀರಿನ ಮೂಲವಾಗಿರುವುದರಿಂದ ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕು. ನದಿಯಲ್ಲಿ ಈಜುವುದು, ಬಟ್ಟೆ ತೊಳೆಯುವುದು ಮುಂತಾದ ಚಟುವಟಿಕೆಗಳಿಂದ ನೀರು ಮಲೀನವಾಗುವ ಸಾಧ್ಯತೆ ಇದೆ ಎಂದು ನಾಗರಿಕರಿಗೆ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net