ತೇರದಾಳದ ಅಲ್ಲಮ ಪ್ರಭುದೇವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ದಿ. ಚಂದ್ರವ್ವ ಜಗದಾಳ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಶಾಸಕ ಜಗದೀಶ ಗುಡಗುಂಟಿ, ಪ್ರವೀಣ ನಾಡಗೌಡ, ದೇವಲ ದೇಸಾಯಿ ಮತ್ತಿತರಿದ್ದರು.
Published on:
Copied
Follow Us
ತೇರದಾಳ: ಸಮಾಜ ಸೇವೆ ಹಾಗೂ ದಾನ ಧರ್ಮದ ಮೂಲಕ ಗುರುತಿಸಿಕೊಂಡಿದ್ದ ದಿ. ಚಂದ್ರವ್ವ ಜಗದಾಳ ಅವರ ನಿಧನವು ಅತ್ಯಂತ ವಿಷಾದನೀಯ ಘಟನೆ ಎಂದು ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ಅಭಿಪ್ರಾಯಪಟ್ಟರು.
ಪಟ್ಟಣದ ಅಲ್ಲಮಪ್ರಭುದೇವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಿಕ್ಕಿಂತ ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ಅಂತಹ ವ್ಯಕ್ತಿತ್ವ ಹೊಂದಿದ ಚಂದ್ರವ್ವ ಅವರು ತಮ್ಮ ನಿಸ್ವಾರ್ಥ ಸೇವೆ ಮೂಲಕ ಮಾದರಿ ಜೀವನ ನಡೆಸಿದ್ದರು ಎಂದು ಹೇಳಿದರು.
ಮುಖಂಡ ಪ್ರವೀಣ ನಾಡಗೌಡ ಮಾತನಾಡಿ, ಆರ್ಥಿಕವಾಗಿ ಸಾಮರ್ಥ್ಯ ಇದ್ದರೂ, ದಾನ ಮಾಡುವ ಮನೋಭಾವ ಎಲ್ಲರಲ್ಲೂ ಇರೋದಿಲ್ಲ. ಆದರೆ ಚಂದ್ರವ್ವ ಅವರು ದೇವಸ್ಥಾನಗಳಿಗೆ ದೇಣಿಗೆ ನೀಡುವ ಮೂಲಕ ಜನಮನ ಗೆದ್ದಿದ್ದರು. ಅಂತಹ ವ್ಯಕ್ತಿಗೆ ಸಂಭವಿಸಿದ ದುರ್ಘಟನೆ ನೋವುಂಟುಮಾಡಿದೆ ಎಂದು ತಿಳಿಸಿದರು.
ಹಿರೇಮಠದ ಗಂಗಾಧರ ದೇವರು ಅವರು ಚಂದ್ರವ್ವ ಅವರ ದೇಣಿಗೆ ಹಾಗೂ ಸಮಾಜದ ಮೇಲಿನ ಬದ್ಧತೆಯನ್ನು ಸ್ಮರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಬಾಳಿಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯ ದೇವಲ ದೇಸಾಯಿ, ಭೀಮಗೊಂಡ ಸದಲಗಿ, ನಾಗಪ್ಪ ಸನದಿ, ಮಲ್ಲಪ್ಪಣ್ಣ ಜಮಖಂಡಿ, ಅಲ್ಲಯ್ಯ ದೊಡಮನಿ, ಅಪ್ಪು ಮಂಗಸೂಳಿ, ಅರ್ಚಕ ಬಸಪರಯ್ಯ ಬಾವಿ, ಈಶ್ವರ ಯಲ್ಲಟ್ಟಿ ಮತ್ತಿತರಿದ್ದರು.