ನಾಲ್ಕು ಕಂಬಗಳು, ಉಬ್ಬು ಚಿತ್ರಗಳು, ಪೂರ್ವದಲ್ಲಿ ಗರುಡು ಲಾಂಛನ, ಕಾರ್ತಿಕೇಯ ನವಿಲು ಮೇಲೆ ಕುಳಿತಿರುವ ಚಿತ್ರ ಸೇರಿ ಅನೇಕ ಚಿತ್ರಗಳನ್ನು ಇಲ್ಲಿ ಕಾಣಬಹುದು. 25 ಮೀಟರ್ ಇರುವ ಈ ದೇವಾಲಯದ ಮುಖ ಮಂಟಪ ಮಾತ್ರ ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ್ದು, ಕಾಲಾಂತರದಲ್ಲಿ ಮರಾಠರ ಕಾಲದಲ್ಲಿ ಜೀರ್ಣೋದ್ಧಾರ ಆಗಿರುವ ಕುರುಹು ಕಾಣಸಿಗುತ್ತವೆ.