ಭಾವೈಕ್ಯತೆಯಿಂದ ಹೋಳಿ ಆಚರಿಸಿ

 ಬಾಗಲಕೋಟೆ ನಗರದ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹೋಳಿ ಆಚರಣಾ ಸಮಿತಿ ಬಾಗಲಕೋಟೆ ವತಿತಿಂದ ಹಮ್ಮಿಕೊಂಡಿದ್ದ ನಮ್ಮೂರು ನಮ್ಮ ರಂಗು -2026 ಹೋಳಿ ಉತ್ಸವಕ್ಕೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮೇಟಿ ಚಾಲನೆ ನೀಡಿದರು. ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ, ಸಂಘಟನಾ ಕಾರ್ಯದರ್ಶಿ ಸಂಜೀವ ವಾಡಕರ, ಮಹಾಬಳೇಶ್ವರ ಗುಡಗುಂಟಿ, ರಾಜು ಶಿಂಧೆ, ಪತ್ರಕರ್ತ ರವಿ ಹಳ್ಳೂರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮೇಟಿ ಹೇಳಿಕೆ
  • ನಮ್ಮೂರು ನಮ್ಮ ರಂಗು -2026 ಹೋಳಿ ಉತ್ಸವ
  • ಶಾಂತಿ, ಪ್ರೀತಿ, ಸೌಹಾರ್ದಯುತವಾಗಿ ಹಬ್ಬ ಆಚರಿಸಿದಾಗ ಹೋಳಿ ಹಬ್ಬಕ್ಕೆ ಹೊಸ ಮೆರಗು ನೀಡಿದಂತಾಗುತ್ತದೆ
ಬಾಗಲಕೋಟೆ: ದೇಶದಲ್ಲಿಯೇ ಬಾಗಲಕೋಟೆ ಹೋಳಿಯು ಅತ್ಯಂತ ಜನಪ್ರೀಯವಾಗಿದೆ. ಎಲ್ಲರಿಗೂ ಸಂತಸ, ಸಂಭ್ರಮ ಹಂಚುವ ಈ ಹಬ್ಬವನ್ನು ಭಾವೈಕ್ಯತೆಯಿಂದ ಆಚರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮೇಟಿ ಹೇಳಿದರು.
ನಗರದ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹೋಳಿ ಆಚರಣಾ ಸಮಿತಿ ಬಾಗಲಕೋಟೆ ಹಮ್ಮಿಕೊಂಡಿದ್ದ ನಮ್ಮೂರು ನಮ್ಮ ರಂಗು -2026 ಹೋಳಿ ಉತ್ಸವ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಂತಿ, ಪ್ರೀತಿ, ಸೌಹಾರ್ದಯುತವಾಗಿ ಹಬ್ಬ ಆಚರಿಸಿದಾಗ ಹೋಳಿ ಹಬ್ಬಕ್ಕೆ ಹೊಸ ಮೆರಗು ನೀಡಿದಂತಾಗುತ್ತದೆ. ದೇಶದ ಇತಿಹಾಸದಲ್ಲಿಯೇ ಹೋಳಿ ಹಬ್ಬ ಏಕತೆಯ ಸಂಕೇತವಾಗಿದೆ. ಬಾಗಲಕೋಟೆ ಹೋಳಿ ಹಬ್ಬ ಹೊಸ ಸ್ವರೂಪ ನೀಡಲು ನಮ್ಮ ಸರ್ಕಾರದಿಂದ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ, ಸಂಘಟನಾ ಕಾರ್ಯದರ್ಶಿ ಸಂಜೀವ ವಾಡಕರ, ಮಹಾಬಳೇಶ್ವರ ಗುಡಗುಂಟಿ, ರಾಜು ಶಿಂಧೆ, ಪತ್ರಕರ್ತ ರವಿ ಹಳ್ಳೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net