62 ವರ್ಷಗಳನ್ನು ಪೂರೈಸಿರುವ ಕಾಲೇಜು ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ. ಅಂದು ನಡೆಯುವ ಸಮಾರಂಭದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 126 ಪದವಿ, 04 ಸ್ನಾತಕೋತ್ತರ ಪದವಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ 87 ಪದವಿ, 1 ಸ್ನಾತಕೋತ್ತರ ಪದವಿ, ಇ ಆ್ಯಂಡ್ ಇ 61, ಸಿಎಸ್ 103 ಪದವಿ, 1 ಸ್ನಾತಕೋತ್ತರ ಪದವಿ, ಇ ಆ್ಯಂಡ್ ಸಿ 101 ಪದವಿ, ಇಂಡಸ್ಟ್ರಿಯಲ್ ಮತ್ತು ಪ್ರೊಡಕ್ಷನ್ ಇಂಜಿನಿಯರಿಂಗ್ 10, ಐಎಸ್ 91, ಇಲೆಕ್ಟ್ರಾನಿಕ್ಸ್ ಮತ್ತು ಇನ್‌ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ 18, ಆಟೊಮೊಬೈಲ್ ಇಂಜಿನಿಯರಿಂಗ್ 13, ಬಯೋಟೆಕ್ನಾಲಜಿ 18, ಎಐಎಂಎಲ್ 32 ಹಾಗೂ ಎಂಬಿಎ 51 ಸೇರಿ 2023-24ನೇ ಸಾಲಿನ ಒಟ್ಟು 660 ಪದವಿ, 57 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು ಎಂದರು.