ಧರ್ಮ ಸಂಸ್ಕಾರದಿಂದ ಸಂಘಟಿತ ಸಮಾಜ ನಿರ್ಮಾಣ

 ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನ್ಯಾ. ಈರಣ್ಣ ಯಂಡಿಗೇರಿ ಉದ್ಘಾಟಿಸಿದರು.
ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನ್ಯಾ. ಈರಣ್ಣ ಯಂಡಿಗೇರಿ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾಲಿಹಾಳದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ
  • ಧರ್ಮ ಶಿಕ್ಷಣವೇ ಧರ್ಮಾಭಿಮಾನಕ್ಕೆ ದೃಢವಾದ ಅಡಿಪಾಯ
  • ಧರ್ಮ ಸಂಸ್ಕಾರದಿಂದ ಧರ್ಮರಕ್ಷಣೆ ಹಾಗೂ ಸಂಘಟಿತ ಸಮಾಜ ನಿರ್ಮಾಣ ಸಾಧ್ಯ
ಬಾಗಲಕೋಟೆ: ಧರ್ಮ ಶಿಕ್ಷಣವೇ ಧರ್ಮಾಭಿಮಾನಕ್ಕೆ ದೃಢವಾದ ಅಡಿಪಾಯವಾಗಿದೆ. ಧರ್ಮ ಸಂಸ್ಕಾರದಿಂದ ಧರ್ಮರಕ್ಷಣೆ ಹಾಗೂ ಸಂಘಟಿತ ಸಮಾಜ ನಿರ್ಮಾಣ ಸಾಧ್ಯ ಎಂದು ನ್ಯಾಯವಾದಿ ಈರಣ್ಣ ಯಂಡಿಗೇರಿ ಹೇಳಿದರು.
ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಹಿಂದೂ ಸಮಾಜ ಸ್ವಯಂ ಜಾಗೃತರಾಗಿ ಸಂಘಟಿತರಾಗುವುದು ಅತ್ಯಂತ ಅವಶ್ಯಕವಾಗಿದೆ. ಧರ್ಮ ಶಿಕ್ಷಣ ವಿಲ್ಲದವರಲ್ಲಿ ಧರ್ಮದ ಕುರಿತು ಅಭಿಮಾನ ಮೂಡಲಾರದು. ಧರ್ಮಶಿಕ್ಷಣದ ಅಭಾವದಿಂದಾಗಿ ಇಂದು ಸಮಾಜದಲ್ಲಿ ಬ್ರಷ್ಟಾಚಾರ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಧರ್ಮ ಶಿಕ್ಷಣವನ್ನು ಪಡೆದುಕೊಂಡು ಧರ್ಮಾಚರಣೆ ಮಾಡಬೇಕು ಎಂದರು.
ಹಿಂದೂಗಳ ಮೇಲೆ ಅನ್ಯಾಯವಾದಾಗ ಜಾತಿಭೇದ ಬದಿಗಿಟ್ಟು ಸಂಘಟಿತರಾಗಿ ಖಂಡಿಸಬೇಕು. ಹಿಂದೂ ಧರ್ಮಾಭಿಮಾನವನ್ನು ಸಮಾಜದಲ್ಲಿ ಗಟ್ಟಿಯಾಗಿ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಯಮನಪ್ಪ ಭಜಂತ್ರಿ ಮಾತನಾಡಿ, ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ಹಾರಾಡುತ್ತಿರುವ ಕೇಸರಿ ಧ್ವಜವು 500 ವರ್ಷಗಳ ಹೋರಾಟದ ನಂತರ ಲಭಿಸಿದ ವಿಜಯಧ್ವಜವಾಗಿದೆ. ಈ ಧ್ವಜವು 100 ಕೋಟಿ ಹಿಂದೂಗಳ ಶ್ರದ್ಧೆಯ ಧರ್ಮ ಧ್ವಜವಾಗಿದ್ದು, ಅದು ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಹಾಗೂ ಮನೆ ಮನೆಗಳಲ್ಲೂ ಹಾರಾಡಬೇಕಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net