ಪ್ರಾಮಾಣಿಕ ಪರಿಶ್ರಮದಿಂದ ಉನ್ನತ ಭವಿಷ್ಯ ನಿರ್ಮಾಣ

ಮುಧೋಳ ತಾಲೂಕಿನ ರೂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಕೊಂಡಿದ್ದ ಚಿಣ್ಣರ ಹೆಜ್ಜೆ ಬಣ್ಣದ ಗೆಜ್ಜೆ -26 ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಹನಮಂತ ತಿಮ್ಮಾಪೂರ ತಾಪಂ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ , ಚಂದ್ರಶೇಖರ ಶೇಖರ ದೇಸಾಯಿ, ವೆಂಕಣ್ಣ ಬಟಕುರ್ಕಿ.ಸಿ.ಎಲ್.ರೂಗಿ, ಯಲ್ಲಪ್ಪ ಕಳ್ಳಿಮನಿ ಇತರರಿದ್ದರು.
ಮುಧೋಳ ತಾಲೂಕಿನ ರೂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಕೊಂಡಿದ್ದ ಚಿಣ್ಣರ ಹೆಜ್ಜೆ ಬಣ್ಣದ ಗೆಜ್ಜೆ -26 ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಹನಮಂತ ತಿಮ್ಮಾಪೂರ ತಾಪಂ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ , ಚಂದ್ರಶೇಖರ ಶೇಖರ ದೇಸಾಯಿ, ವೆಂಕಣ್ಣ ಬಟಕುರ್ಕಿ.ಸಿ.ಎಲ್.ರೂಗಿ, ಯಲ್ಲಪ್ಪ ಕಳ್ಳಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಥಿಲಗೊಂಡ ಕೊಠಡಿಗಳ ಪುನರ್ ನಿರ್ಮಾಣ
  • ಸಚಿವ ತಿಮ್ಮಾಪುರ ಭರವಸೆ
  • ಚಿಣ್ಣರ ಹೆಜ್ಜೆ ಬಣ್ಣದ ಗೆಜ್ಜೆ -26ಕ್ಕೆ ಚಾಲನೆ
ಮುಧೋಳ: ಸರ್ಕಾರಿ ಶಾಲೆಗಳು ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಸಮಾನವಾಗಿ ಗುಣಮಟ್ಟದ ಶಿಕ್ಷಣ ನೀಡುತ್ತಿವೆ ಎಂದರು. ಶಾಲೆಯ ಭೌತಿಕ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಶಿಥಿಲಗೊಂಡಿರುವ ಮೂರು ಕೊಠಡಿಗಳನ್ನು ತಕ್ಷಣವೇ ಪುನರ್ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಪೂರ ಭರವಸೆ ನೀಡಿದರು.
ತಾಲೂಕಿನ ರೂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಚಿಣ್ಣರ ಹೆಜ್ಜೆ ಬಣ್ಣದ ಗೆಜ್ಜೆ -26 ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿದ ಅವರು, ಸರ್ಕಾರಿ ಶಾಲೆಗಳು ಕೇವಲ ಅಕ್ಷರಜ್ಞಾನ ನೀಡುವ ಕೇಂದ್ರಗಳಲ್ಲ, ಮಕ್ಕಳಿಗೆ ಸಂಸ್ಕಾರ ಮತ್ತು ಶಿಸ್ತಿನ ಮೌಲ್ಯಗಳನ್ನು ಬೋಽಸುವ ತಳಹದಿಗಳಾಗಿವೆ. ಪರಿಶ್ರಮ ಮತ್ತು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿದರೆ ಉನ್ನತ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಾಹಿತಿ ಡಾ. ವೆಂಕಟೇಶ ಗುಡೆಪ್ಪನವರ ಶಾಲಾ ದಿನಗಳ ಮಹತ್ವವನ್ನು ವಿವರಿಸಿ, ಗುರಿ ಸ್ಪಷ್ಟವಾಗಿದ್ದರೆ ಜೀವನದಲ್ಲಿ ಸಾಧನೆ ಸಾಧ್ಯವೆಂದರು. ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಕಳ್ಳಿಮನಿ ಅಧ್ಯಕ್ಷತೆ ವಹಿಸಿ, ಶಾಲೆಯ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಶಶಿ ಟ್ರಸ್ಟ್ ಅಧ್ಯಕ್ಷ ಸಾಹಿತಿ ಚಂದ್ರಶೇಖರ ದೇಸಾಯಿ, ಮುಖ್ಯ ಶಿಕ್ಷಕ ಸಿ.ಎಲ್ ರೂಗಿ, ಹನಮಂತ ತಿಮ್ಮಾಪೂರ ಮಾತನಾಡಿದರು.
ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಣ್ಣ ಗಿಡ್ಡಪ್ಪನವರ, ತಾಪಂ ಮಾಜಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ,ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಪಿಕೆಪಿಎಸ್ ನಿರ್ದೇಶಕ ಬಸವರಾಜ ಬಿಸರಡ್ಡಿ, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಸತ್ಯಪ್ಪ ಬಾಡಗಿ, ಅಂಬಿಗರ ಸಮಾಜದ ತಾಲೂಕು ಅಧ್ಯಕ್ಷ ಸದಾಶಿವ ಹೊಸಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net