ಬಾದಾಮಿ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್ ಸಂಚಾಲಿತ ಚಾಲುಕ್ಯ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಹಿಂದು ಪರಿಷತ್ ಪ್ರಾಂತ ಸೇವಾ ಪ್ರಮುಖ ಶಿವುಕುಮಾರ ಮೇಲ್ನಾಡ ಮಾತನಾಡಿದರು. ವೆಂಕಟೇಶ ಕೆರಿ, ಕೃಷ್ಣಾ ರಾಜೂರ, ಪಿ.ವೀರಣ್ಣ, ಶಿವಾನಂದ ಹಾದಿಮನಿ, ಬೇಲೂರಪ್ಪ ವಡ್ಡರ, ಕುಮಾರ ಪವಾಡಶೆಟ್ಟಿ, ಪಿ.ಎಲ್.ನಾಶಿ ಇದ್ದರು.
ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಶಾಲೆಗೆ, ತಂದೆ ತಾಯಿಗಳಿಗೆ ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು.
ಬಾದಾಮಿ: ಸಂಘ ಸಂಸ್ಥೆಗಳು ನೀಡಿರುವ ಈ ಕಲಿಕಾ ಸಾಮಗ್ರಿಗಳನ್ನು ಪಡೆದು ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಶಾಲೆಗೆ, ತಂದೆ ತಾಯಿಗಳಿಗೆ ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸೇವಾ ಪ್ರಮುಖ ಶಿವುಕುಮಾರ ಮೇಲ್ನಾಡ ಹೇಳಿದರು.
ಇಲ್ಲಿನ ರಂಗನಾಥ ನಗರದ ವಿಶ್ವ ಹಿಂದು ಪರಿಷತ್ ಸಂಚಾಲಿತ ಚಾಲುಕ್ಯ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬೆಂಗಳೂರಿನ ಶಕಿಲಾ ಸುರೇಶ ಶೆಟ್ಟಿ, ಎಸ್‌ಎಸ್‌ಫೌಂಡೇಶನ್, ಸೂರ್ಯ ಸರ್ವಿಸ್ ಫೌಂಡೇಶನ್ ಸಹಯೋಗದಲ್ಲಿ ನೀಡಿದ ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ಮಾತನಾಡಿದರು.
ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.