ರಕ್ತದಾನ ಮಾನವೀಯತೆಯ ಪ್ರತೀಕ

ರಬಕವಿಯ ಹಜಾರೆ ಬಜಾರ್‌ನಲ್ಲಿರುವ ಚಂದುಕಾಕ ಸರಾಫ್ ಜ್ಯುವೆಲ್ಸ್ ಶಾಖೆಯಲ್ಲಿ ದ್ವಿಶತಮಾನೋತ್ಸವ ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಹಜಾರೆ ಫೌಂಡೇಷನ್ ಅಧ್ಯಕ್ಷ ಸತೀಶ್ ಹಜಾರೆ ಚಾಲನೆ ನೀಡಿದರು. ಶ್ರೇಣಿಕ್ ಶೆಟ್ಟಿ, ದೀಪಕ್ ರಾಯನಾಡೆ ಇತರರು ಉಪಸ್ಥಿತರಿದ್ದರು.
ರಬಕವಿಯ ಹಜಾರೆ ಬಜಾರ್‌ನಲ್ಲಿರುವ ಚಂದುಕಾಕ ಸರಾಫ್ ಜ್ಯುವೆಲ್ಸ್ ಶಾಖೆಯಲ್ಲಿ ದ್ವಿಶತಮಾನೋತ್ಸವ ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಹಜಾರೆ ಫೌಂಡೇಷನ್ ಅಧ್ಯಕ್ಷ ಸತೀಶ್ ಹಜಾರೆ ಚಾಲನೆ ನೀಡಿದರು. ಶ್ರೇಣಿಕ್ ಶೆಟ್ಟಿ, ದೀಪಕ್ ರಾಯನಾಡೆ ಇತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಜಾರೆ ಫೌಂಡೇಷನ್ ಅಧ್ಯಕ್ಷ ಸತೀಶ್ ಅಭಿಮತ
  • ಚಂದುಕಾಕ ಸರಾಫ್ ಜ್ಯುವೆಲ್ಸ್ ದ್ವಿಶತಮಾನೋತ್ಸವ

ರಬಕವಿ/ಬನಹಟ್ಟಿ: ರಕ್ತದಾನ ಜೀವದಾನಕ್ಕೆ ಸಮಾನವಾದ ಶ್ರೇಷ್ಠ ಸೇವೆಯಾಗಿದ್ದು, ಯುವಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಮಾನವೀಯ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಹಜಾರೆ ಫೌಂಡೇಷನ್ ಅಧ್ಯಕ್ಷ ಸತೀಶ್ ಹಜಾರೆ ಹೇಳಿದರು.

ರಬಕವಿಯ ಹಜಾರೆ ಬಜಾರ್‌ನಲ್ಲಿ ಚಂದುಕಾಕ ಸರಾಫ್ ಜ್ಯುವೆಲ್ಸ್ನ ದ್ವಿಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಿರ್ಗತಿಕ ರೋಗಿಗಳಿಗೆ ಜೀವದಾನ ನೀಡುವ ಉದಾತ್ತ ಉದ್ದೇಶದಿಂದ ಆಯೋಜಿಸಿದ್ದ ಶಿಬಿರಕ್ಕೆ ನಾಗರಿಕರು, ಗ್ರಾಹಕರು ಹಾಗೂ ಯುವಕರು ಉತ್ತಮ ಸ್ಪಂದನೆ ನೀಡಿದರು. ಅನೇಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಸಮಾಜಮುಖಿ ಕಾರ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದು, ಸಂತಸ ತಂದಿದೆ ಎಂದರು.
ಅಥಣಿ ಕ್ಲಸ್ಟರ್ ವ್ಯವಸ್ಥಾಪಕ ದೀಪಕ್ ರಾಯನಾಡೆ ಮಾತನಾಡಿ, ಚಂದುಕಾಕ ಸರಾಫ್ ಜ್ಯುವೆಲ್ಸ್ ಎರಡು ಶತಮಾನಗಳಿಂದ ಸಮಾಜಮುಖಿ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಾ ಗ್ರಾಹಕರ ವಿಶ್ವಾಸ ಗಳಿಸಿರುವ ಸಂಸ್ಥೆಯಾಗಿದೆ. ರಕ್ತದಾನದಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಅಗತ್ಯವಿರುವ ರೋಗಿಗಳಿಗೆ ನೆರವಾಗುವ ಮಹತ್ವದ ಕಾರ್ಯಗಳಾಗಿವೆ ಎಂದು ಹೇಳಿದರು.
ಶಾಖಾ ವ್ಯವಸ್ಥಾಪಕ ಶ್ರೇಣಿಕ್ ಶೆಟ್ಟಿ, ಡಾ. ಅಭಯ ಯಂಡೋಳಿ, ಡಾ. ಅನಂತಮತಿ ಯಂಡೋಳಿ, ಡಾ. ಎಸ್.ವಿ. ಸಾಬೋಜಿ, ಸಂಸ್ಥೆಯ ಸಿಬ್ಬಂದಿ, ಗ್ರಾಹಕರು ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net