ಬಿಜೆಪಿ ಹಿಂದೂ ಕಾರ್ಯಕರ್ತರ ಪರ ನಿಲ್ಲಲಿದೆ

 ಬಾಗಲಕೋಟೆ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ ಬಾರಕೇರ ಅವರ ಆರೋಗ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಚಾರಿಸಿದರು. ವಿ.ಪ. ಸದಸ್ಯರಾದ ಪಿ.ಎಚ್. ಪೂಜಾರ, ಹನುಮಂತ ನಿರಾಣಿ, ವಿ.ಪ. ಮಾಜಿ ಸದಸ್ಯರಾದ ಎಂ.ಡಿ. ಲಕ್ಷ್ಮೀನಾರಾಯಣ, ಅರುಣ ಶಹಾಪುರ ಇತರರಿದ್ದರು.
ಬಾಗಲಕೋಟೆ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ ಬಾರಕೇರ ಅವರ ಆರೋಗ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಚಾರಿಸಿದರು. ವಿ.ಪ. ಸದಸ್ಯರಾದ ಪಿ.ಎಚ್. ಪೂಜಾರ, ಹನುಮಂತ ನಿರಾಣಿ, ವಿ.ಪ. ಮಾಜಿ ಸದಸ್ಯರಾದ ಎಂ.ಡಿ. ಲಕ್ಷ್ಮೀನಾರಾಯಣ, ಅರುಣ ಶಹಾಪುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತಯಾಚನೆ
  • ಗಾಯಗೊಂಡವರ ಮನೆಗೆ ಭೇಟಿ
  • ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ವೋಟ್ ಬ್ಯಾಂಕ್ ತುಷ್ಟೀಕರಣದಿಂದ ಆದ್ಯತೆಯಾಗಿದ್ದು, ಹಿಂದೂ ಕಾರ್ಯಕರ್ತರ ಪರವಾಗಿ ಬಿಜೆಪಿ ಸದಾ ನಿಲ್ಲಲಿದೆ
ಬಾಗಲಕೋಟೆ : ಕಳೆದ ತಿಂಗಳು ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಮತ್ತು ಗಲಭೆಗೆ ಸಂಬಂಧಪಟ್ಟಂತೆ ಹಿಂದೂ ಕಾರ್ಯಕರ್ತರ ಪೋಷಕರನ್ನು ಕಿಲ್ಲಾಗಲ್ಲಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಂಗಳವಾರ ಭೇಟಿ ಮಾಡಿದರು.
ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಶೋಕ ಬಾರಕೇರ ಅವರ ಆರೋಗ್ಯ ವಿಚಾರಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ವೋಟ್ ಬ್ಯಾಂಕ್ ತುಷ್ಟೀಕರಣದಿಂದ ಆದ್ಯತೆಯಾಗಿದ್ದು, ಹಿಂದೂ ಕಾರ್ಯಕರ್ತರ ಪರವಾಗಿ ಬಿಜೆಪಿ ಸದಾ ನಿಲ್ಲಲಿದೆ ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಶಾಸಕರಾದ ಶೈಲೇಂದ್ರ ಬೆಲ್ದಾಳೆ, ವಿ.ಪ. ಸದಸ್ಯರಾದ ಪಿ.ಎಚ್. ಪೂಜಾರ, ಹನುಮಂತ ನಿರಾಣಿ, ವಿ.ಪ. ಮಾಜಿ ಸದಸ್ಯರಾದ ಎಂ.ಡಿ. ಲಕ್ಷ್ಮೀನಾರಾಯಣ, ಅರುಣ ಶಹಾಪುರ, ಪಕ್ಷದ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಸೇರಿ ಉಪಸ್ಥಿತರಿದ್ದರು.
"

ಕಾಂಗ್ರೆಸ್ ಅಭಿವೃದ್ಧಿ ಸಹಿಸುವುದಿಲ್ಲ. ನೀಚ ಬುದ್ಧಿಯಿಂದ ಆಡಳಿತ ನಡೆಸುತ್ತದೆ. ಬಿಜೆಪಿ ಅವಧಿಯಲ್ಲಿ ಬಾಗಲಕೋಟೆಗೆ ಬುಡಾ, ಆರ್‌ಟಿಒ ಡ್ರಾವಿಂಗ್ ಟ್ರ್ಯಾಕ್, ನಗರಸಭೆ ಮೇಲ್ದರ್ಜೆಗೆ ಏರಿಸಲಾಗಿದೆ. ಜಿಲ್ಲಾಡಳಿತ ಭವನಕ್ಕೆ ಹೊಸ ಸ್ವರೂಪ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಗೆಲವು ತಡೆಯಲು ಯಾರಿಂದ ಸಾಧ್ಯವಿಲ್ಲ.
-ಪಿ.ಎಚ್. ಪೂಜಾರ ವಿ.ಪ. ಸದಸ್ಯ

"

ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಅಭಿವೃದ್ಧಿ, ಬಿಜೆಪಿ ಪರವಾದ ಅಲೆ ಕಂಡು ಸೋಲಿನ ಭಯ ಕಾಡುತ್ತಿದೆ. ಇದರಿಂದ ಅರ್ಥವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ವೀರಣ್ಣ ಚರಂತಿಮಠರ ಗೆಲವು ಪಕ್ಕಾ.
-ಹನುಮಂತ ನಿರಾಣಿ ವಿ.ಪ. ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net