ಬಿಜೆಪಿ ಅಧಿಕಾರದಲ್ಲಿದ್ದಾಗ ಸಾರಿಗೆ ಇಲಾಖೆಯಿಂದ ಒಂದೇ ಒಂದು ಬಸ್ ಖರೀದಿಸಿಲ್ಲ. ಸರಿಯಾಗಿ ವೇತನ ನೀಡುತ್ತಿರಲಿಲ್ಲ. ಸಿಬ್ಬಂದಿಗಳ ನೇಮಕಾತಿ ಮಾಡಲಿಲ್ಲ. 4 ಸಾವಿರ ಕೋಟಿ ರೂ. ಸಾಲ ಮಾಡಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 7800 ಬಸ್‌ಗಳ ಖರೀದಿಗೆ ಒಪ್ಪಿಗೆ ಸೂಚಿಸಿದ್ದು, ಈಗಾಗಗಲೇ 5080 ಬಸ್‌ಗಳು ಬಂದಿವೆ. ಹೊಸದಾಗಿ 9000, ಅನುಕಂಪ ಆಧಾರದ ಮೇಲೆ 1000 ಜನರಿಗೆ ವಿವಿಧ ಸಾರಿಗೆ ನಿಗಮಗಳಲ್ಲಿ ಹುದ್ದೆಗಳ ಭರ್ತಿ ಮಾಡಿದ್ದೇವೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಸಾಲ ರಾಮಯ್ಯ ಅಂತ ಪ್ರಚಾರ ಮಾಡುವುದು ತರವಲ್ಲ. ದೇಶದ ಮೇಲೆ ನಾಲ್ಕು ಲಕ್ಷ ಕೋಟಿ ರೂ. ಸಾಲ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ರಂಪ್ ಹೇಳಿದ ಹಾಗೆ ಕುಣಿಯುತ್ತಾರೆ. ವಿಶ್ವಗುರು ಅಲ್ಲ. ವಿಶ್ವ ವಿಖ್ಯಾತ ಸಾಲಗಾರ ಅಂತ ಟೀಕಿಸಿದರು.