ಹಿಂದುತ್ವದಿಂದ ಬಿಜೆಪಿ ಜೀವಂತ

ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹಿಂದು ಮುಖಂಡ ಉಮೇಶ ಆಲಮೇಲಕರ ಮಾತನಾಡಿದರು. ಗದಿಗೆಪ್ಪ ಧಾರವಾಡ, ಲಕ್ಷ್ಮಣ ಬಂಕಿ, ಉಮೇಶ ಗೌಳಿ ಮತ್ತಿತರರು ಚಿತ್ರದಲ್ಲಿದ್ದಾರೆ.
ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಹಿಂದು ಮುಖಂಡ ಉಮೇಶ ಆಲಮೇಲಕರ ಮಾತನಾಡಿದರು. ಗದಿಗೆಪ್ಪ ಧಾರವಾಡ, ಲಕ್ಷ್ಮಣ ಬಂಕಿ, ಉಮೇಶ ಗೌಳಿ ಮತ್ತಿತರರು ಚಿತ್ರದಲ್ಲಿದ್ದಾರೆ.
Published on
ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಮಖಂಡಿ ಕ್ಷೇತ್ರದಲ್ಲಿ ಪಕ್ಷದ ಮೂಲ ಸಿದ್ಧಾಂತಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಜಮಖಂಡಿ ಕ್ಷೇತ್ರದ ಮೂಲ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು, ಮುಖಂಡರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರೂ, ಜಿಲ್ಲಾಧ್ಯಕ್ಷರಾಗಲಿ ಅಥವಾ ಹಿರಿಯ ನಾಯಕರಾಗಲಿ ಸೌಜನ್ಯಕ್ಕೂ ಅವರನ್ನು ಸಂಪರ್ಕಿಸಿ ಸಮಸ್ಯೆ ಆಲಿಸುವ ಪ್ರಯತ್ನ ಮಾಡಿಲ್ಲ.
ಬೇರೆ ಪಕ್ಷಗಳಿಂದ ಬಂದವರಿಂದಾಗಿ ಮೂಲ ಬಿಜೆಪಿ ಕಾರ್ಯಕರ್ತರನ್ನು ಹೊರಹಾಕುವ ತಂತ್ರ ನಡೆಯುತ್ತಿದೆ. ಸಿದ್ಧಾಂತಗಳನ್ನು ಗಾಳಿಗೆ ತೂರಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗುತ್ತಿದೆ.
ಈಗಿನ ಜಿಲ್ಲಾಧ್ಯಕ್ಷರಿಗೆ ಗಂಭೀರ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಇಲ್ಲ. ಸಮಸ್ಯೆಗಳ ಬಗ್ಗೆ ಹೇಳಿದರೆ ನಕ್ಕು ಸುಮ್ಮನಾಗುತ್ತಾರೆ ಎಂದು ಟೀಕಿಸಿದರು.
ಜಮಖಂಡಿಗೆ ಭೇಟಿ ನೀಡುತ್ತಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಲ್ಲಿನ ಗೊಂದಲಗಳನ್ನು ಬಗೆಹರಿಸಬೇಕು. ಮೂಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾರ್ಯಕರ್ತರ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಜಯೇಂದ್ರ ಅವರು ನಾಯಕರಾಗಿ ಬೆಳೆಯಬೇಕಾದರೆ ಮೊದಲು ಕಾರ್ಯಕರ್ತರನ್ನು ಗೌರವಿಸುವುದನ್ನು ಕಲಿಯಬೇಕು. ಜಮಖಂಡಿ ಬಿಜೆಪಿಯಲ್ಲಿ ಯಾವುದು ಸರಿಯಿಲ್ಲ, ಈ ಕೂಡಲೇ ಹೈಕಮಾಂಡ್ ಮಧ್ಯಪ್ರವೇಶಿಸಬೇಕು, ಎಂದು ಅವರು ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net