ಪ್ರಚಾರದ ಅಖಾಡಕ್ಕಿಳಿದ ಬಿಜೆಪಿ ಮುಖಂಡರು

 ಬಿಕೆಟಿ-24-15-ಎ  ಬಾಗಲಕೋಟೆ ನಗರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮನೆ ಮನೆಗೆ ತೆರಳಿ ಮತಯಾಚಿಸಿದರು.
ಬಿಕೆಟಿ-24-15-ಎ ಬಾಗಲಕೋಟೆ ನಗರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮನೆ ಮನೆಗೆ ತೆರಳಿ ಮತಯಾಚಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋವಿಂದ ಕಾರಜೋಳ, ಎನ್. ಮಹೇಶ, ಚರಂತಿಮಠ ಮತಬೇಟೆ
  • ಮನೆ ಮನೆಗೆ ತೆರಳಿ ಮತಯಾಚನೆ
  • ಬಾಗಲಕೋಟೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಮಂಗಳವಾರ ಕ್ಷೇತ್ರದ ವಿವಿಧೆಡೆ ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಎನ್. ಮಹೇಶ್, ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ, ಅಭ್ಯರ್ಥಿ ವೀರಣ್ಣ ಚರಂತಿಮಠ ಹಾಗೂ ಅವರ ಕುಟುಂಬ ಸದಸ್ಯರು ಮತಯಾಚನೆ ನಡೆಸಿದರು.
ನವನಗರದ 63ನೇ ಸೆಕ್ಟರ್‌ನಲ್ಲಿ ಎಂ.ಡಿ. ಲಕ್ಷ್ಮೀ ನಾರಾಯಣ, ಬೇವೂರ ಗ್ರಾಮದಲ್ಲಿ ಸಂಸದ ಗೋವಿಂದ ಕಾರಜೋಳ, ಎನ್. ಮಹೇಶ್, ನವನಗರದ 21ನೇ ವಾರ್ಡ್‌ನ ರಾಜೀವ್‌ಗಾಂಧಿ ಕಾಲನಿಯಲ್ಲಿ ನವೀನ ಚರಂತಿಮಠ, ನಗರದ ವಾರ್ಡ್ ನಂಬರ್ 5,6 ಮತ್ತು 9ನೇ ವಾರ್ಡ್‌ನಲ್ಲಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮತಯಾಚಿಸಿದರು.
ಬೇವೂರ ಗ್ರಾಮದ ಎಸ್ಸಿ ಕಾಲನಿಯಲ್ಲಿ ಸಂಸದ ಗೋವಿಂದ ಕಾರಜೋಳ ಚರಂತಿಮಠ ಪರವಾಗಿ ಮತಯಾಚನೆ ನಡೆಸಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.
ವೀರಣ್ಣ ಚರಂತಿಮಠ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸುವವರೆಗೂ ವಿಶ್ರಮಿಸುವುದಿಲ್ಲ. ಪ್ರಾಮಾಣಿಕ ನಡೆ, ನುಡಿಯ ಬಿಜೆಪಿ ಅಭ್ಯರ್ಥಿಗೆ ಮತದಾನ ಮಾಡುವಂತೆ ಎಂ.ಡಿ. ಲಕ್ಷ್ಮೀ ನಾರಾಯಣ ಅವರು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಚರಂತಿಮಠ ಅವರ ಧರ್ಮಪತ್ನಿ ರಾಜೇಶ್ವರಿ ಚರಂತಿಮಠ ಅವರು, ನವನಗರದ ಸತ್ಯಬೋಧರಾಯರ ಮಠದಲ್ಲಿ ಪೂಜೆ ಸಲ್ಲಿಸಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ಬೇವೂರ ಗ್ರಾಮದಲ್ಲಿ ಪ್ರಚಾರ ನಡೆಸಿದ ಮಾಜಿ ಸಚಿವ ಎನ್. ಮಹೇಶ ಅವರು, ರಾಜ್ಯ ಕಾಂಗ್ರಸ್ ಸರ್ಕಾರ ಮಿಸಲಾತಿಯಲ್ಲಿ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಇಂಥ ಸರ್ಕಾರವನ್ನು ಕಿತ್ತೆಸೆಯಬೇಕೆಂದರು.
ಬೆಳಗ್ಗೆ ಬಾಗಲಕೋಟೆಯಲ್ಲಿ ಮೋಟಗಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ವಾರ್ಡ್ ನಂಬರ್ 5, 6 ಹಾಗೂ 9ರಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನರಲ್ಲಿ ಉತ್ಸಾಹ ಹೆಚ್ಚಿದ್ದು, ಬಿಜೆಪಿ ಗೆಲುವು ಪಡೆಯಲಿದೆ. ಕಾಂಗ್ರೆಸ್ ಪರವಾಗಿ ಸಿಎಂ ಪ್ರಚಾರಕ್ಕೆ ಬಂದರೂ ಮತದಾನ ಮಾಡುವವರು ಕ್ಷೇತ್ರದ ಜನರು. ಮತದಾರರು ಬಿಜೆಪಿ ಪರವಾಗಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net