ವೈಜ್ಞಾನಿಕ ಕೃಷಿಯಿಂದ ಉತ್ತಮ ಇಳುವರಿ

 ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದ ವಿಶ್ವ ಮಣ್ಣು ದಿನ ಕಾರ್ಯಕ್ರಮದಲ್ಲಿ ಕಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮಹಾದೇವ ರಾಮಪ್ಪ ಗೌರನ್ನವರ ಮಾತನಾಡಿದರು. ಕೆ.ಎ. ಮಖಂಡಿ, ಭರತೇಶ ಬತಗಿ, ಸಿದ್ದು ಮಾಳಿ ಇತರರು ಇದ್ದರು.
ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಡೆದ ವಿಶ್ವ ಮಣ್ಣು ದಿನ ಕಾರ್ಯಕ್ರಮದಲ್ಲಿ ಕಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮಹಾದೇವ ರಾಮಪ್ಪ ಗೌರನ್ನವರ ಮಾತನಾಡಿದರು. ಕೆ.ಎ. ಮಖಂಡಿ, ಭರತೇಶ ಬತಗಿ, ಸಿದ್ದು ಮಾಳಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮಹಾದೇವ ರಾಮಪ್ಪ ಗೌರನ್ನವರ ಮಾಹಿತಿ
  • ವಿಶ್ವ ಮಣ್ಣು ದಿನ ಆಚರಣೆ
  • ರಾಸಾಯನಿಕಗಳ ಬಳಕೆ ಕಡಿತಗೊಳಿಸಿ ತಿಪ್ಪೆಗೊಬ್ಬರ, ಹಸಿರೆಲೆಗೊಬ್ಬರ, ಜೈವಿಕಗೊಬ್ಬರ, ಸಾವಯವ ಗೊಬ್ಬರಗಳ ಬಳಕೆ ಹೆಚ್ಚಾಗಬೇಕು
ಜಮಖಂಡಿ: ಕೃಷಿಯಲ್ಲಿ ಯಶಸ್ಸು ಪಡೆಯಬೇಕೆಂದರೆ ವೈಜ್ಞಾನಿಕವಾಗಿ ಕೃಷಿ ಕೈಗೊಳ್ಳಬೇಕು ಎಂದು ಸನಾಳ ಗ್ರಾಮದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಮಹಾದೇವ ರಾಮಪ್ಪ ಗೌರನ್ನವರ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಗುರುವಾರ ಕೃಷಿ ಇಲಾಖೆ ಪಾರಾದೀಪ ಫಾಸ್ಪೇಟ್ ಸಂಸ್ಥೆ, ಐಡಿಎ್ ಸಂಸ್ಥೆಯ ಆಶ್ರಯದಲ್ಲಿ ವಿಶ್ವ ಮಣ್ಣು ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಣ್ಣಿನ ಫಲವತ್ತತೆ, ನೀರು ನಿರ್ವಹಣೆ, ಸಮಗ್ರ ಪೋಷಕಾಂಶಗಳ ಬಳಕೆ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆ ಮಾಡುವುದರ ಮೂಲಕ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ ಚಟುವಟಿಕೆಗಳನ್ನು ಅಳವಡಿಸಿಕೊಂಡು ಸುಸ್ಥಿರ ಕೃಷಿ ಅಳವಡಿಸಿಕೊಳ್ಳಬೇಕು ಎಂದರು.
ರಾಸಾಯನಿಕಗಳ ಬಳಕೆ ಕಡಿತಗೊಳಿಸಿ ತಿಪ್ಪೆಗೊಬ್ಬರ, ಹಸಿರೆಲೆಗೊಬ್ಬರ, ಜೈವಿಕಗೊಬ್ಬರ, ಸಾವಯವ ಗೊಬ್ಬರಗಳ ಬಳಕೆ ಹೆಚ್ಚಾಗಬೇಕು. ಅದರೊಂದಿಗೆ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಆಡು, ಕುರಿ ಸಾಕಾಣಿಕೆ ಹಾಗೂ ಎರೆಹುಳು ಸಾಕಾಣಿಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಜಕುಮಾರ ಕುಚನೂರ ಮಾತನಾಡಿ, ಇಲಾಖೆಯಲ್ಲಿ ಸಹಾಯ ಧನದಡಿ ಲಘು ಪೋಷಕಾಂಶಗಳನ್ನು ವಿತರಣೆ ಮಾಡುತ್ತಿದ್ದೇವೆ. ಸಮಗ್ರ ಪೋಷಕಾಂಶಗಳ ಬಳಕೆಗೆ ಹೆಚ್ಚು ಆದ್ಯತೆ ಕೊಟ್ಟು, ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆಗಳನ್ನು ಬೆಳೆದು ಆರ್ಥಿಕತೆ ಹೆಚ್ಚಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬನೆಯಿಂದ ಸರಾಸರಿ ಇಳುವರಿ ಕುಂಠಿತಗೊಂಡಿದೆ. ಸವಳು-ಜವಳು ಸಮಸ್ಯೆ ಇರುವ ಜಮೀನುಗಳ ನಿರ್ವಹಣೆ ಮಾಡಿದಲ್ಲಿ ಪುನಃ ಉತ್ತಮ ಬೆಳೆ ಬೆಳೆಯಬಹುದಾಗಿದೆ ಎಂದು ಹೇಳಿದರು.
ಆತ್ಮ ಯೋಜನೆ ತಾಲೂಕಾ ತಾಂತ್ರಿಕ ವ್ಯವಸ್ಥಾಪಕ ಕೆ.ಎ. ಜಮಖಂಡಿ ಮಣ್ಣು ಮಾದರಿ ಸಂಗ್ರಹಣೆ ಪದ್ಧತಿ, ಲಘು ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.
ಪಾರಾದೀಪ್ ಫಾಸ್ಪೇಟ್ ಲಿಮಿಟೆಡ್ ಕಂಪನಿಯ ಅಧಿಕಾರಿ ಭರತೇಶ ಬತಗಿ, ಐ.ಡಿ.ಎ್ ಸಂಸ್ಥೆಯ ಸಿದ್ದು ಮಾಳಿ, ಪ್ರಗತಿಪರ ರೈತರಾದ ಗಿರಿಮಲ್ಲ ನ್ಯಾಮಗೌಡ, ಈಶ್ವರ ಮಟ್ಟಿ, ಹನಮಂತ ಮರನೂರ, ನಿಂಗಪ್ಪ ತೇರದಾಳ, ಅನೀಲ ಮಿರ್ಜಿ ನಿರೂಪಿಸಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರವೀಣ ಕೊಪ್ಪದ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net